![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 27, 2021, 6:42 PM IST
ಬೆಂಗಳೂರು : ಕೋವಿಡ್ ವಿಷಯದಲ್ಲಿ ಸರ್ಕಾರ ಯಾವ ಅಂಕಿ ಸಂಖ್ಯೆಯನ್ನು ಮುಚ್ಚಿಡುವ ಕೆಲಸ ಮಾಡಿಲ್ಲ. ಯಾವುದಾದ್ರೂ ರಾಜ್ಯ ಪಾರದರ್ಶಕವಾಗಿ ಅಂಕಿ ಅಂಶಗಳನ್ನು ಜನರ ಮುಂದೆ ಇಡುತ್ತಿದ್ರೆ ಅದು ನಮ್ಮ ರಾಜ್ಯ.ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ವಿರೋಧ ಪಕ್ಷದ ನಾಯಕರು ಅನಗತ್ಯವಾಗಿ ಆರೋಪ ಮಾಡಬಾರದು ಆಡಳಿತ ಪಕ್ಷ ವಿರೋಧ ಪಕ್ಷ ಅಂತ ಇರಬಾರದು ಎಲ್ಲಾ ಒಟ್ಟಿಗೆ ಇರಬೇಕು ಒಬ್ಬ ವ್ಯಕ್ತಿ ಇದನ್ನು ಮಾಡಲು ಸಾಧ್ಯವಿಲ್ಲ ಎಲ್ಲರೂ ಕೈ ಜೋಡಿಸಬೇಕು ಎಂದರು.
ಇವತ್ತು ರಾತ್ರಿ 9 ಗಂಟೆಯಿಂದ ನಿರ್ಬಂಧ ಆರಂಭ ಆಗುತ್ತದೆ. 14 ದಿನ ನಿರ್ಬಂಧ ಮಾಡಿಕೊಂಡರೆ ಕೋವಿಡ್ ಚೈನ್ ಬ್ರೇಕ್ ಆಗುತ್ತದೆ. ಮಹಾರಾಷ್ಟ್ರದಲ್ಲಿ ಕರ್ಫ್ಯೂ ವಿಧಿಸಿದ ಮೇಲೆ ಕಡಿಮೆ ಆಗಿದೆ. ನಮ್ಮಲ್ಲಿ 16 ಸಾವಿರದ್ದಷ್ಟು ಪ್ರಕರಣ ಬರ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ 1100 ಕಾಲ್ ಸೆಂಟರ್ ಓಪನ್ ಆಗುತ್ತದೆ. ಇದರಲ್ಲಿ ಯಾವ ವ್ಯಕ್ತಿ ಹೇಗೆ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಹೇಳುತ್ತಾರೆ ಹೋಮ್ ಐಸೋಲೇಶನ್ ಇರುವವರಿಗೆ ಮೆಡಿಕಲ್ ಅಡ್ವೈಸ್ ನೀಡುತ್ತಾರೆ .ಇದಕ್ಕೆ ಅಂದಾಜು 20 ಕೋಟಿ ಬೇಕಾಗುತ್ತದೆ ಒಟ್ಟು ಆರು ತಿಂಗಳು ಕಾರ್ಯ ನಿರ್ವಹಣೆ ಮಾಡುತ್ತದೆ ಎಂದರು.
ಇದನ್ನೂ ಓದಿ : ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿ ಅಂತ್ಯಕ್ರಿಯೆ
ಹೊಸ ಪ್ರಕರಣ ಯಾವ ರೀತಿಯಲ್ಲಿ ಇಳಿಕೆ ಆಗಬೇಕು ಎನ್ನುವ ಹಿನ್ನಲೆಯಲ್ಲಿ ಕರ್ಫ್ಯೂ ವಿಧಿಸಿದ್ದಾರೆ ಈ ಸಮಯದಲ್ಲಿ ಎಲ್ಲರೂ ಮನೆಯಲ್ಲಿ ಇರಬೇಕು, ಅನಗತ್ಯವಾಗಿ ಓಡಾಡಬಾರದು . ಪಾಸಿಟಿವ್ ಬಂದವರು ಬೇರೆಯವರ ಜೊತೆಗೆ ಬೆರೆಯಬಾರದು. ಹೀಗೆ ಮಾಡಿದರೆ ನೀವು ಸೂಪರ್ ಸ್ಪ್ರೇಡರ್ ಆಗುತ್ತಿರಿ. ಇದು ಕಾನೂನಿನ ದೃಷ್ಟಿಯಿಂದ ಹಾಗೂ ಆರೋಗ್ಯ ದೃಷ್ಟಿಯಿಂದ ಸರಿ ಅಲ್ಲ. ಸೂಕ್ತ ವ್ಯವಸ್ಥೆ ಇಲ್ಲ ಅಂದರೆ ಸ್ಥಳೀಯ ಕೋವಿಡ್ ಕೇರ್ ಸೆಂಟರ್ ಗೆ ಹೋಗಿ ದಾಖಲು ಆಗಿ ಎಂದು ಸಲಹೆ ನೀಡಿದರು.
ಆಕ್ಸಿಜನ್ ಬೇಕಾದವರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ 2000 ರಿಂದ 3000 ಬೆಡ್ ವ್ಯವಸ್ಥೆ ಮಾಡುತ್ತೇವೆ. ವಿಕ್ಟೋರಿಯಾ, ವಾಜಪೇಯಿ ಆಸ್ಪತ್ರೆ ಸೇರಿದಂತೆ ಎಲ್ಲಾ ಕಡೆ ಬೆಡ್ ಹೆಚ್ಚಿಗೆ ಕ್ರಮ ಕೈಗೊಳ್ಳುತ್ತೇವೆ. ಐಸಿಯು ಹಾಸಿಗೆ ಸಿಗದೆ ಪರದಾಡುವುದನ್ನು ತಪ್ಪಿಸಬೇಕು. ಆರೋಗ್ಯ ವ್ಯವಸ್ಥೆ ಬಲಿಷ್ಠವಾಗಿ ಇರಬೇಕು ನಾವು ಸಮರ್ಥವಾಗಿ ಇರಬೇಕು ಎಂದು ರಾಜ್ಯದ ಎಲ್ಲಾ ಕಡೆ ಮೇಕ್ ಶಿಫ್ಟ್ ಆಸ್ಪತ್ರೆ ಇರಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಜಿಲ್ಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡುವುದಕ್ಕೆ 50 ರಿಂದ 100 ಹಾಸಿಗೆ ಇರಬೇಕು. 20 ಹಾಸಿಗೆಗೆ ವೆಂಟಿಲೇಟರ್ ಇರುವ ಹಾಗೆ ವ್ಯವಸ್ಥೆ ಮಾಡುವ ಚಿಂತನೆ ಇದೆ. 40000 ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಶನ್ ಬೇಕಾಗುತ್ತದೆ. ಇದನ್ನು ಬೇರೆ ಕಡೆಯಿಂದ ತರಿಸಿಕೊಳ್ಳಬೇಕಿದೆ. ಸರ್ಕಾರಿ ಶಾಲೆ, ಚೌಟ್ರಿ ಎಲ್ಲಾ ಕಡೆ ಸೂಕ್ತ ಸೌಲಭ್ಯ ಇರುವ ಕಡೆ ಜಿಲ್ಲಾಧಿಕಾರಿ 14 ದಿನಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ತಾಕೀತು ಮಾಡಿದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.