ಹಂಪಿ : ಜಿ20 ಶೆರ್ಪಾ ಶೃಂಗಸಭೆಗೆ ತೆರೆ; ಭಾರತದ ಅಧ್ಯಕ್ಷತೆಗೆ ಮುಕುಟ ಪ್ರಾಯ
Team Udayavani, Jul 17, 2023, 7:00 AM IST
ಹೊಸಪೇಟೆ: ವಿಶ್ವ ಪ್ರಸಿದ್ಧ ಹಂಪಿಯಲ್ಲಿ ನಡೆದ ಜಿ20 ಶೆರ್ಪಾ ಮೂರನೇ ಸಭೆಯಲ್ಲಿ ಪ್ರತಿಪಾದಿಸಿದಂತೆ 55 ರಾಷ್ಟ್ರಗಳನ್ನು ಒಳಗೊಂಡ ಆಫ್ರಿಕನ್ ಯೂನಿಯನ್ ಒಂದೊಮ್ಮೆ ಸೇರ್ಪಡೆಗೊಂಡಲ್ಲಿ ಜಿ 20 ವೇದಿಕೆಯಲ್ಲಿ ಉದಯೋನ್ಮುಖ ದೇಶಗಳು ಸಹಿತ ಜಾಗತಿಕ ದಕ್ಷಿಣದ ಧ್ವನಿಗಳು ಮತ್ತಷ್ಟು ಬಲಗೊಳ್ಳುವ ಲಕ್ಷಣಗಳು ಗೋಚರಗೊಂಡಿವೆ.
ಭಾರತದ ಜಿ20 ಶೆರ್ಪಾ ಅಮಿತಾಭ್ ಕಾಂತ್ ಅಧ್ಯಕ್ಷತೆಯಲ್ಲಿ ಹಂಪಿ ಖಾಸಗಿ ರೆಸಾರ್ಟ್‌ನಲ್ಲಿ ಜಿ20 ಸದಸ್ಯರು, ಆಹ್ವಾನಿತ ದೇಶಗಳು, ವಿವಿಧ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳ 120ಕ್ಕೂ ಹೆಚ್ಚು ಪ್ರತಿನಿ ಧಿಗಳು ಭಾಗವಹಿಸಿದ್ದ ಮೂರನೇ ಜಿ20 ಶೆರ್ಪಾ ಸಭೆಯಲ್ಲಿ ಈ ವಿಷಯ ಪ್ರಸ್ತಾವಕ್ಕೆ ಬಂದಿದ್ದು, ವಿವಿಧ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿರುವುದು ಭಾರತದ ಅಧ್ಯಕ್ಷತೆಗೆ ಮುಕುಟ ಪ್ರಾಯವಾಗಿದೆ.
ಸೆಪ್ಟಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಹಲವು ಮಹತ್ವಪೂರ್ಣ ನಿರ್ಣಯಗಳು ಹಾಗೂ ದಿಲ್ಲಿ ನಾಯಕರ ಘೋಷಣೆಗಳ ಜಂಟಿಯಾಗಿ ಕರಡನ್ನು ರಚಿಸಲು ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಹಂಪಿ ಸಾಕ್ಷಿಯಾಯಿತು.
ಸುಸ್ಥಿರ ಅಭಿವೃದ್ಧಿಗೆ ಆದ್ಯತೆ, ಒತ್ತಡದ ಸವಾಲುಗಳನ್ನು ನಿಭಾಯಿಸುವ ಬದ್ಧತೆ, ಸುಸ್ಥಿರ ಅಭಿವೃದ್ಧಿಯ ಗುರಿ, ಹಸುರೀಕರಣ ಬಹುಪಕ್ಷೀಯ ಅಭಿ ವೃದ್ಧಿ ಬ್ಯಾಂಕ್‌ಗಳ ಸುಧಾರಣೆ, ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ, ಲಿಂಗ ಸಮಾನತೆ ಸಹಿತ ಆದ್ಯತೆಗಳ 6 ಅಂಶಗಳು ಕರಡು ಪ್ರತಿ ಯಲ್ಲಿ ದಾಖಲಾದವು. ಭಾರತೀಯ ಅಧ್ಯಕ್ಷತೆಯ ಮುಂದಾಳತ್ವದಲ್ಲಿ ಜಿ 20 ಸದಸ್ಯರು ಪರಿವರ್ತನಾತ್ಮಕ, ಕ್ರಿಯಾ ಆಧಾರಿತ ಉಪಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ 3 ದಿನಗಳ ಸಮಾಲೋಚನೆ ಮಹತ್ವ ಪಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.