ಕರಾವಳಿಗೆ ಹೌಸ್‌ ಬೋಟ್‌, ಡ್ಯಾಂ,ಜೈಲು, ಕೋಸ್ಟಲ್‌ ಬರ್ತ್‌…


Team Udayavani, Feb 17, 2018, 8:15 AM IST

s-9.jpg

ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯಲು ಆಯ್ದ ಕೆಲವು ಪ್ರವಾಸಿ ತಾಣಗಳಲ್ಲಿ “ಹೌಸ್‌ ಬೋಟ್‌’ ಹಾಗೂ “ತೇಲುವ ರೆಸ್ಟೋರೆಂಟ್‌’ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿ ಸಿದ ಬಜೆಟ್‌ನಲ್ಲಿ ಈ ಕುರಿತಂತೆ ಉಲ್ಲೇಖೀ ಸಿದ್ದು, ಕೇರಳ ರಾಜ್ಯ ದಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿರುವ “ಹೌಸ್‌ ಬೋಟ್‌’ ಈ ಮೂಲಕ ಮಂಗಳೂರಿಗೂ ಬರುವ ಲಕ್ಷಣ ಗೋಚರಿಸಿದಂತಾಗಿದೆ.

ಸದ್ಯ ಹೌಸ್‌ ಬೋಟ್‌ ಖಾಸಗಿಯಾಗಿ ಉಡುಪಿ ಭಾಗದಲ್ಲಿ  ಎರಡು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಸಿಗರನ್ನು ನೀರಿನಲ್ಲಿ ಬೋಟ್‌ ಮೂಲಕ ಕರೆದುಕೊಂಡು ಹೋಗಿ, ಅಲ್ಲಿಯೇ ಊಟ, ನೃತ್ಯ, ಸಂಗೀತದ ಆಸ್ವಾದನೆಯೊಂದಿಗೆ ರಾತ್ರಿ ವಿಶ್ರಾಂತಿಗೆ ಕೂಡ ವ್ಯವಸ್ಥೆ ಕಲ್ಪಿಸ ಲಾಗುತ್ತದೆ. ರಾತ್ರಿಯೆಲ್ಲ   ನೀರಿನ ಮಧ್ಯೆಯೇ ಹೌಸ್‌ ಬೋಟ್‌ನಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದೇ ರೀತಿ ಬೋಟಿನಲ್ಲಿ ತೇಲಾಡುತ್ತಲೇ ಹೊಟೇಲ್‌ ಸೌಲಭ್ಯವನ್ನು ಪಡೆ ಯುವ “ತೇಲುವ ಉಪಾಹಾರ ಗೃಹ’ ಕೂಡ ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಲ್ಲಿ ಹೊಸ ಬೆಳವಣಿಗೆಯಾಗಿದೆ.

ಮಂಗಳೂರಿನ ನೇತ್ರಾವತಿ ನದಿ ತೀರ ಹಾಗೂ ಗುರುಪುರ ನದಿ ತೀರದ ಆಯ್ದ ಪ್ರಮುಖ ಪ್ರವಾಸೀ ಸ್ಥಳಗಳಲ್ಲಿ  ಹೌಸ್‌ಬೋಟ್‌ಗಳು ಹಾಗೂ ತೇಲುವ ಉಪಾಹಾರ ಗೃಹಗಳ ಸೌಲಭ್ಯವನ್ನು ಕಲ್ಪಿಸಲು ಅವಕಾಶವಿದೆ. ಈ ಬೋಟ್‌ಗಳಿಗೆ ಪ್ರವೇಶ ಪಡೆಯಲು ನಿಗದಿತ ಜಾಗದಲ್ಲಿ ಸಣ್ಣ ಮಟ್ಟಿನ ಜೆಟ್ಟಿ ನಿರ್ಮಾಣ ಮಾಡಬೇಕಿದೆ. ಜತೆಗೆ ಇಂತಹ ಯೋಜನೆಗಳಿಗೆ ಮುಂದೆ ಬರುವ ಉದ್ಯಮಿಗಳಿಗೆ ಸರಕಾರದ ವತಿಯಿಂದ ಸಬ್ಸಿಡಿ ಅಥವಾ ಇತರ ಸಹಾಯವನ್ನು ಕಲ್ಪಿಸಿದರೆ ಹೆಚ್ಚಿನ ಅನುಕೂಲವಾದೀತು.

