ಕರಾವಳಿ: ಉತ್ತಮ ಮಳೆ; ಗುಡ್ಡ ಕುಸಿತ, ಮನೆ ಕುಸಿದು ಮಹಿಳೆಗೆ ಗಾಯ
Team Udayavani, Jun 28, 2018, 10:18 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿ ಗೆದರಿವೆ. ಇನ್ನೆರಡು ದಿನ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಜಿಲ್ಲೆಯ ಅನೇಕ ಕಡೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಸುಬ್ರಹ್ಮಣ್ಯ ಪರಿಸರದಲ್ಲಿ ಬೆಳಗ್ಗಿನಿಂದಲೇ ಸುರಿದ ಭಾರೀ ಮಳೆಗೆ ಕುಮಾರಧಾರಾ ನದಿ ತುಂಬಿ ಹರಿದು ನೆರೆಯಿಂದಾಗಿ ಕುಮಾರಧಾರಾ ಸ್ನಾನ ಘಟ್ಟ ಮುಳುಗಡೆಗೊಂಡಿದೆ.
ಮಂಗಳೂರು, ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ವೇಣೂರು, ಪುಂಜಾಲಕಟ್ಟೆ, ವಿಟ್ಲ, ಮಡಂತ್ಯಾರು, ಕಿನ್ನಿಗೋಳಿ, ಹಳೆ ಯಂಗಡಿ, ಸುರತ್ಕಲ್, ಮೂಲ್ಕಿ, ಉಡುಪಿ, ಮಣಿಪಾಲ, ಕುಂದಾ ಪುರ, ಬೈಂದೂರು, ಕಾಪು, ಪಡುಬಿದ್ರಿ, ಶಿರ್ವ, ಉಪ್ಪುಂದ, ತೆಕ್ಕಟ್ಟೆ ಯಲ್ಲಿ ಉತ್ತಮ ಮಳೆಯಾಗಿದೆ.
ಬುಧವಾರ ರಾತ್ರಿ ಕೆರೆಬೈಲು ಗುಡ್ಡೆಯಲ್ಲಿ ಮನೆ ಕುಸಿದು ಶಾರದಾ (50) ಗಾಯಗೊಂಡಿದ್ದಾರೆ. ಅವರನ್ನು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಕುಸಿದು ಪಕ್ಕದ ಸಿರಾಜ್ ಅವರ ಮನೆಗೂ ಭಾಗಶಃ ಹಾನಿಯಾಗಿದೆ.
ಭಾರೀ ಗಾಳಿ – ಹಾನಿ
ಬುಧವಾರ ಸಂಜೆ ಭಾರೀ ಗಾಳಿಗೆ ಬೆಳ್ತಂಗಡಿ ತಾಲೂಕಿನ ಹೊಕ್ಕಾಡಿ ಗೋಳಿ
ಬಸ್ ತಂಗುದಾಣದ ಛಾವಣಿಯ ಶೀಟ್‌ಗಳು ಹಾರಿ ಹೋಗಿದ್ದು, ದಿನೇಶ್ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನವೊಂದಕ್ಕೆ ಹಾನಿಯಾಗಿದೆ.
ಕುಂದಾಪುರ ರಸ್ತೆಗುರುಳಿದ ಮರ, ವಿದ್ಯುತ್ ಕಂಬಗಳು
ಕುಂದಾಪುರ: ತಾಲೂಕಿನೆಲ್ಲೆಡೆ ಬುಧವಾರ ದಿನವಿಡೀ ನಿರಂತರವಾಗಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಗಾಳಿ- ಮಳೆಯಿಂದಾಗಿ ಹಾನಿಯಾಗಿದೆ.
ಹಕ್ಲಾಡಿಯಲ್ಲಿ ಬುಧವಾರ ಸಂಜೆ ಮನೆಯೊಂದಕ್ಕೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ನೂಜಾಡಿಯಲ್ಲಿ ಸಿಡಿಲು ಬಡಿದು ಕರುವೊಂದು ಸಾವನ್ನಪ್ಪಿದೆ. ರಾಷ್ಟ್ರೀಯ ಹೆದ್ದಾರಿ 66ರ ವಿನಾಯಕ ಚಿತ್ರಮಂದಿರದ ಬಳಿಯಿಂದ ತ್ರಾಸಿ ವರೆಗೆ ಹಲವು ಕಡೆಗಳ ಹೊಂಡಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು.
