Rameshwaram Cafe Case; ಶಂಕಿತ ಬಾಂಬರ್ ಚೆನ್ನೈಯಲ್ಲಿ ಟೋಪಿ ಖರೀದಿ?
ಟೋಪಿ ಜಾಡು ಹಿಡಿದು ಪತ್ತೆಗೆ ಮುಂದಾದ ಎನ್‌ಐಎ ತಂಡ
Team Udayavani, Mar 22, 2024, 11:27 PM IST
ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ನಡೆದು 21 ದಿನ ಕಳೆದರೂ ಶಂಕಿತ ಮಾತ್ರ ಇನ್ನೂ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸಿಕ್ಕಿಬಿದ್ದಿಲ್ಲ. ಆದರೆ ಆತ ಧರಿಸಿದ್ದ ಟೋಪಿಯ ಜಾಡು ಹಿಡಿದು ಹಲವು ಮಹತ್ವದ ಸುಳಿವು ಸಂಗ್ರಹಿಸಿದ್ದಾರೆ.
ಕೃತ್ಯ ಎಸಗಿದ ಬಳಿಕ ಕೆಫೆಯಿಂದ ಒಂದಿಷ್ಟು ಕ್ರಮಿಸಿ ಧಾರ್ಮಿಕ ಸ್ಥಳದ ಬಳಿ ಶಂಕಿತ ಉಗ್ರ ಟೋಪಿಯನ್ನು ಬಿಟ್ಟು ಶರ್ಟ್ ತೆಗೆದು, ರೌಂಡ್-ನೆಕ್ ಟಿ-ಶರ್ಟ್ ಧರಿಸಿ ತೆರಳಿದ್ದ. ಆದರೆ ಅಲ್ಲಿ ಪತ್ತೆಯಾಗಿದ್ದ ಆತನ ಟೋಪಿಯ ಜಾಡು ಹಿಡಿದು ಹೊರಟಾಗ ಇದನ್ನು ಚೆನ್ನೈಯಲ್ಲಿ ಖರೀದಿಸಿರುವ ಸುಳಿವು ಸಿಕ್ಕಿದೆ. ಟೋಪಿ ಖರೀದಿಸಿದ ಚಿಲ್ಲರೆ ಅಂಗಡಿಯ ಒಂದು ತಿಂಗಳ ಸಿಸಿಟಿವಿ ಬ್ಯಾಕ್‌ಅಪ್‌ನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದರು. ಆಗ ಕಳೆದ ಜನವರಿ ಅಂತ್ಯದಲ್ಲಿ ಚಿಲ್ಲರೆ ಅಂಗಡಿಯಲ್ಲಿ ಈ ಟೋಪಿ ಖರೀದಿಸಿರುವುದು ಗೊತ್ತಾಗಿದೆ. ಇಬ್ಬರು ಯುವಕರು ಚಿಲ್ಲರೆ ಅಂಗಡಿಗಳಲ್ಲಿ ಟೋಪಿ, ಇತರ ವಸ್ತುಗಳನ್ನು ಖರೀದಿಸುವ ಫೂಟೇಜ್ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಶಪಡಿಸಿಕೊಂಡ ಟೋಪಿಯಲ್ಲಿ ಕೂದಲು ಪತ್ತೆಯಾಗಿದ್ದು ಇದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್)ಕ್ಕೆ ಕಳುಹಿಸಲಾಗಿದೆ. ಇದರ ಆಧಾರದ ಮೇಲೆ ವೈಜ್ಞಾನಿಕವಾಗಿ ಕೆಲವೊಂದು ಪ್ರಕ್ರಿಯೆ ಮೂಲಕ ಆತನ ಕುಟುಂಬದ ಮೂಲ ಪತ್ತೆಹಚ್ಚಲು ಒಂದು ತಂಡ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.