ತೆಕ್ಕಟ್ಟೆ: ಗಮನ ಸೆಳೆಯುತ್ತಿದೆ ಪುಟಾಣಿಗಳ ಹೂವಿನ ಕೋಲು ತಿರುಗಾಟ

ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದೆ ಗ್ರಾಮೀಣ ಭಾಗದ ಎಳೆಯ ಪ್ರತಿಭೆಗಳು

Team Udayavani, Oct 15, 2021, 9:48 AM IST

jhjhgfd

ತೆಕ್ಕಟ್ಟೆ: ನವರಾತ್ರಿ ಸಂದರ್ಭದಲ್ಲಿ ಪುರಾತನ  ಇತಿಹಾಸವುಳ್ಳ ಸಾಂಪ್ರದಾಯಿಕ ಯಕ್ಷಗಾನ ಕಲೆಯನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಹೂವಿನ ಕೋಲು ಯಕ್ಷಗಾನ ಪ್ರಾಕಾರವನ್ನು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇಲ್ಲಿನ ಮಕ್ಕಳ ತಂಡವು ಕುಂದಾಪುರ ತಾಲೂಕಿನ ಆಯ್ದ ಮನೆಗಳಲ್ಲಿ ವಿಶೇಷವಾಗಿ ಪ್ರದರ್ಶನ ನೀಡುತ್ತಿರುವುದು ಗಮನ ಸೆಳೆಯುತ್ತಿದೆ.

ಈ ತಂಡದಲ್ಲಿ ಪ್ರಾಚಾರ್ಯ ಕೆ.ಪಿ.ಹೆಗಡೆ ಮತ್ತು ಮದ್ದಲೆ ವಾದಕ ದೇವದಾಸ ಕೂಡ್ಲಿಯವರ ಮಾರ್ಗದರ್ಶನದಲ್ಲಿ ಕಳೆದ ಹಲವು ವರ್ಷಗಳಿಂದಲೂ ಗ್ರಾಮೀಣ ಭಾಗದಲ್ಲಿ ಹೂವಿನ ಕೋಲು ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

ನಾರಾಯಾಣಾಯ ನಮೋಃ ನಾರಾಯಾಣಾಯ, ನಾಭಿ ಚರಣಕ್ಕೆ ನಮೋಃ ನಾರಾಯಾಣಾಯ, ಗುರುದೈವ ಗಣಪತಿಗೆ ಶರಣು ಶರಣೆಂದು ಕರಗಳೆರಡನು ಮುಗಿದು ಶಿರವೇರಿನಿಂದು ಹೀಗೆ ಚೌಪತಿಯನ್ನೂ ಹಾಡುತ್ತಾ, ಮನೆಯವರಿಗೆ, ಗುರುಗಳಿಗೆ, ಊರಿಗೆ ಶುಭವಾಗಲಿ, ಸಂತತಿಯಾಗಲಿ, ಸಂಪತ್ತು ವೃದ್ಧಿಸಲಿ ಎಂಬ ಆಶಯಗಳನ್ನೂ ಹೊಂದಿರುವ ಈ ಚೌಪದಿಗಳನ್ನೂ ಮಾನೌಮಿಯ ಪದಗಳೆಂದೂ, ಈ ಮಕ್ಕಳು ಮಾನೌಮಿಯ ಮಕ್ಕಳೆಂದೂ ಕರೆಯುವುದು ರೂಢಿಯಿದೆ. ಹಾಗೆ ಹೂವಿನಕೋಲು ಬಂತು ಎನ್ನುತ್ತಾರೆ.

