ಈ ದಂಪತಿಗೆ ಒಂಬತ್ತು ಹೆಣ್ಮಕ್ಕಳು, ಹತ್ತನೇ ಮಗು ಅಂತೂ ಗಂಡು!
Team Udayavani, Mar 26, 2017, 10:07 AM IST
ಮಧುಗಿರಿ/ತುಮಕೂರು: ಮಧುಗಿರಿ ತಾಲೂಕಿನ ಕುರಿಕೇನಹಳ್ಳಿಯಲ್ಲಿ ಮಹಿಳೆಯೊಬ್ಬಳು “ಗಂಡು ಮಗ ಇದ್ದರೆ ನಿಮ್ಮ ವಂಶ ಉದ್ಧಾರವಾಗುತ್ತೆ, ನಿನ್ನ ಕಷ್ಟ ದೂರವಾಗುತ್ತೆ’ ಎಂಬ ಜ್ಯೋತಿಷಿ ಮಾತಿಗೆ ಕಟ್ಟು ಬಿದ್ದು, 9 ಹೆಣ್ಣು ಮಕ್ಕಳಾದರೂ ಗಂಡು ಮಗುವಿಗಾಗಿ ಕಾದಿದ್ದು, ಕೊನೆಯದಾಗಿ 10ನೇ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಧುಗಿರಿ ತಾಲೂಕಿನ ಕುರಿಕೇನಹಳ್ಳಿ ಗ್ರಾಮದ ಭಾಗ್ಯಮ್ಮ (39) ಎಂಬುವರೇ ಈ 10 ಮಕ್ಕಳ ತಾಯಿ. ಮದುವೆಯಾಗಿ 23 ವರ್ಷದಲ್ಲಿ ಹತ್ತು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಗ್ರಾಮದ ರಾಮಕೃಷ್ಣ (45) ಮತ್ತು ಭಾಗ್ಯಮ್ಮ (39) ದಂಪತಿಗೆ ಮದುವೆಯಾದ ಒಂದು ವರ್ಷಕ್ಕೇ ಒಂದು ಹೆಣ್ಣು
ಮಗು ಜನಿಸಿತು. ಈ ಮಧ್ಯೆ, ಜ್ಯೋತಿಷಿಯೊಬ್ಬ “ನಿನಗೆ ವಂಶೋದ್ಧಾರಕ ಬೇಕು, ವಂಶೋದ್ಧಾರಕ ಹುಟ್ಟಿದರೆ ನಿನ್ನ
ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ’ ಎಂದಿದ್ದ. ಜ್ಯೋತಿಷಿ ಮಾತಿಂದ ಪ್ರಭಾವಿತರಾದ ರಾಮಕೃಷ್ಣ, ತನ್ನ ಪತ್ನಿಗೆ ಏನೇ ತೊಂದರೆಯಾದರೂ ಪರವಾಗಿಲ್ಲ, ಗಂಡು ಮಗು ಬೇಕು ಎಂದು ಹಠ ಹಿಡಿದರು. ಪರಿಣಾಮ ಭಾಗ್ಯಮ್ಮ 9 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಈಗ 10ನೇ ಬಾರಿಗೆ ಗಂಡು ಮಗು ಜನಿಸಿದೆ. ಇದರಿಂದ ದಂಪತಿ ಮುಖದಲ್ಲಿ ಮಂದಹಾಸ ಮಿನುಗಿದೆ. ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಭಾಗ್ಯಮ್ಮ ದಾಖಲಾಗಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನನಗೆ ಮದುವೆಯಾಗಿ 23 ವರ್ಷವಾಗಿದೆ. 22 ವರ್ಷದ ಮಗಳಿದ್ದಾಳೆ. 9 ಹೆಣ್ಣು ಮಕ್ಕಳಿವೆ. ನಮ್ಮ ಯಜಮಾನಪ್ಪ
ಗಂಡು ಮಗು ಬೇಕೆಂದು ಆಸೆ ಇಟ್ಟುಕೊಂಡಿದ್ರು, ಈಗ ಗಂಡು ಮಗು ಹುಟ್ಟಿದೆ. ಮಗು ಆರೋಗ್ಯವಾಗಿದೆ.
– ಭಾಗ್ಯಮ್ಮ, 10 ಮಕ್ಕಳ ಹೆತ್ತ ತಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.