ಸದ್ಯ ಮಂಗಳೂರಿನ ಹಳೆ ಬಂದರು ಹಾಗೂ ಸುಲ್ತಾನ್‌ಬತ್ತೇರಿಯಲ್ಲಿ “ತೇಲುವ ರೆಸ್ಟೋರೆಂಟ್‌’ ಖಾಸಗಿಯಾಗಿ ನಿರ್ವಹಣೆಯಾಗುತ್ತಿದೆ. 

ಮಂಗಳೂರು ಪಾಲಿಕೆಗೆ ದೊರಕಿದ್ದೇನು ?
ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಇದೇ ರೀತಿ ಮಂಗಳೂರು ಮಹಾನಗರ ಪಾಲಿಕೆ ಸಹಿತ ನಗರಸಭೆ/ಪುರಸಭೆಗಳಲ್ಲಿ ಪೌರ ಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಇದರಿಂದಾಗಿ ಮಂಗಳೂರು ಪಾಲಿಕೆಯಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಪಾಲಿಕೆ ಸಭೆಯಲ್ಲಿ ಧ್ವನಿಯಾಗಲು ಓರ್ವ ಪೌರಕಾರ್ಮಿಕನಿಗೆ ಜವಾಬ್ದಾರಿ ನೀಡಿದಂತಾಗಿದೆ. 

ಇದೇ ರೀತಿ, ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು ರಾಜ್ಯದ ಎಲ್ಲ  ನಗರ ಪ್ರದೇಶಗಳಿಗೂ ವಿಸ್ತರಿಸಿ, “ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ’ ಜಂಬ ಹೆಸರಿನ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದು ಮಂಗಳೂರಿಗೆ ಅನ್ವಯವಾಗಲಿದೆ. ಇದರ ಜತೆಗೆ, ನಗರ ಪ್ರದೇಶದಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಮಂಗಳೂರು ಪಾಲಿಕೆಯಲ್ಲಿ 500 ಎಕರೆ, ನಗರಸಭೆ/ಪುರಸಭೆ ವ್ಯಾಪ್ತಿಯಲ್ಲಿ 250 ಎಕರೆ ಹಾಗೂ ಇತರ ಪಟ್ಟಣ ಪ್ರದೇಶಗಳಲ್ಲಿ 100 ಎಕರೆ ಸರಕಾರಿ ಜಮೀನನ್ನು ವಸತಿಗಾಗಿ ಮೀಸಲಿಡಲು ಉದ್ದೇಶಿಸಲಾಗಿದೆ. ಸ್ಮಾರ್ಟ್‌ಸಿಟಿಗೆ ಆಯ್ಕೆಯಾದ ಮಂಗಳೂರಿನಲ್ಲಿ ವಿದ್ಯುತ್‌ ಉಳಿತಾಯ ಮಾಡಲು ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಕೇಂದ್ರೀಕೃತ ನಿಯಂತ್ರಣ ಮತ್ತು ಉಸ್ತುವಾರಿ ವ್ಯವಸ್ಥೆ ಹೊಂದಿದ ಎಲ್‌ಇಡಿ ದೀಪಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗುತ್ತದೆ. ನಗರದಲ್ಲಿ  ಪ್ರತ್ಯೇಕ “ಉಸ್ತುವಾರಿ ಕೋಶ’ ಸ್ಥಾಪಿಸಿ, ನೀರಿನ ಸೋರಿಕೆ ಪ್ರಮಾಣ ಶೇ.5ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. 

ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ
ಮಂಗಳೂರಿನಲ್ಲಿರುವ ಪ್ರಸ್ತುತ ಜೈಲನ್ನು ಸ್ಥಳಾಂತರಗೊಳಿಸಬೇಕು ಎಂಬ ಬಗ್ಗೆ ಸುದೀರ್ಘ‌ ಬೇಡಿಕೆಯಂತೆ ಈಗ ನಗರದ ಹೊರವಲಯದಲ್ಲಿ ಸುಸಜ್ಜಿತ ಜೈಲು ನಿರ್ಮಾಣಕ್ಕೆ ಸರಕಾರ ಕೊನೆಗೂ ಮನಸ್ಸು ಮಾಡಿದೆ. ಇತ್ತೀಚೆಗೆ ಜೈಲು ನಿರ್ಮಾಣಕ್ಕೆ ಪೂರಕ ಕಾಮಗಾರಿಗೆ ಮುಡಿಪು ಸಮೀಪದ ಇರಾದಲ್ಲಿ ಸಚಿವ ಖಾದರ್‌ ಅವರು ಶಿಲಾನ್ಯಾಸ ನಡೆಸಿದ್ದರು. ಇದೀಗ ಜೈಲು ನಿರ್ಮಾಣಕ್ಕೆ 85 ಕೋ.ರೂ. ಅನುದಾನವನ್ನು ಮೀಸಲಿಡಲಾಗಿದೆ. 

ಹಳೆ ಬಂದರಿನಲ್ಲಿ ಕೋಸ್ಟಲ್‌ ಬರ್ತ್‌
ಹಳೆ ಮಂಗಳೂರು ಬಂದರಿನಲ್ಲಿ 65 ಕೋ.ರೂ.ಗಳ ಮೊತ್ತದಲ್ಲಿ 300 ಮೀಟರ್‌ ಉದ್ದ “ಕೋಸ್ಟಲ್‌ ಬರ್ತ್‌’ ನಿರ್ಮಾಣ ಹಾಗೂ ಬಂದರಿನ ಆಳವನ್ನು 29 ಕೋ.ರೂ. ವೆಚ್ಚದಲ್ಲಿ 7 ಮೀಟರ್‌ವರೆಗೆ ಹೆಚ್ಚಿಸಲು ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ವಿದ್ಯುತ್‌ ಪ್ರಸರಣಾ ಜಾಲವನ್ನು ಬಲವರ್ಧನೆಗೊಳಿಸುವ ಇರಾದೆಯಿಂದ ಮಂಗಳೂರು ತಾಲೂಕಿನ ಮೂಲ್ಕಿಯಲ್ಲಿ ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಹಾಗೂ ಕರಾವಳಿ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳಿಗೆ 25 ಕೋ.ರೂ. ಒದಗಿಸಲು ಬಜೆಟ್‌ನಲ್ಲಿ ತೀರ್ಮಾನಿಸಲಾಗಿದೆ. 

ನೇತ್ರಾವತಿಗೆ ಇನ್ನೊಂದು ಡ್ಯಾಂ..!
ಪಶ್ಚಿಮವಾಹಿನಿ ಯೋಜನೆಯನ್ನು 2017-18ನೇ ಸಾಲಿನಲ್ಲಿ ಜಾರಿಗೆ ತರಲಾಗಿದೆ.  ಹರೇಕಳ ಎಂಬಲ್ಲಿ ಕುಡಿಯುವ ನೀರು, ನೀರಾವರಿ ಸೌಲಭ್ಯ ಕಲ್ಪಿಸಲು ನೇತ್ರಾವತಿ ನದಿಗೆ ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟನ್ನು 174 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಸಿಎಂ ಬಜೆಟ್‌ ಭಾಷಣದಲ್ಲಿ ಉಲ್ಲೇಖೀಸಿದ್ದಾರೆ. ಈ ಮೂಲಕ ತುಂಬೆಯ ಸಮೀಪದಲ್ಲಿ ನೇತ್ರಾವತಿ ನದಿಗೆ ಇನ್ನೊಂದು ಡ್ಯಾಂ ನಿರ್ಮಾಣಗೊಳ್ಳುವುದು ಖಚಿತವಾಗಿದೆ. ತುಂಬೆ ಡ್ಯಾಂನಿಂದ ನೇತ್ರಾವತಿ ನದಿಯ ದಕ್ಷಿಣ ಭಾಗದ ಪ್ರದೇಶಗಳಿಗೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳಿಗೆ ಸಚಿವ ಯು.ಟಿ. ಖಾದರ್‌ ಅವರು ಕೆಲವು ಸಮಯದ ಹಿಂದೆಯೇ ಮನವಿ ಸಲ್ಲಿಸಿದ್ದರು. 15 ಹಳ್ಳಿಗಳಿಗೆ ಈ ನೀರಿನ ಸೌಲಭ್ಯ ದೊರೆಯಲಿದೆ.

