ಕೀಳು ಮಟ್ಟದ ವ್ಯಕ್ತಿ : ಶಾಮನೂರು ಶಿವಶಂಕರಪ್ಪ ವಿರುದ್ಧ ಎಂಬಿಪಿ ಕಿಡಿ
Team Udayavani, Jan 13, 2019, 7:57 AM IST
ಹುಬ್ಬಳ್ಳಿ : ಗೃಹ ಸಚಿವ ಎಂ.ಬಿ.ಪಾಟೀಲ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಡುವೆ ಭಾನುವಾರ ತೀವ್ರತರದ ವಾಕ್ ಸಮರ ನಡೆದಿದೆ. ಸಚಿವ ಎಂ.ಬಿ.ಪಾಟೀಲ್ ಅವರು ಶಿವಶಂಕರಪ್ಪ ಅವರು ಕೀಳು ಮಟ್ಟದ ವ್ಯಕ್ತಿ ಎಂದರೆ, ತಿರುಗೇಟು ನೀಡಿದ ಶಿವಶಂಕರಪ್ಪ ಅವರು ಎಂ.ಬಿ.ಪಾಟೀಲ್ ಮಂಗ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರನ್ನು ಬಹಳ ವರ್ಷಗಳಿಂದ ನೋಡಿದ್ದೀನಿ. ಅವರ ಮನಸ್ಸು ಮತ್ತು ಹೃದಯ ಸಂಕುಚಿತವಾದುದ್ದು ಕೀಳು ಮಟ್ಟದ್ದು, ತಾವಾಯ್ತು ತಮ್ಮ ಕುಟುಂಬ ಸ್ವಾರ್ಥಿ, ವಯಸ್ಸಿನಲ್ಲಿ ಹಿರಿಯವರು ಹಣದಲ್ಲಿ ಹಿರಿಯರಿರಬಹುದು. ಅವರಿಗೆ ನನ್ನ ಬೆಳವಣಿಗೆ ನೋಡಿ ಅಸೂಹೆ, ನನ್ನ ಮಗ ಮಂತ್ರಿ ಆಗಬೇಕು, ನಾವೇ ಶ್ರೇಷ್ಠ. ಸಂಪೂರ್ಣ ಅಸೂಹೆಯಿಂದ ಕೂಡಿರುವ ವ್ಯಕ್ತಿ . ಬೇರೆಯವರ ಬಿ ಫಾರಂ ಹರಿದು ಹಾಕಿ ಅಧಿಕಾರಕ್ಕೆ ಬಂದವರು ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ ಕಿಡಿ ಕಾರಿದರು.
ನನ್ನ ಮೈಯಲ್ಲಿ ಹರಿಯುವುದು ನನ್ನ ತಂದೆಯ ರಕ್ತ. ನಾನು ಯಾರಿಗೂ ಹೆದರುವುದಿಲ್ಲ ಎಂದು ಎಂ.ಬಿ.ಪಾಟೀಲ್ ಕಿಡಿ ಕಾರಿದರು.
ಶಿವಶಂಕರಪ್ಪ ತಿರುಗೇಟು
ಎಂ.ಬಿ.ಪಾಟೀಲ್ ಅಡ್ಡ ದಾರಿ ಹಿಡಿದಿದ್ದ. ನಾನು ಮತ್ತು ಪ್ರಭಾಕರ ಕೋರೆ ಸೇರಿ ಉದ್ಧಾರ ಮಾಡಿದ್ದು . ಆತ ಓರ್ವ ಮಂಗ .ಹೆಚ್ಚೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ.
ನಿರಂತರ ವಾಕ್ಸಮರ
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ನಡುವೆ ತೀವ್ರ ತರದಲ್ಲಿ ನಿರಂತರ ವಾಕ್ಸಮರ ನಡೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.