ಜಮೀನು ನಕ್ಷೆಗಳು ಆನ್ ಲೈನ್ ನಲ್ಲೇ ಲಭ್ಯ; ನಕ್ಷೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ


Team Udayavani, Oct 27, 2022, 1:37 PM IST

ಜಮೀನು ನಕ್ಷೆಗಳು ಆನ್ ಲೈನ್ ನಲ್ಲೇ ಲಭ್ಯ; ನಕ್ಷೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Representative Image Used

ಬೆಂಗಳೂರು: ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರ ನಕ್ಷೆಗಳು ಇನ್ನು ಮುಂದೆ ಆನ್‌ ಲೈನ್‌ ನಲ್ಲೇ ಸಿಗುವುದಕ್ಕೆ ಈಗ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.

11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್‌, ಹದ್ದುಬಸ್ತು ಮತ್ತು ಇತರೆ ನಕ್ಷೆಗಳಿಗೆ ಅರ್ಜಿ ಸಲ್ಲಿಸಿದ ನಾಗರಿಕರು https:// 103,138.196.154/service19/Report/ ವೆಬ್​ಸೈಟ್ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಸಹ ವೀಕ್ಷಿಸಬಹುದು.

ಅರ್ಜಿ ಸ್ವೀಕಾರಗೊಂಡು ಸರ್ವೇ ಸಿಬ್ಬಂದಿ ತಮ್ಮ ಜಮೀನಿಗೆ ಬಂದು ಸಂಬಂಧಿಸಿದ ಮಾಪನ ಕಾರ್ಯ ಮುಗಿಸಿ ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್‌ಸೈಟ್‌ನಲ್ಲಿ ಆ ನಕ್ಷೆಗಳನ್ನು ಸಾರ್ವಜನಿಕರು ಮುದ್ರಣ ಪ್ರತಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವಾಗ ನಾಗರಿಕರು ಹಣ ಪಾವತಿಸಿರುವ ಕಾರಣ ನಕ್ಷೆ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಮುದ್ರಣ ಪ್ರತಿ ಪಡೆಯಲು ಯಾವುದೇ ಹೆಚ್ಚುವರಿ ಹಣ ಕೊಡಬೇಕಾಗಿರುವುದಿಲ್ಲ. ಇದರಿಂದ ತಮ್ಮ ನಕ್ಷೆಗಳ ಪ್ರಿಂಟ್‌ ಔಟ್‌ ಪಡೆಯಲು ಸರ್ವೆ ಕಚೇರಿಗಳಿಗೆ ಹೋಗಬೇಕಾಗಿರುವುದಿಲ್ಲ.

ವೆಬ್‌ ಸೈಟ್‌ಗೆ ಭೇಟಿ ನೀಡಿದಾಗ ನಾಗರಿಕರು ಯಾವ ನಕ್ಷೆಗೆ ಅರ್ಜಿ ಸಲ್ಲಿಸಿರುತ್ತಾರೋ ಆ ಅರ್ಜಿ ಸಂಖ್ಯೆ, ಮೊಬೈಲ್‌ ಸಂಖ್ಯೆ, ಸರ್ವೆ ನಂಬರ್‌, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್‌ ಹೀಗೆ ವಿವಿಧ ಮಾಹಿತಿಗಳನ್ನು ದಾಖಲಿಸಿ ತಮ್ಮ ನಕ್ಷೆ ಪಡೆದುಕೊಳ್ಳಬಹುದು ಎಂದು ಸರ್ವೇ ಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.

ಆ್ಯಪ್​ ಅಭಿವೃದ್ಧಿ

ರೈತರು ತಮ್ಮ ಜಮೀನಿನ ಪೋಡಿ ನಕ್ಷೆಯನ್ನು (ಸ್ಕೆಚ್) ತಾವೇ ತಯಾರಿಸಿಕೊಳ್ಳುವ ಸ್ವಯಂ ಸೇವೆಯ ಹೊಸ ವ್ಯವಸ್ಥೆಯನ್ನು ಕಂದಾಯ ಇಲಾಖೆ ಸಿದ್ದಪಡಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯು ಸ್ವಾವಲಂಬಿ ಎಂಬ ಹೆಸರಿನ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ.

ಈ ಆ್ಯಪ್ ಸಹಾಯದಿಂದ ರೈತರು ಜಮೀನಿನ ಪೋಡಿಯನ್ನು ಸ್ವತಃ ತಯಾರಿಸಿ ಕೊಳ್ಳಬಹುದು. ಹಾಗಾದರೆ ಜಮೀನಿನ ಪೋಡಿ ಸ್ಕೆಚ್ ಎಂದರೇನು? ಪೋಡಿ ಯಾವಾಗ ಮಾಡಿಸಬೇಕು? ಪೋಡಿ ಮಾಡುವುದರಿಂದಾಗುವ ಪ್ರಯೋಜನವೇನೆಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.

ಪೋಡಿ ಎಂದರೇನು?

ಪೋಡಿ ಎಂದರೆ ಜಮೀನಿನ ಭಾಗ ಮಾಡುವುದು ಎಂದರ್ಥ. ಅಂದರೆ ಒಂದೇ ಸರ್ವೇ ನಂಬರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಎಲ್ಲಾ ಸದಸ್ಯರ ಹೆಸರಿನ ಮೇಲೆ ಸರ್ವೇ ನಂಬರ್ ಮಾಡುವುದನ್ನೇ ಪೋಡಿ ಎಂದು ಕರೆಯುವರು.

