ಆಯ್ದ ಗ್ರಾಮಗಳ 500 ಕೆರೆಗಳ ಬಳಿ ಧ್ವಜಾರೋಹಣ

ಹಳ್ಳಿ-ಹಳ್ಳಿಗಳಲ್ಲೂ "ಹರ್‌ ಘರ್‌ ತಿರಂಗಾ' ಸಹಿತ ಹಲವು ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ ಇಲಾಖೆ ಸಿದ್ಧತೆ

Team Udayavani, Aug 4, 2022, 7:40 AM IST

ಆಯ್ದ ಗ್ರಾಮಗಳ 500 ಕೆರೆಗಳ ಬಳಿ ಧ್ವಜಾರೋಹಣ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಆಯ್ದ ಗ್ರಾಮಗಳ ಸುಮಾರು 500 ಕೆರೆಗಳ ಬಳಿ ಸ್ವಾತಂತ್ರ್ಯ ದಿನವಾದ ಆಗಸ್ಟ್‌ 15ರಂದು ರಾಷ್ಟ್ರಧ್ವಜ ಹಾರಾಡಲಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಗ್ರಾಮೀಣ ಭಾಗದಲ್ಲಿ ಅಭೂತಪೂರ್ವ ರೀತಿ ಆಚರಿಸಲು ಹಳ್ಳಿ-ಹಳ್ಳಿಗಳಲ್ಲೂ ಹರ್‌ ಘರ್‌ ತಿರಂಗಾ ಸಹಿತ ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೆರೆಗಳ ಬಳಿ ಧ್ವಜಾರೋಹಣ ನೆರವೇರಿಸುವ ವಿನೂತನ ಕಾರ್ಯಕ್ರಮ ಹಾಕಿಕೊಂಡಿದೆ.

ಅಮೃತ್‌ ಸರೋವರ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ 75ರಂತೆ ಒಟ್ಟು 2,325 ಹೊಸದಾಗಿ ಜಲಮೂಲಗಳು ಅಥವಾ ಕೆರೆಗಳನ್ನು ನಿರ್ಮಿಸುವ ಅಥವಾ ಪುನಃಶ್ಚೇತನಗೊಳಿಸುವ ಕಾರ್ಯಕ್ರಮ ಹಾಕಿಕೊಳ್ಳ ಲಾಗಿದೆ. ಅದರಲ್ಲಿ ಪ್ರತಿ ಜಿಲ್ಲೆಯ 75 ಕೆರೆ, ಸರೋವರಗಳ ಪೈಕಿ ಈ ಆಗಸ್ಟ್‌ 15ರೊಳಗೆ 15 ಕೆರೆ, ಸರೋವರಗಳನ್ನು ನಿರ್ಮಿಸುವ ಅಥವಾ ಪುನಃಶ್ಚೇತನಗೊಳಿಸುವ ಕಾಮಗಾರಿ ಪೂರ್ಣಗೊಳಿಸಬೇಕು. ಈ ರೀತಿ ಪ್ರತಿ ಜಿಲ್ಲೆಗೆ 15ರಂತೆ 21 ಜಿಲ್ಲೆಗಳಲ್ಲಿ 465 ಕೆರೆಗಳು ಪೂರ್ಣಗೊಂಡಿರುತ್ತವೆ. ಸ್ವಾತಂತ್ರ್ಯೋತ್ಸವದ ದಿನದಂದು ಆ ಕೆರೆಗಳ ಪರಿಸರದಲ್ಲಿ ಧ್ವಜಾರೋಹಣ ನೆರವೇರಿಸುವಂತೆ ಸೂಚಿಸಲಾಗಿದೆ. ಜತೆಗೆ ಕಾಮಗಾರಿ ಪ್ರಗತಿಯಲ್ಲಿ ರುವ ಕಡೆಗಳಲ್ಲೂ ಧ್ವಜಾರೋಹಣ ನೆರವೇರಿಸ ಬಹುದು. ಅದರಂತೆ 500ಕ್ಕೂ ಹೆಚ್ಚು ಕೆರೆಗಳ ಬಳಿ ತ್ರಿವರ್ಣ ಧ್ವಜ ಹಾರುವ ನಿರೀಕ್ಷೆ ಇದೆ.

