27ರಿಂದ ಗೋವಾದಲ್ಲಿ ಹಿಂದೂ ಅಧಿವೇಶನ
Team Udayavani, May 14, 2019, 3:00 AM IST
ಬೆಂಗಳೂರು: ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮೇ 27 ರಿಂದ ಜೂನ್ 8ರವರೆಗೆ ಗೋವಾದಲ್ಲಿ 8ನೇ “ಅಖಿಲ ಭಾರತೀಯ ಹಿಂದೂ ಅಧಿವೇಶನ’ ಹಮ್ಮಿಕೊಳ್ಳಲಾಗಿದೆ.
ಅಧಿವೇಶನದಲ್ಲಿ ಹಿಂದೂ ಸಂಘಟನೆಗಳು ಮತ್ತು ಸಂಪ್ರದಾಯದವರು ರಾಷ್ಟ್ರಹಿತ ಮತ್ತು ಧರ್ಮಹಿತಕ್ಕಾಗಿ ಯೋಗದಾನ ನೀಡುವುದು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಸೇರಿ ಇತ್ಯಾದಿ ವಿಚಾರಗಳ ಚರ್ಚೆ, ಮುಂದಿನ ದಿನಗಳಲ್ಲಿ ಪ್ರಾಂತ್ಯವಾರು ನಡೆಯಬೇಕಾದ ಅಧಿವೇಶನಗಳು ಹಾಗೂ ಹಿಂದೂಹಿತ ನಿರ್ಧಾರಗಳಿಗೆ ಸಮ್ಮತಿಸುವ ಚಟುವಟಿಕೆಗಳು ನಡೆಯಲಿವೆ.
ಅಧಿವೇಶನದ ಭಾಗವಾಗಿ ಮೇ 27, 28 ರಂದು ಧರ್ಮಪ್ರೇಮಿ ನ್ಯಾಯವಾದಿಗಳ ಅಧಿವೇಶನ, 28ರಂದು ಉದ್ಯಮಿಗಳ ಅಧಿವೇಶನ ಹಾಗೂ ಮೇ 29 ರಿಂದ ಜೂನ್ 4ರವರೆಗೆ ಅಖಿಲ ಭಾರತ ಹಿಂದೂ ಅಧಿವೇಶನ, ಜೂನ್ 5ರಿಂದ 8ರವರೆಗೆ ಹಿಂದೂ ರಾಷ್ಟ್ರ ಸಂಘಟಕರ ಪ್ರಶಿಕ್ಷಣ ಮತ್ತು ಅಧಿವೇಶನ ನಡೆಯಲಿದೆ.
ಈ ಹಿಂದಿನ ಏಳು ಅಧಿವೇಶನಗಳಲ್ಲಿ ಸಾಕಷ್ಟು ಬೆಂಬಲ, ಪ್ರೋತ್ಸಹ ದೊರಕಿತ್ತಲ್ಲದೇ ದೇಶದ ವಿವಿಧ ರಾಜ್ಯಗಳ ನೂರಾರು ಹಿಂದು ಸಂಘಟನೆಗಳು, ಸಾವಿರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಬಾರಿ ಅಧಿವೇಶನದ ವ್ಯಾಪ್ತಿಯು ವಿಸ್ತಾರಗೊಂಡಿದ್ದು, ವಿಶೇಷವಾಗಿ ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಮಲೇಶಿಯಾ, ಬಾಂಗ್ಲಾ ದೇಶಗಳಿಂದಲೂ ಹಿಂದೂ ಸಂಘಟನೆಗಳು, ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
“ಈ ಹಿಂದಿನ ಅಧಿವೇಶನಗಳು ಸಾಕಷ್ಟು ಉಪಯುಕ್ತವಾಗಿದ್ದು, ಅದರ ಪ್ರೇರಣೆಯಿಂದ 96 ಪ್ರಾಂತೀಯ ಹಿಂದೂ ಅಧಿವೇಶನಗಳು ನಡೆದಿವೆ. ಹಿಂದೂ ರಾಷ್ಟ್ರ ಹಾಗೂ ಧರ್ಮದ ಅಪಮಾನ, ಅವಹೇಳನ ಕೃತ್ಯಗಳ ವಿರುದ್ಧ ವ್ಯಾಪಕ ಜಾಗೃತಿ ಉಂಟಾಗಿದೆ.
ಉದ್ಯಮಿಗಳ ಪರಿಷತ್ತಿನ ಸ್ಥಾಪನೆ ಅದರಡಿ ವಿವಿಧ ಶಿಬಿರಗಳು, ರಾಷ್ಟ್ರೀಯ ಪತ್ರಕರ್ತರ ಪೀಠ, ಆರೋಗ್ಯ ಸಹಾಯ ಸಮಿತಿ ಸ್ಥಾಪನೆ, ಮಧ್ಯಪ್ರದೇಶದಲ್ಲಿ ಭೋಜಶಾಲಾ ಮುಕ್ತಿ ಆಂದೋಲನ, ತಿರುಪತಿ ಪಾವಿತ್ರತೆ ರಕ್ಷಣೆಯ ಆಂದೋಲನದ ರಾಷ್ಟ್ರೀಕರಣ, ಬಾಂಗ್ಲಾ ದೇಶದಲ್ಲಾಗುತ್ತಿರುವ ಗೋ ಕಳ್ಳಸಾಗಣೆಗೆ ವಿರೋಧ, ಉತ್ತರಾಖಂಡ, ನೇಪಾಳದ ನೆರೆಪೀಡಿತ,
ಭೂಕಂಪನ ಪ್ರದೇಶದಲ್ಲಿ ಸಹಾಯ ಕಾರ್ಯಕ್ರಮ, ನಿರಾಶ್ರಿತ ಕಾಶ್ಮೀರಿ ಹಿಂದೂಗಳ ಪುನರ್‌ವಸತಿಗಾಗಿ “ಏಕ ಭಾರತ ಅಭಿಯಾನ್ – ಕಾಶ್ಮೀರ ಕಿ ಓರ್’ ಸಭೆಗಳು, ಮಹಾನ್ ಹಿಂದು ನಾಯಕರ ತ್ತೈಮಾಸಿಕ ಸಭೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಈ ಬಾರಿಯ ಗೋವಾ ಅಧಿವೇಶನ ಆಯೋಜಕ ನಾಗೇಶ ಗಾಡೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
Basavaraj Horatti: ಸಂವಿಧಾನ ಸ್ವಾತಂತ್ರ್ಯ ಭಾರತದ ಮೈಲಿಗಲ್ಲು: ಹೊರಟ್ಟಿ
ಲಾಕಪ್‌ಡೆತ್: ಹೆಡ್ ಕಾನ್‌ಸ್ಟೆಬಲ್ ಸೇರಿ ನಾಲ್ವರು ಪೊಲೀಸರಿಗೆ 7 ವರ್ಷ ಜೈಲು
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್ ಜಾರಕಿಹೊಳಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.