ಕುಸಿತದ ಭೀತಿಯಲ್ಲಿ ಪ್ರಮುಖ ಹೆದ್ದಾರಿ; ಧರೆ ಕುಸಿತ ಮುಂದುವರೆದರೆ ಸಂಪರ್ಕಕ್ಕೆ ಕುತ್ತು?
Team Udayavani, Jul 17, 2024, 12:07 PM IST
ಹೊಸನಗರ: ಎರಡು ವರ್ಷದ ಹಿಂದೆ ಕುಸಿದಿದ್ದ ಹೆದ್ದಾರಿ ಮಾರ್ಗ ಮತ್ತೆ ಕುಸಿತಕ್ಕೆ ಒಳಗಾಗಿದೆ. ಈ ಮಾರ್ಗ ಕುಸಿದರೇ ಸಂಪರ್ಕಕ್ಕೆ ಭಾರೀ ಕುತ್ತು ತರಲಿದೆ. ಹಾಗಾಗಿಈ ಕುರಿತು ಅಧಿಕಾರಿಗಳ ತುರ್ತು ಗಮನ ಹರಿಸಲೇಬೇಕಿದೆ.
ಹೌದು ಇದು ಶಿವಮೊಗ್ಗ ಜಿಲ್ಲೆಯಿಂದ ತೀರ್ಥಹಳ್ಳಿ ಮತ್ತು ಹೊಸನಗರ ಮಾರ್ಗವಾಗಿ ಉಡುಪಿ ಜಿಲ್ಲೆಗೆ ತೆರಳುವಾಗ ಮಾಸ್ತಿಕಟ್ಟೆ ಸಂಪರ್ಕಿಸುವುದು ಅನಿವಾರ್ಯ. ಮಾಸ್ತಿಕಟ್ಟೆ ಮೂಲಕ ಹುಲಿಕಲ್ ಮಾರ್ಗವಾಗಿ ಉಡುಪಿ, ಮಂಗಳೂರು, ಕುಂದಾಪುರ ಸಂಪರ್ಕ ಮಾಡಬೇಕಿದೆ.
ಆದರೆ ಮಾಸ್ತಿಕಟ್ಟೆಯಿಂದ ಹುಲಿಕಲ್ ಮಾರ್ಗದ ಸ್ವಲ್ಪ ದೂರದ ತಿರುವಿನಲ್ಲಿ ವ್ಯಾಪಕ ಮಳೆಯಿಂದಾಗಿ ಧರೆ ಕುಸಿತ ಕಾಣುತ್ತಿದೆ. ಹೆದ್ದಾರಿಯ ಡಾಂಬರೀಕರಣಕ್ಕೆ ಹೆಚ್ಚೆಂದರೆ ಎರಡು ಮೂರು ಅಡಿ ಇರಬಹುದು. ಇನ್ನೊಂದು ಸ್ವಲ್ಪ ಮುಂದುವರೆದರೂ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಇದೆ.
ಮೂರು ವರ್ಷದಿಂದ ಕುಸಿತ:
ಈ ಭಾಗದಲ್ಲಿ ಮೂರು ವರ್ಷದ ಹಿಂದಿನಿಂದಲೂ ಕುಸಿತ ಕಂಡು ಬರುತ್ತಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ಹೆದ್ದಾರಿ ಅಧಿಕಾರಿಗಳು ಧಾವಿಸಿ ಮರಳು ಚೀಲಗಳನ್ನಿಟ್ಟು ತಡೆಗೋಡೆ ನಿರ್ಮಿಸಿದ್ದರು. ಈ ಬಾರಿ ಮರಳು ಚೀಲಗಳ ಜೊತೆಯಲ್ಲೇ ಧರೆ ಕುಸಿದಿದೆ. ಇದು ಸುಮಾರು 40 ಅಡಿ ಆಳವಿದ್ದು ಪ್ರಪಾತದಂತೆ ಕಂಡು ಬರುತ್ತಿದೆ. ಕುಸಿತ ಪರಿಶೀಲಿಸಿದರೆ ಭಯ ತರಿಸುವಂತಿದೆ.
ಶಿವಮೊಗ್ಗ, ದಾವಣಗೆರೆ, ಹೊಸಪೇಟೆ, ಬಳ್ಳಾರಿ, ಉಡುಪಿ, ಕುಂದಾಪುರ, ಮಂಗಳೂರು, ಹೀಗೆ ಬಹುತೇಕ ಜಿಲ್ಲೆಗಳ ಅಗತ್ಯ ವಸ್ತುಗಳ ಸರಬರಾಜಿಗೆ ಬಹುದೊಡ್ಡ ಸಂಪರ್ಕ ಇದಾಗಿದ್ದು, ಅಧಿಕಾರಿಗಳು ತುರ್ತಾಗಿ ಗಮನ ಹರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.