ರಾಜಕಾರಣಿಗಳಿಂದ ಧ್ವಜಾರೋಹಣ ಇಲ್ಲ
ಧ್ವಜಾರೋಹಣವನ್ನು ರಾಜಕಾರಣಿಗಳು, ಚುನಾಯಿತ ಜನಪ್ರತಿನಿಧಿಗಳು ನೆರವೇರಿಸು ವುದಿಲ್ಲ. ಇದನ್ನು ಜನರ ಕಾರ್ಯಕ್ರಮವನ್ನಾಗಿ ಮಾಡಲು ಆಯಾ ಜಿಲ್ಲೆ, ಪಂಚಾಯತ್‌ ಅಥವಾ ಗ್ರಾಮದ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರರು, ಅವರ ಕುಟುಂಬದ ಸದಸ್ಯರು, ಹುತಾತ್ಮರ ಕುಟುಂಬದ ಸದಸ್ಯರು, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸಹಿತ ಇತರ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದವರು ಧ್ವಜಾರೋಹಣ ನೆರವೇರಿಸುವರು. ಇಂಥವರು ಇಲ್ಲದ ಕಡೆಗಳಲ್ಲಿ ಗ್ರಾಮದ ಹಿರಿಯರೊಬ್ಬರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನರೇಗಾ ಹಣ ಬಳಕೆ
ಕೆರೆಗಳ ಅಭಿವೃದ್ಧಿ ಮತ್ತು ಅಮೃತ ಸರೋವರ ನಿರ್ಮಾಣ ಕಾರ್ಯಕ್ರಮಗಳಿಗೆ ನರೇಗಾ ಯೋಜನೆ, 15ನೇ ಹಣಕಾಸು ಆಯೋಗದ ಅನುದಾನ, ಕೇಂದ್ರ, ರಾಜ್ಯ, ಜಿ.ಪಂ.-ತಾ.ಪಂ.ಗಳಲ್ಲಿ ವಿವಿಧ ಯೋಜನೆಗಳಡಿ ಲಭ್ಯವಿರುವ ಅನುದಾನ, ಸಣ್ಣ ನೀರಾವರಿ ಇಲಾಖೆ, ಅಟಲ್‌ ಭೂಜಲ್‌ ಅನುದಾನ, ಸಿಎಸ್‌ಆರ್‌ ನಿಧಿ, ಆರ್ಥಿಕ ದೇಣಿಗೆ, ಸಾರ್ವಜನಿಕರ ವಂತಿಕೆ ಮೂಲಕ ಹಣ ಬಳಕೆ ಮಾಡಬಹುದು. ಯಂತ್ರಗಳನ್ನು ಬಳಸುವ ಕಾಮಗಾರಿಗಳಿಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವ 100 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಬಹುದು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.

ಈ ಅಭಿಯಾನದಲ್ಲಿ ಕನಿಷ್ಠ 2,325 ಕೊಳಗಳನ್ನು ರಾಜ್ಯದಲ್ಲಿ ಕಾಯಕಲ್ಪ ನೀಡಲಾಗುವುದು. ಇದು ಸಮುದಾಯ ಸಹಭಾಗಿತ್ವದ ಪ್ರಯತ್ನವಾಗಿದೆ. ಇದು ರಾಷ್ಟ್ರದ 75ನೇ ಸ್ವಾತಂತ್ರÂದ ಸಂದರ್ಭದಲ್ಲಿ ನರೇಗಾ ಯೋಜನೆಯ ಹೆಮ್ಮೆಯ ಕೊಡುಗೆಯಾಗಿದ್ದು, ಆಗಸ್ಟ್‌ 15 ರಂದು 465 ಕೆರೆಗಳ ಬಳಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ.
– ಶಿಲ್ಪಾ ನಾಗ್‌, ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ.

 

ಟಾಪ್ ನ್ಯೂಸ್

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.