Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Team Udayavani, Dec 29, 2024, 2:07 AM IST
ಬೆಂಗಳೂರು: ವಿಭಿನ್ನ, ವೈವಿಧ್ಯಮಯ ಭಾಷೆ, ಆಹಾರ ಪದ್ಧತಿ, ಉಡುಗೆ-ತೊಡುಗೆ ಹೊಂದಿರುವ ಹವ್ಯಕ ಸಮಾಜದ ಆಚಾರ-ವಿಚಾರಗಳನ್ನು ಕಾಪಿಟ್ಟು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಅಖೀಲ ಹವ್ಯಕ ಮಹಾಸಭಾ ಕಾರ್ಯಪ್ರವೃತ್ತವಾಗಬೇಕು ಎಂದು ಉದಯವಾಣಿ ಪ್ರಧಾನ ಸಂಪಾದಕ ರವಿಶಂಕರ್ ಕೆ. ಭಟ್ ಸಲಹೆ ನೀಡಿದ್ದಾರೆ.
ಸಮ್ಮೇಳನದ “ಸಾಕ್ಷಾತ್ಕಾರ ಸಭಾ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹವ್ಯಕ ಸಮುದಾಯ ಉತ್ತರ ಕನ್ನಡ, ಶಿವಮೊಗ್ಗ, ಅವಿಭಜಿತ ದಕ್ಷಿಣ ಕನ್ನಡ , ಕಾಸರಗೋಡು ಪ್ರಾಂತಗಳಲ್ಲಿ ಹಬ್ಬಿದೆ. ಅಷ್ಟೂ ಪ್ರದೇಶಗಳಲ್ಲಿ ವಿಶಿಷ್ಟ ಭಾಷೆ, ಆಹಾರ ಪದ್ಧತಿ, ಆಚರಣೆಗಳನ್ನು ಹೊಂದಿದೆ. ಇವೆಲ್ಲವನ್ನೂ ದಾಖಲೀಕರಣಗೊಳಿಸುವುದು ಸೂಕ್ತ. ತುಳು, ಕೊಂಕಣಿ, ಕೊಡವ ಭಾಷೆಗಳ ಉಳಿವು-ಬೆಳೆವಿಗೆ ಅಕಾಡೆಮಿಗಳಿವೆ. ಅಂತೆಯೇ ಹವ್ಯಕ ಭಾಷೆಗೂ ಅಕಾಡೆಮಿ ಅಥವಾ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಜತೆಗೆ ಹವ್ಯಕ ಭಾಷೆಯ ಎಲ್ಲ ಪ್ರದೇಶಗಳ ಸೊಗಡಿನ ಪದಗಳನ್ನು ಒಳಗೊಂಡ ನಿಘಂಟು ರಚನೆಯಾಗಲಿ. ತನ್ಮೂಲಕ ವೈವಿಧ್ಯಮಯ ಭಾಷೆಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಲಿ ಎಂದರು.
ತಂಬುಳಿ, ಅಪ್ಪೆಮಿಡಿಯಂತಹ ವಿಶಿಷ್ಟ ಪದಾರ್ಥಗಳನ್ನು ಒಳಗೊಂಡ ಹವ್ಯಕರ ಆಹಾರ ಪದ್ಧತಿಯೂ ವೈವಿಧ್ಯಮಯವಾಗಿದ್ದು ಇವುಗಳಿಗೆ ಭೌಗೋಳಿಕ ಹೆಗ್ಗುರುತು (ಜಿಯೋಗ್ರಾಫಿಕಲ್ ಇಂಡೆಕ್ಸ್) ಮಾಡಿಸುವ ಮೂಲಕ ದಾಖಲೀಕರಣಗೊಳಿಸಬೇಕು ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.