Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
ಆತಂಕಪಡುವ ಅಗತ್ಯವಿಲ್ಲ ಯಾವ ರೀತಿ ವರದಿ ಬಂದರೂ ಹೆದರಬೇಕಿಲ್ಲ : ಕೇಂದ್ರ ಸಚಿವ ಭರವಸೆ
Team Udayavani, Dec 28, 2024, 12:27 AM IST
ಬೆಂಗಳೂರು: ಬಹುತೇಕ ಹವ್ಯಕರು ಅವಲಂಬಿಸಿರುವ ಅಡಿಕೆ ಬೆಳೆಯ ಕುರಿತು ವಿವಿಧ ರೀತಿಯ ವರದಿಗಳು ಬಂದರೂ ಅಡಿಕೆ ಬೆಳಗಾರರ ಹಿತ ಕಾಯಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಶ್ವಾಸನೆ ನೀಡಿದ್ದಾರೆ.
ಅಖೀಲ ಹವ್ಯಕ ಮಹಾಸಭಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಅಡಿಕೆ ಬೆಳೆಗೆ ಸಂಬಂಧಿಸಿ ಹವ್ಯಕ ಸಮುದಾಯದ ಹಲವರು ತಮ್ಮನ್ನು ಭೇಟಿಯಾಗಿ ಅಡಿಕೆ ಬಗ್ಗೆ ವಿವಿಧ ರೀತಿಯ ವರದಿಗಳು ಬರುವ ಕುರಿತು ಚರ್ಚಿಸಿದ್ದಾರೆ. ಆದರೆ ಅಡಿಕೆ ಕೇವಲ ತಿನ್ನಲು ಮಾತ್ರ ಸೀಮಿತವಾಗಿಲ್ಲ. ಅಡಿಕೆ ಇಲ್ಲದೆ ವಿವಾಹ ನಡೆಯುವುದಿಲ್ಲ, ಶ್ರಾದ್ಧವೂ ಆಗುವುದಿಲ್ಲ. ಕೇಂದ್ರ ಸರಕಾರವು ಅಡಿಕೆ ಬೆಳೆಗಾರರ ಹಿತ ಕಾಪಾಡಲು ಬದ್ಧವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.