ಮೀನುಗಾರರಿಗೆ ಉಚಿತವಾಗಿ ದೊರೆಯಲಿವೆ ಮೆಶ್‌ ಬಲೆಗಳು..!
ಮೀನು ಮರಿಗಳನ್ನು ಹಿಡಿಯುವುದನ್ನು ತಪ್ಪಿಸಿ ಮತ್ಸ ಸಂಪತ್ತನ್ನು ರಕ್ಷಿಸಲು ಮೀನುಗಾರರಿಗೆ “ಕಾಡ್‌ ಎಂಡ್‌’ನಲ್ಲಿ 35 ಎಂಎಂ ಚೌಕದ ಮೆಶ್‌ ಬಲೆಗಳನ್ನು ಉಚಿತವಾಗಿ ನೀಡಲು ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ. ಇದಕ್ಕಾಗಿ 2,500 ಟ್ರಾಲ್‌ ದೋಣಿಗಳಿಗೆ ತಲಾ 10,000 ರೂ.ಗಳಂತೆ 2.50 ಕೋ.ರೂ. ಅನುದಾನ ಒದಗಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮೀನು ಮಾರಾಟಗಾರರು ಮಾರಾಟವಾಗದೇ ಉಳಿಯುವ ಮೀನನ್ನು ಮೀನು ಮಾರುಕಟ್ಟೆಗಳಲ್ಲಿ ಶೀಥಲೀಕೃತ ಘಟಕದಲ್ಲಿ ಸಂಗ್ರಹಿಸಲು “ಮತ್ಸ  ಜೋಪಾಸಣೆ’ ಯೋಜನೆ’ಯಡಿ ರಾಜ್ಯದಲ್ಲಿ 10 ಶೀಥಲೀಕೃತ ಘಟಕಗಳನ್ನು ತಲಾ 10 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಒಂದು ಕೋ.ರೂ. ಮೀಸಲಿರಿಸಿದೆ. ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಮಹಿಳಾ ಮೀನುಗಾರರಿಗೆ 50,000 ರೂ.ವರೆಗೆ ಶೇ.2ರ ಬಡ್ಡಿ ದರದಲ್ಲಿ ವಾಣಿಜ್ಯ/ಗ್ರಾಮೀಣ ಪ್ರಾದೇಶಿಕ ಬ್ಯಾಂಕ್‌ಗಳಿಂದ ನೀಡಲಾಗುತ್ತಿರುವ ಸಾಲವನ್ನು 2018-19ನೇ ಸಾಲಿನಿಂದ ಶೂನ್ಯ ಬಡ್ಡಿ ದರದಲ್ಲಿ ನೀಡಲು ನಿರ್ಧರಿಸಲಾಗಿದೆ. ಇವೆಲ್ಲವೂ ಮಂಗಳೂರು ಸಹಿತ ಬೇರೆ ಬೇರೆ ಭಾಗದ ಮೀನುಗಾರ ಕುಟುಂಬಗಳಿಗೆ ನೆರವಾಗಲಿದೆ.

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.