ಕುಟುಂಬದ ಸದಸ್ಯರ ಪಾಲುಗಾರಿಕೆ, ಭೂ ಆಸ್ತಿಯ ಕೆಲವು ಭಾಗ ಮಾರಾಟ, ದಾನಪತ್ರ, ನಿವೇಶನಕ್ಕೆ ಬಳಕೆ, ಭೂ ಪರಿವರ್ತನೆ ಹೀಗೆ ಹಲವಾರು ಚಟುವಟಿಕೆಗಳಿಗೆ ಪೋಡಿ ನಕ್ಷೆ ತುಂಬಾ ಅವಶ್ಯಕವಾಗಿದೆ. ಒಂದು ಸರ್ವೇ ನಂಬರಿನಲ್ಲಿ ಹಲವರ ಹೆಸರಿದ್ದರೆ ಮುಂದೆ ಸರ್ಕಾರದಿಂದ ಸೌಲಭ್ಯ ಪಡೆಯುವುದಕ್ಕೆ ತೊಂದರಯಾಗುತ್ತದೆ. ಬ್ಯಾಂಕಿನಲ್ಲಿ ಸಾಲ ಸೌಲಭ್ಯವೂ ಸಿಗುವುದಿಲ್ಲ. ಜಮೀನು ಮಾರಾಟ ಸಂದರ್ಭದಲ್ಲಿಯೂ ತೊಡಕಾಗುವ ಸಾಧ್ಯತೆ ಇರುತ್ತದೆ. ಪೋಡಿ ನಕ್ಷೆ ಮಾಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ಈಗ ಆನ್ ಲೈನ್ ವ್ಯವಸ್ಥೆಯನ್ನು ಮಾಡಿದೆ. ರೈತರು ಸ್ವತಃ ಅವರೆ ಮೊಬೈಲ್ ನಲ್ಲಿ ಜಮೀನಿನ ಪೋಡಿ ನಕ್ಷೆ ತಯಾರಿಸಿಕೊಳ್ಳಬಹುದು. ಸಹೋದರರು, ಸಂಬಂಧಿಕರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಭಾಗ ಮಾಡಿಕೊಳ್ಳಲು ಇದು ಅವಕಾಶ ಕಲ್ಪಿಸಿದೆ.

ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದರೆ ತಮ್ಮ ಐದು ಎಕರೆ ಭೂಮಿಯನ್ನು ಯಾರಿಗೆ ಎಷ್ಟು ಭಾಗ ಎಂಬುದನ್ನು ನಿರ್ಧರಿಸಿ ಸ್ಕೆಚ್ ಸಿದ್ಧಪಡಿಸಬಹುದು. ಎಲ್ಲರೂ ಒಪ್ಪಿದ ನಂತರ ಸ್ಕೆಚ್ ಅನ್ನು ತಹಶಿಲ್ದಾರ್​ ಕಚೇರಿಯ ಭೂ ದಾಖಲೆಗಳ ವಿಭಾಗಕ್ಕೆ ಅಪ್ಲೋಡ್ ಮಾಡಿದರೆ ಸಾಕು, ನೋಂದಣಿ ಇಲಾಖೆಯಲ್ಲಿ ಆ ಸ್ಕೆಚ್ ನ ಗಡಿಗಳಿಗೆ ಅನುಗುಣವಾಗಿ ನೋಂದಣಿ ಮಾಡಲಾಗುವುದು. ರೈತರಿಗೆ ಸ್ವಾವಲಂಬಿ ಆ್ಯಪ್ ಕೇವಲ ಪೋಡಿ ನಕ್ಷೆ ಅಷ್ಟೇ ಅಲ್ಲದೆ ಜಮೀನಿನ 11 ಇ, ಭೂ ಪರಿವರ್ತನೆ ಮತ್ತು ವಿಭಾಗ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಮೊಬೈಲ್ ನಲ್ಲಿ ಪೋಡಿ ನಕ್ಷೆ ಪಡೆಯುವುದು ಹೇಗೆ?

ರೈತರು ಆನ್​ಲೈನ್ ಮೂಲಕ ಪೋಡಿ ನಕ್ಷೆ ಪಡೆಯಲು ಈ https://bhoomojini.karnataka.gov.in/Service27 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಕಂದಾಯ ಇಲಾಖೆಯ ಸ್ವಾವಲಂಬಿ ಆ್ಯಪ್ ಪೇಜ್ ಓಪನ್ ಆಗುತ್ತದೆ. ರೈತರು ಮೊಬೈಲ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ನಂತರ ಮೊಬೈಲ್ ಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ಹೊಸ ಅರ್ಜಿ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್ ಹಾಗೂ ಪಹಣಿಯಲ್ಲಿ ಹೆಸರು ಒಂದೇ ರೀತಿಯಿದ್ದರೆ ಸಮಸ್ಯೆಯಾಗುವುದಿಲ್ಲ. ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ನಮೂದಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಪೋಡಿ ನಕ್ಷೆ ಸಿಗುತ್ತದೆ.

ಟಾಪ್ ನ್ಯೂಸ್

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.