ಯಕ್ಷಗಾನ ಮೇಳಗಳು ಸಾಧಾರಣವಾಗಿ ನವೆಂಬರ್ ತಿಂಗಳಿನಲ್ಲಿ ಆರಂಭಗೊಳ್ಳುತ್ತದೆ. ಅದಕ್ಕೂ ಮುಂಚೆ ನವರಾತ್ರಿಯ ದಿನಗಳಲ್ಲಿ ಹೂವಿನಕೋಲು ಎನ್ನುವ ಕಾರ್ಯಕ್ರಮವನ್ನು ಮನೆ ಮನೆಗೂ ಹೋಗಿ ನಡೆಸಿಕೊಡುತ್ತಾರೆ. ಹೂವಿನಕೋಲು ಪ್ರಕಾರದಲ್ಲಿ ಮಕ್ಕಳು ಪಾಲ್ಗೊಳ್ಳುತ್ತಾರೆ. ಹಾಗೆ ವೃತ್ತಿ ತಿರುಗಾಟದ ಹಿಮ್ಮೇಳ ಕಲಾವಿದರಿಗೆ ಒಂದು ಪೂರ್ವ ತಯಾರಿಯ ರೀತಿಯಲ್ಲಿ ಇಲ್ಲಿ ಗಮನಿಸಬಹುದು. ಭಾಗವತರು ಮದ್ದಲೆಗಾರರು, ಶುತಿಪಾಲಕರು ಮತ್ತು 2 ಅಥವಾ 4 ಜನ ಮಕ್ಕಳು ಕೆಲವೊಮ್ಮೆ 6ಕ್ಕೂ ಏರಬಹುದು. ಹೀಗೆ ಒಂದು ಹೂವಿನಕೋಲು ತಂಡವಾಗುತ್ತದೆ.

ಭಾಗವತರು ಕೇವಲ 2-3 ಪಾತ್ರಗಳ ಸಂಭಾಷಣೆಯನ್ನು ಪ್ರಸಂಗಗಳಿಂದ ಆಯ್ದು ಮಕ್ಕಳಿಗೆ ಕಂಠಪಾಠ ಮಾಡಿಸುತ್ತಾರೆ. ಹಿಂದೆ ಐಗಳ ಮಠಗಳ ಯಕ್ಷಗಾನ ಕಲಿಸುವ ಕೇಂದ್ರಗಳಾಗಿದ್ದು, ಯಕ್ಷಗಾನ ಪ್ರಸಂಗಗಳ ಹಾಡುಗಾರಿಕೆ ಅರ್ಥ ಹೇಳುವ ಕ್ರಮ ಹೇಳಿಕೊಟ್ಟು ನವರಾತ್ರಿಯ ಸಮಯದಲ್ಲಿ ಶಿಷ್ಯರನ್ನೊಳಗೊಂಡು ಹಳ್ಳಿಹಳ್ಳಿಗೆ ಸಂಚರಿಸಿ ಈ ರೀತಿಯ ಹೂವಿನಕೋಲು ಎನ್ನುವ ತಾಳ ಮದ್ದಲೆ ರೂಪಿನ ಕಾರ್ಯಕ್ರಮ ನೀಡುತ್ತಿದ್ದರು. ಮನೆಯವರು ಇದಕ್ಕೆ ಪ್ರತಿಫಲವಾಗಿ ಅಕ್ಕಿ, ಕಾಯಿ ನೀಡಿದ್ದನ್ನು, ಗುರುಗಳಿಗೆ ದುರುದಕ್ಷಿಣೆಯ ರೂಪದಲ್ಲಿ ನೀಡುತ್ತಿದ್ದರು. ಹೂವಿನಿಂದ ಅಲಂಕರಿಸಿದ ಒಂದು ಅಡಿ ಉದ್ದದ ಹೂಕೋಲನ್ನು ಹಿಡಿದುಕೊಂಡಿರುತ್ತಾರೆ ಎಂದು ಯಶಸ್ವಿ ಕಲಾ ವೃಂದದ ಕಾರ್ಯದರ್ಶಿ ವೆಂಕಟೇಶ್ ವೈದ್ಯ ಅವರು ಹೇಳುತ್ತಾರೆ.

ಟಾಪ್ ನ್ಯೂಸ್

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.