![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 24, 2022, 7:40 AM IST
ಬೆಂಗಳೂರು: ಪತಿಯ ವಿರುದ್ಧವೇ ಪತ್ನಿ ದಾಖಲಿಸಿದ್ದ ಅತ್ಯಾಚಾರ ಆರೋಪದ ಪ್ರಕರಣವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಅತ್ಯಾಚಾರದ ಆರೋಪದಲ್ಲಿ ತನ್ನ ಪತ್ನಿ ಭಾರತಿ ದಾಖಲಿಸಿರುವ ದೂರು ರದ್ದುಪಡಿಸಲು ಕೋರಿ ಪತಿ ಹೃಷಿಕೇಶ್ ಸಾಹೂ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾ| ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ, ವೈವಾಹಿಕ ಅತ್ಯಾಚಾರ ಸಹ್ಯವಲ್ಲ. ವಿವಾಹ ಪತ್ನಿಯ ಮೇಲೆ ದೌರ್ಜನ್ಯ ಎಸಗಲು ನೀಡುವ ಅನುಮತಿಯಲ್ಲ ಎಂದು ಆದೇಶಿಸಿದೆ. ನೇಪಾಲ ಮೂಲದ ದಂಪತಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಇದನ್ನೂ ಓದಿ:362 ಅಭ್ಯರ್ಥಿಗಳ ನೇಮಕ ಸಿಂಧು: ಕಾಯ್ದೆಗೆ ಮಧ್ಯಾಂತರ ತಡೆ
ಪತಿಯ ವಿರುದ್ಧದ ಅತ್ಯಾಚಾರ ಆರೋಪ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಗಂಡ ಹೆಂಡತಿಯ ಮಾನಸಿಕ ಮತ್ತು ದೈಹಿಕ ಆಡಳಿತಗಾರನಲ್ಲ. ಪತಿಯ ಬಲವಂತ ಸಂವಿಧಾನದ ಅನುಚ್ಛೇದ 14ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
You seem to have an Ad Blocker on.
To continue reading, please turn it off or whitelist Udayavani.