ಮರ ಬಿದ್ದು ಸಂಚಾರ ಸ್ಥಗಿತ
ಕುಂದಾಪುರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಬಸ್ರೂರ್ ಸಮೀಪದ ಪಾನಕದಕಟ್ಟೆ ಬಳಿ ಭಾರೀ ಗಾಳಿ-ಮಳೆ ಯಿಂದಾಗಿ ಬುಧವಾರ ಸಂಜೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಇದರಿಂದ ಕೆಲ ಕಾಲ ವಾಹನಗಳ ದಟ್ಟಣೆಯಾಯಿತು. ಸ್ಥಳೀಯರು ಸೇರಿ, ಮರದ ಗೆಲ್ಲುಗಳನ್ನು ತೆರವು ಮಾಡಿದ ಬಳಿಕ ಸಂಚಾರ ಪ್ರಾರಂಭಗೊಂಡಿತು.
ಧರೆಗುರುಳಿದ ವಿದ್ಯುತ್ ಕಂಬಗಳು
ಕೋಟೇಶ್ವರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಸಳ್ವಾಡಿಯಲ್ಲಿ 6- 7 ವಿದ್ಯುತ್ ಕಂಬಗಳು ಮುರಿದು ಬಿದ್ದು, ವಿದ್ಯುತ್ ತಂತಿಗಳು ನೆಲದಲ್ಲಿ ಜೋತು ಬಿದ್ದಿವೆ. ಅಲ್ಲೇ ಸಮೀಪ ಗಾಳಿ ಮರ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮನೆ ಮೇಲೆ ಬಿದ್ದ ಮರ
ಶಂಕರನಾರಾಯಣ ಗ್ರಾಮದ ಮೋಹನ ಕೊರಗ ಅವರ ಮನೆ ಮೇಲೆ ಮರ ಬಿದ್ದು, 10 ಸಾವಿರ ರೂ. ನಷ್ಟ ಉಂಟಾಗಿದೆ.
ಮುಖ್ಯರಸ್ತೆ ಜಲಾವೃತ
ಗಂಗೊಳ್ಳಿ ಪೇಟೆಯ ಮುಖ್ಯ ರಸ್ತೆ ಹಾಗೂ ಮ್ಯಾಂಗನೀಸ್ ರಸ್ತೆಯಲ್ಲಿ ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ನೀರೆಲ್ಲ ರಸ್ತೆಯಲ್ಲೇ ಹರಿದು ಹೊಳೆ ಸದೃಶ ವಾತಾವರಣ ಸೃಷ್ಟಿಯಾಗಿತ್ತು. ವಿದ್ಯಾರ್ಥಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು.
ಸಿಡಿಲು ಬಡಿದು ಗಾಯ
ಹಕ್ಲಾಡಿ ಗ್ರಾ.ಪಂ. ವ್ಯಾಪ್ತಿಯ ಹೊಳ್ಮಗೆ ನಿವಾಸಿ ಗುರುವ ಪೂಜಾರಿ ಅವರ ಮನೆಗೆ ಬುಧವಾರ ಸಂಜೆ ಸಿಡಿಲು ಬಡಿದು ಮನೆಯ ವಿದ್ಯುತ್ ಪರಿಕರಗಳೆಲ್ಲ ಸುಟ್ಟು ಕರಕಲಾಗಿದ್ದು, ಮನೆಯ ಗೋಡೆ ಬಿರುಕುಬಿಟ್ಟಿದೆ. ಸಿಡಿಲಿನ ಆಘಾತದಿಂದ ಗುರುವ ಅವರ ಪತ್ನಿ ಹಾಗೂ ಪುತ್ರಿಗೆ ಗಾಯವಾಗಿದೆ. ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ: ಗುಡ್ಡ ಕುಸಿತ; 16 ಮನೆಗಳಿಗೆ ನುಗ್ಗಿದ ನೀರು
ಬಂಟ್ವಾಳ: ಭಾರೀ ಮಳೆಯಿಂದಾಗಿ ಬಿ. ಮೂಡ ಗ್ರಾಮದ ಅಗ್ರಾರ್ ನೇರಂಬೋಲುನಲ್ಲಿ ಗುಡ್ಡ ಕುಸಿದು ರಸ್ತೆಯ ಒಂದು ಪಾರ್ಶ್ವದಲ್ಲಿ ಮಣ್ಣು ರಾಶಿಯಾಗಿದ್ದು ಮರಗಳು ಅಡ್ಡಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ಲೊರೆಟ್ಟೊ ಕಮಾಲ್ ಕಟ್ಟೆಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು ಸ್ಥಳೀಯರು ಮಣ್ಣು , ಮರವನ್ನು ತೆರವು ಮಾಡಿದ್ದಾರೆ.
