ಬಿಎಸ್ಸಿ ಅಗ್ರಿ ಸೀಟು ಮೀಸಲಾತಿ 50%ಕ್ಕೆ ಹೆಚ್ಚಳ : ಸಚಿವ ಬಸವರಾಜ್ ಬೊಮ್ಮಾಯಿ
Team Udayavani, Jun 21, 2021, 7:03 PM IST
ಬೆಂಗಳೂರು : ಕೃಷಿ ಇಲಾಖೆಯಿಂದ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಹಾಗೂ ಬಿಎಸ್ಸಿ ಅಗ್ರಿಗೆ ಈ ಮೊದಲು ಇದ್ದ ಸೀಟು ಮೀಸಲಾತಿ ಪ್ರಮಾಣ 40% ರಿಂದ 50% ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿಂದು ಮಾತಾಡಿರುವ ಅವರು, ಡಿಪಿಆರ್ ನಲ್ಲಿ ಕಾನ್ಪಿಡೆನ್ಸಿಯಲ್ ರಿಪೋರ್ಟ್ ಎಲೆಕ್ಟ್ರಾನಿಕ್ ಮುಖಾಂತರ ಸಿಆರ್ ಕಳಿಸುವ ವ್ಯವಸ್ಥೆ ಕೈಗೊಳ್ಳಲಾಗುವುದು. ಬೆಳಗಾವಿ ರಾಣಿ ಚೆನ್ನಮ್ಮ ವಿವಿ 126 ಎಕರೆ ಜಾಗ ಅಡಳಿತ ಕಟ್ಟಡ, ಲೈಬ್ರರಿ ನಿರ್ಮಾಣಕ್ಕೆ 120 ಕೋಟಿ ಹಣ ಒಪ್ಪಿಗೆ ನೀಡಲಾಗಿದೆ ಎಂದರು.
ಬೊಮ್ಮಾಯಿ ಹೇಳಿಕೆಯ ಪ್ರಮುಖ ಅಂಶಗಳು :
- ಸಾದಿಲ್ವಾರು ನಿಧಿ 2500 ಕೋಟಿ ಗೆ ಹೆಚ್ಚಳ ಕ್ಕೆ ತೀರ್ಮಾನ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೀದರ್ ವೈದ್ಯಕೀಯ ಕಾಲೇಜು 10 ಕೋಟಿಗೆ ಹೆಚ್ಚಳ.
- ಮೈಸೂರು ಆಸ್ಪತ್ರೆಗೆ154 ಕೋಟಿ ಹೆಚ್ಚಳ.
- ಪ್ಯಾರಾ ಮೆಡಿಕಲ್ ಬೋರ್ಡ್ ಕಟ್ಟಡ ನಿರ್ಮಾಣಕ್ಕೆ ಅನುಮತಿ 75 ಕೋಟಿ ರೂ. ಅನುಮೋದನೆ
- ಗೃಹ ಇಲಾಖೆಯಿಂದ 100 ಪೊಲೀಸ್ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ, 200 ಕೋಟಿ ರೂ. 2 ವರ್ಷದಲ್ಲಿ ಪೂರ್ಣಗೊಳಿಸಲು ನಿರ್ಧಾರ
- ಹಾಸನ ಗ್ರೀನ್ ಫೀಲ್ಡ್ ಡೊಮೆಸ್ಟಿಕ್ ಪ್ಯಾಸೆಂಜರ್ ಏರ್ ಪೋರ್ಟ್ 9+ 18.76+ 68 ಕೋಟಿ, ಒಟ್ಟು 193.65 ಕೋಟಿಗೆ ಅನುಮೋದನೆ.
- ಅಂಕೋಲಾ ತಾಲೂಕು ರಾಮನಗುಳಿ ಹಾಗೂ ಡೋಂಗ್ರಿ ಬ್ರಿಡ್ಜ್ ನಿರ್ಮಾಣಕ್ಕೆ 25 ಕೋಟಿ
- ಭಟ್ಕಳ್, ಚಳ್ಳಕೆರೆ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಪರಿಷ್ಕೃತ ಒಪ್ಪಿಗೆ
- ಭೂ ಮಂಜೂರು ಕಾಯ್ದೆಗೆ ತಿದ್ದುಪಡಿ, ಖರಾಬ್ ಜಮೀನು ಮಧ್ಯ, ಕೆರೆ ಕಟ್ಟೆ ಬಂದಿದ್ದರೆ ಕಾಲ ಮಿತಿ ಇಲ್ಲದೆ ಬಳಕೆ ಮಾಡಲು ಅವಕಾಶ ಇತ್ತು. ಕನಿಷ್ಠ 10 ಇಲ್ಲದಿದ್ದರೆ ಮಾತ್ರ ಬಳಕೆ ಮಾಡಲು ತೀರ್ಮಾನ.
- ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗಂಡಸಿ ಮತು ಬಾಣಾವರ 19 ಕೋಟಿ ರೂ.
- ಮೂಡಾ ದಲ್ಲಿ 107 ಲೇಔಟ್ ನಲ್ಲಿ ಅವರದೇ ಆದ ಹಣದಲ್ಲಿ ಅಭಿವೃದ್ಧಿಗೆ ಸೂಚನೆ 33 ಕೋಟಿ ರೂ. ಮೂಲ ಸೌಕರ್ಯಕ್ಕೆ ಹಣ ಒದಗಿಸಲು ಇಪ್ಪಿಗೆ.
- ಕರ್ನಾಟಕ ಮುನ್ಸಿಪಲ್ ನೇಮಕ ವಿಶೇಷ ನಿಯಮಗಳ ಅಡಿ ಲೋಡರ್ಸ್ ಮತ್ತು ಡ್ರೈವರ್ಸ್ ಸೇರ್ಪಡೆಗೆ ಅನುಮತಿ.
- ಕರ್ನಾಟಕ ಟೌನ್ ಪ್ಲಾನಿಂಗ್ ಆಕ್ಟ್ 1961 ಗೆ ತಿದ್ದುಪಡಿ, ಟಿಡಿಆರ್ ಕೊಡುವ ವ್ಯವಸ್ಥೆ ಯಾರು ಸಮೀಕ್ಷೆ ಮಾಡಿ ಕೊಡುತ್ತಾರೆ ಅದೆ ಅಂತಿಮ ಎಂಬ ನಿಯಮ ಸಡಿಲಿಕೆ ಮಾಡಿ, ಬಿಡಿಎ ಸಮೀಕ್ಷೆಯನ್ನು ಒಪ್ಪಿಗೆ ನೀಡಬೇಕು. ಇಲ್ಲದಿದ್ದರೆ ಡಿಮಮ್ಡ್ ಒಪ್ಪಿಗೆ ಅಂತ ತೀರ್ಮಾನ.
- ಡ್ಯಾಮ್ ಗಳ ರೀಪೇರಿಗೆ 1500 ಕೋಟಿ ರೂ. ಯೋಜನೆಗೆ ಒಪ್ಪಿಗೆ ಕೇಂದ್ರ ಸರ್ಕಾರ 1050 ಕೋಟಿ ನೀಡಲಿದೆ.
- ಜಲ ನೀತಿ ಮಾಡುವ ಕುರಿತು ಸಂಪುಟ ಉಪ ಸಮಿತಿ ರಚನೆಗೆ ನಿರ್ಧಾರ.
- ನಮ್ಮ ರಾಜ್ಯದಲ್ಲಿರಯವ ನೀರಿನ ಬಳಕೆ ಮಾಡುವ ಕುರಿತು, ನೀರು ನಿರ್ವಹಣೆ, ಯಾವುದಕ್ಕೆ ಆದ್ಯತೆ.ನೀಡಬೇಕು ಎನ್ನುವುದನ್ನು ನೋಡಲು ನೀತಿ ಮಾಡಲಾಗುವುದು.
- ನಬಾರ್ಡ್ ಯೋಜನೆ ಅಡಿಯಲ್ಲಿ 415 ಕೋಟಿ ವೆಚ್ಚದಲ್ಲಿ ಹೊನ್ನಾಳಿ ತಾಲೂಕಿನಲ್ಲಿ ಹನುಮಸಾಗರ ಏತ ನೀರಾವರಿ ಯೋಜನೆಗೆ ಒಪ್ಪಿಗೆ 94 ಕೆರೆ ತುಂಬಿಸುವುದು.
- ಕೂಡಲಗಿ ತಾಲೂಕಿನಲ್ಲಿ 670 ಕೋಟಿ ವೆಚ್ಚದಲ್ಲಿ ಕೆರೆ ತುಂಬುವ ಯೋಜನೆಗೆ ಒಪ್ಪಿಗೆ.
- ಸಾಸಿವೆ ಹಳ್ಳಿ ಏತ ನೀರಾವರಿ ಯೋಜನೆಗೆ 167 ಕೋಟಿ ಹೆಚ್ಚುವರಿ ಅನುದಾನ ನೀಡಲು ಒಪ್ಪಿಗೆ.
- ಅಥಣಿಯಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ.
- ಮಕ್ಕಳಿಗೆ ಸಮವಸ್ತ್ರ ಕ್ಕೆ 83 ಕೋಟಿ ರೂ.
- ಶಿವಮೊಗ್ಗ ಆಸ್ಪತ್ರೆ 250 ಬೆಡ್ ಗೆ ಹೆಚ್ಚಿಸಲು 32 ಕೋಟಿ ರೂ. ಅನುಮೋದನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.