ಶೃಂಗೇರಿ ಶಾರದಾಂಬೆಗೆ ಹಂಸವಾಹನ ಅಲಂಕಾರ
Team Udayavani, Sep 30, 2019, 3:05 AM IST
ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿದ್ದು, ನವರಾತ್ರಿಯ ಮೊದಲ ದಿನವಾದ ಭಾನುವಾರ ಶಾರದಾಂಬೆಗೆ ಹಂಸವಾಹನಾಲಂಕಾರ ಮಾಡಲಾಗಿತ್ತು. ತಾಯಿ ಶಾರದೆ ಕೈಯಲ್ಲಿ ಕಮಂಡಲ, ಪುಸ್ತಕ, ಪಾಶ, ಅಕ್ಷರಮಾಲೆ ಮತ್ತು ಚಿನ್ಮುದ್ರೆ ಧರಿಸಿ, ಹಂಸವಾಹನರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು.
ಶಾರದಾ ಪ್ರತಿಷ್ಠೆ: ಶಾರದಾ ಪ್ರತಿಷ್ಠೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಗ್ಗೆ ಶಾರದಾ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿಗಳು ನಡೆದವು. ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು ಗುರುಭವನದಿಂದ ಆಗಮಿಸಿ, ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ನೀಡಿದರು. ನಂತರ, ಕಿರಿಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ತೆಪ್ಪದ ಮೂಲಕ ತುಂಗಾ ನದಿಯನ್ನು ದಾಟಿ, ಗಂಗಾ ಪೂಜೆ ನೆರವೇರಿಸಿದರು. ನಂತರ, ಮಠದ ಎಲ್ಲಾ ದೇಗುಲಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಶಾರದಾ ಸನ್ನಿ ಧಿಯಲ್ಲಿ ಶ್ರೀಸೂಕ್ತ, ದೇವಿ ಸೂಕ್ತ, ಸಪ್ತಶತಿ ಪಾರಾಯಣ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ
Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Former Prime Minister: ಮನಮೋಹನ್ ಸಿಂಗ್ ಕುಟುಂಬದ ಪರಿಚಯ; ನಡೆದು ಬಂದ ಹಾದಿ….
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.