ಭಂಡಾರಿಬೆಟ್ಟು ತಗ್ಗು ಪ್ರದೇಶದ ವಸತಿ ಸಮುಚ್ಚಯದ 16 ಮನೆಗಳಿಗೆ ನೀರು ನುಗ್ಗಿದ್ದು ಮಾಹಿತಿ ಪಡೆದ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮತ್ತು ಸದಸ್ಯರು ಅಗ್ನಿಶಾಮಕ ದಳದ ನೆರವು ಪಡೆದು, ಜೆಸಿಬಿ ಬಳಸಿ ತೋಡು ಮಾಡುವ ಮೂಲಕ ಅದನ್ನು ತೆರವು ಮಾಡಿದ್ದಾಗಿ ತಿಳಿಸಿದ್ದಾರೆ. ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಳವಾಗಿದ್ದು 6 ಮೀಟರ್ ನಲ್ಲಿ ಹರಿಯುತ್ತಿದೆ. ಇಲ್ಲಿ 9 ಮೀಟರ್ ಅಪಾಯ ಮಟ್ಟವಾಗಿದೆ.
ಭಾರೀ ಮಳೆಯ ಕಾರಣ ಯಾವುದೇ ಅಪಾಯ ಸಂದರ್ಭ ಎದುರಾದರೆ ಪರಿಹಾರ ಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿ ಇರುವಂತೆ ಸೂಚನೆ ನೀಡಿದ್ದಾಗಿ ತಹಶೀಲ್ದಾರ್ ಕಚೇರಿ ಮಾಹಿತಿ ತಿಳಿಸಿದೆ.
ಶೆಡ್‌ಗಳಿಗೆ ಹಾನಿ: ಕೊಡ್ಮಣ್ ಗ್ರಾಮದ ಕೊಟ್ಟಿಂಜದಲ್ಲಿ ಭಾರೀ ಮಳೆಗೆ ಜೂ. 27ರಂದು ಗುಡ್ಡದ ಮಣ್ಣು ಜರಿದು ವಾಸ್ತವ್ಯ ರಹಿತ ಮೂರು ಶೆಡ್‌ಗಳು ಧ್ವಂಸವಾಗಿವೆ. ಅಮ್ಮೆಮಾರ್ – ಮಲ್ಲೂರು ರಸ್ತೆ ಸಂಚಾರಕ್ಕೆ ಇದರಿಂದ ಸ್ವಲ್ಪ ಹೊತ್ತು ಅಡಚಣೆ ಉಂಟಾಗಿತ್ತು. ಗ್ರಾ.ಪಂ.ನಿಂದ ಜೆಸಿಬಿ ಬಳಸಿ ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವು ಮಾಡುವ ಮೂಲಕ ಸಂಚಾರ ಅಡಚಣೆ ನಿವಾರಿಸಲಾಗಿದೆ.
ಕೊಲ್ಲೂರಿನಲ್ಲಿ ಭಾರೀ ಮಳೆ
ಕೊಲ್ಲೂರು: ಕೊಲ್ಲೂರಿನಲ್ಲಿ ಬುಧವಾರ ಭಾರೀ ಮಳೆಯಾಗಿದ್ದು , ಸೌಪರ್ಣಿಕಾ ಹಾಗೂ ಕಾಶಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಜಡ್ಕಲ್, ಮುದೂರು ಸಹಿತ ವಂಡ್ಸೆ ಆಸುಪಾಸಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆ ಕೃಷಿ ಭೂಮಿ ಜಲಾವೃತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.