ಫಲ್ಗುಣಿ ನದಿ, ಮರವೂರು ಜಲಾಶಯದ ನೀರಿನ ಗುಣಮಟ್ಟ ಪರೀಕ್ಷೆಯನ್ನು ಐಐಎಸ್ಸಿಗೆ ವಹಿಸಿದ ಹೈಕೋರ್ಟ್
Team Udayavani, Oct 28, 2021, 11:48 AM IST
ಬೆಂಗಳೂರು: ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಬಿಡುಗಡೆಯಾದ ಕಲುಷಿತ ನೀರು ಸೇರಿದ ಪರಿಣಾಮ ವಿಷಪೂರಿತವಾಗಿದೆ ಎಂದು ಹೇಳಲಾಗಿರುವ ಫಲ್ಗುಣಿ ನದಿ ಹಾಗೂ ಮರವೂರು ಜಲಾಶಯದ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಗೆ ಹೈಕೋರ್ಟ್ ವಹಿಸಿದೆ.
ಈ ವಿಚಾರವಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಆದೇಶ ನೀಡಿದೆ.
ಇದನ್ನೂ ಓದಿ:ಕಲ್ಲಂಗಡಿ ಬೆಳೆಗೆ ಅಂಗಡಿಯಾತ ನೀಡಿದ್ದ ಕ್ರಿನಿನಾಶಕ ಸಿಂಪಡಣೆ: ಬೆಳೆ ನಾಶ, ದೂರು ದಾಖಲು
ಐಐಎಸ್ಸಿ ತಂಡ 15 ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ನೀರಿನ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ನ.30 ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.