Renukaswamy Case 5 ತಿಂಗಳಿನಿಂದ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!
ಇನ್‌ಸ್ಟಾಗ್ರಾಂ ಮೂಲಕ 200ಕ್ಕೂ ಅಧಿಕ ಸಂದೇಶ ಕಳುಹಿಸಿದ್ದ
Team Udayavani, Jun 29, 2024, 6:50 AM IST
ಬೆಂಗಳೂರು: ನಟಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕಳೆದ ಐದು ತಿಂಗಳಿನಿಂದ ಸಂದೇಶ ಕಳುಹಿಸುತ್ತಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಫೆಬ್ರವರಿಯಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪವಿತ್ರಾ ಗೌಡಳನ್ನು ಪರಿಚಯಿಸಿಕೊಂಡ ರೇಣುಕಾಸ್ವಾಮಿ, ಅಂದಿನಿಂದಲೇ ನಿತ್ಯ ಪವಿತ್ರಾ ಗೌಡಗೆ ಮೆಸೇಜ್ ಮಾಡುತ್ತಿದ್ದ. ಆದರೆ ಈತನ ಅಶ್ಲೀಲ ಚಾಟಿಂಗ್‌ಗೆ ಪವಿತ್ರಾ ಗೌಡ ಉತ್ತರಿಸುತ್ತಿರಲಿಲ್ಲ. ಹೀಗಾಗಿ ಸುಮಾರು 200ಕ್ಕೂ ಹೆಚ್ಚು ಸಂದೇಶಗಳನ್ನು ಕಳುಹಿಸಿದ್ದ ರೇಣುಕಾಸ್ವಾಮಿ, ಅಶ್ಲೀಲ ಸಂದೇಶಗಳ ಜತೆಗೆ ಅಶ್ಲೀಲ ಫೋಟೋ ಕೂಡ ಕಳುಹಿಸಿದ್ದಾನೆ. ಅದರಿಂದ ಕೋಪಗೊಂಡ ಪವಿತ್ರಾ ಗೌಡ, ತನ್ನ ಆಪ್ತ ಪವನ್‌ಗೆ ಮಾಹಿತಿ ತಿಳಿಸಿದ್ದಳು.
ಬಳಿಕ ಪವನ್, ಪವಿತ್ರಾ ಗೌಡ ಹಾಗೂ ಬೇರೆ ಯುವತಿಯರ ರೀತಿ ನಕಲಿ ಖಾತೆ ತೆರೆದು ಚಾಟ್ ಮಾಡಿದಾಗ ರೇಣುಕಾಸ್ವಾಮಿ ಸಂತೋಷದಿಂದ ಪ್ರತಿಕ್ರಿಯೆ ನೀಡುತ್ತಿದ್ದ. ಹೀಗೆ ಮಾತಾಡುತ್ತಾ, ರೇಣುಕಾಸ್ವಾಮಿ ಬಳಿ ಪವನ್ ಫೋಟೋ ಕಳುಹಿಸುವಂತೆ ಹೇಳಿದ್ದಾ ನೆ. ಅಂತೆಯೇ ರೇಣುಕಾಸ್ವಾಮಿ ತನ್ನ ಫೋಟೋ ಕಳುಹಿಸಿದ್ದಾ ನೆ. ಫೋಟೋ ಸಿಕ್ಕ ಬಳಿಕ, ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಕಳುಹಿಸಿ, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವಂತೆ ಸೂಚಿಸಿದ್ದ. ಬಳಿಕ ಈ ವಿಚಾರವನ್ನು ದರ್ಶನ್‌ಗೂ ತಿಳಿಸಿದ್ದರು. ಆನಂತರ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಭೀಕರವಾಗಿ ಹತ್ಯೆಗೈದು, ಮೃತದೇಹವನ್ನು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಎಸೆದಿದ್ದರು.
1 ಗಂಟೆಗೂ ಅಧಿಕ ಕಾಲ ಹಿಂಸೆ!
ಜೂನ್ 8ರಂದು ಪಟ್ಟಣಗೆರೆಯ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆದೊಯ್ದ ದರ್ಶನ್ ಆ್ಯಂಡ್ ಗ್ಯಾಂಗ್ ಸುಮಾರು 1 ಗಂಟೆಗೂ ಅಧಿಕ ಕಾಲ ಚಿತ್ರಹಿಂಸೆ ನೀಡಿದೆ. ಹಲ್ಲೆ ವೇಳೆ ರೇಣುಕಾಸ್ವಾಮಿ ಮೊಬೈಲ್ ಅನ್ನು ಪವನ್‌ಗೆ ಕೊಟ್ಟ ದರ್ಶನ್, ಆತ ಪವಿತ್ರಾ ಗೌಡಗೆ ಕಳುಹಿಸಿರುವ ಸಂದೇಶಗಳನ್ನು ಓದುವಂತೆ ಹೇಳಿದ್ದಾನೆ. ಪ್ರತಿ ಸಂದೇಶಕ್ಕೂ ದರ್ಶನ್ ಮತ್ತು ತಂಡ ಹಲ್ಲೆ ನಡೆಸಿದೆ. ಪವಿತ್ರಾ ಗೌಡ ಕೂಡ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಹೀಗೆ ಸುಮಾರು 1 ಗಂಟೆಗೂ ಅಧಿಕ ಕಾಲ ದರ್ಶನ್ ಮತ್ತು ತಂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.