ಹೃದಯವಾಗಲಿ ಕನ್ನಡ ಭಾಷೆ

Team Udayavani, Nov 1, 2018, 8:45 AM IST

b-37.jpg

82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ನುಡಿ ತೇರನ್ನು ಎಳೆಯಲಿರುವ ಸಾಹಿತಿ ಚಂದ್ರಶೇಖರ ಕಂಬಾರರು “ಉದಯವಾಣಿ’ ಓದುಗರಿಗೆ ನೀಡಿದ ಪಂಚ ಸಂಕಲ್ಪಗಳು…

ಕನ್ನಡವು ಪ್ರತಿಯೊಬ್ಬರಿಗೂ ಜೀವಧ್ವನಿ ಆಗಬೇಕು. ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಿ ಭೇಟಿಯಾದರೂ ಅವರಿಗೆ ಕನ್ನಡದಲ್ಲೇ ಮಾತನಾಡು ವಂಥ ಪ್ರೀತಿ ಹುಟ್ಟಬೇಕು. “ಹಲೋ’, “ಹೌ ಆರ್‌ ಯು’ ಅಲ್ಲ; “ಏನಪ್ಪಾ, ಹೇಗಿದ್ದೀಯಾ?’ ಎನ್ನುವ ಮಾತಿನಲ್ಲಿ ಅಸಾಧಾರಣ ಮಾಧುರ್ಯವಿದೆ.

ಇಂಗ್ಲಿಷ್‌, ಹಿಂದಿಯ ಬೆನ್ನೇರಿ ಸವಾರಿ ಹೊರಟವರಿಗೆ ಒಂದು ಕಿವಿಮಾತು. ಕನ್ನಡದೊಂದಿಗೆ ನೀವು ಏನನ್ನೇ ಕಲಿತಿರಬಹುದು. ಆದರೆ, ನಿಮ್ಮ ಹೃದಯದ ಭಾಷೆ ಕನ್ನಡವೇ ಆಗಿರಲಿ. ನಿಮ್ಮೊಳಗೆ ಕನ್ನಡವೇ ಗೂಡು ಕಟ್ಟಿರಲಿ. ಈ ನೆಲದಲ್ಲಿ ಕಲಿತವರೆಲ್ಲ ಕನ್ನಡದಲ್ಲೇ ಯೋಚನೆ ಮಾಡಿ. 

ಗಡಿ ದಾಟಿ ಹೋಗಿ, ವಿದೇಶದಲ್ಲಿ ನೆಲೆನಿಂತ ಮಾತ್ರಕ್ಕೆ ಹೊರನಾಡಿಗರು, ಕನ್ನಡಿಗರೇ ಅಲ್ಲ ಎಂಬ ಯೋಚನೆ ಸಲ್ಲದು. ಪರನೆಲದಲ್ಲಿ ಅವರು ತಮ್ಮದೇ ಆದ ರೀತಿಯಲ್ಲಿ ಕನ್ನಡವನ್ನು ಪೊರೆಯುತ್ತಿರುತ್ತಾರೆ. ಯಾವುದೋ ಭಾಷಾಜೀವಿಯ ಕಿವಿಗಳಿಗೆ ಒಂದಲ್ಲ ಒಂದು ಕನ್ನಡದ ಪದವನ್ನು ಅವರು ತಲುಪಿಸುವ ದೂತರು. ಹೊರನಾಡ ಕನ್ನಡಿಗರನ್ನು ಪ್ರೀತಿಸೋಣ.

ಅದೇ ರೀತಿ, ಯಾರಾದರೂ ಕನ್ನಡದ ನಾಡಿನ ಗಡಿಯೊಳಗೆ ಬಂದು, ನಮ್ಮ ಪಕ್ಕದಲ್ಲಿ  ನಿಂತ ಅಂತಾದರೆ, ಅವನಿಗೆ ಮೊದಲು ಕನ್ನಡ ಕಲಿಸದೆ ಬಿಡಬಾರದು. ಆತನನ್ನೂ ನಮ್ಮ ಭಾಷಾ ಪ್ರಪಂಚದೊಳಗೆ ಒಳಗೊಳ್ಳಿಸುವ ಕಾರ್ಯದಲ್ಲಿ ಪ್ರತಿ ಕನ್ನಡಿಗನೂ ಮಗ್ನನಾಗಬೇಕು. ಕಾಲಕ್ರಮೇಣ ಅವನನ್ನೂ ಕನ್ನಡಿಗನನ್ನಾಗಿ ರೂಪಿಸುವ ಜಾಣ್ಮೆ ನಮ್ಮದಾಗಬೇಕು.

ಕನ್ನಡದ ನೆಲದಲ್ಲಿದ್ದೇವೆ; ಇಲ್ಲೇ ಓಡಾಡಿ ಬದುಕು ಕಟ್ಟಿಕೊಂಡಿದ್ದೇವೆ; ಈ ನಾಡು ನೀರು ಕೊಟ್ಟಿದೆ; ಸ್ವಚ್ಛ ಗಾಳಿ ಕೊಟ್ಟಿದೆ; ಅನ್ನ ಕೊಟ್ಟಿದೆ ಅಂತಾದರೆ, ಬೇರೆ ಭಾಷೆಯಲ್ಲಿ ಮಾತನಾಡುವ ಅಗತ್ಯವೇತಕೆ? ನಮ್ಮ ಎಲ್ಲ ವ್ಯವಹಾರಗಳೂ ಕನ್ನಡದಲ್ಲಿಯೇ ಆಗಬೇಕು. “ಕನ್ನಡದಲ್ಲಿ ಮಾತನಾಡುವುದೇ ನಿತ್ಯದ ಧ್ಯಾನ, ಮಂತ್ರ’ ಆಗಲಿ.

   ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಸಂಕಲ್ಪದೊಂದಿಗೆ ನಾವೆಲ್ಲ ಒಟ್ಟಿಗೆ ಹೆಜ್ಜೆ ಇಡೋಣ.

ಟಾಪ್ ನ್ಯೂಸ್

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

1-chenna

ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು

1-knna

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.