ಪಕ್ಷಕ್ಕೆ ನಾನು ಫ್ರೆಶ್ಶರ್, ನನಗೆ ಗಂಟೆ ಕಟ್ಟಬೇಡಿ
Team Udayavani, May 2, 2017, 10:40 AM IST
ಬೆಂಗಳೂರು: “ನಾನು ಅಮೆರಿಕದಲ್ಲಿ ಕಾಲೇಜಿಗೆ ಸೇರಿದಾಗ ಫ್ರೆಶ್ಶರ್, ಜೂನಿಯರ್ಸ್, ಸೀನಿಯರ್ಸ್ ಎಂದೆಲ್ಲಾ ಇತ್ತು. ಈಗ ಬಿಜೆಪಿಯಲ್ಲಿ ನಾನು ಫ್ರೆಶ್ ಮ್ಯಾನ್’. ಬಿಜೆಪಿಯಲ್ಲಿನ ಬಿಕ್ಕಟ್ಟು ಬಗೆಹರಿಸುವ ಕುರಿತ ಪತ್ರಕರ್ತರ ಪ್ರಶ್ನೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಪ್ರತಿಕ್ರಿಯೆ ಇದು. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ ಎಲ್ಲರನ್ನೂ ಒಟ್ಟು ಸೇರಿಸಿ ಅಧಿಕಾರಕ್ಕೆ ತಂದ ಅನುಭವ ಇರುವ ನೀವು ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಯಡಿಯೂರಪ್ಪ ಬಣ, ಈಶ್ವರಪ್ಪ ಬಣವನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡುತ್ತೀರಾ ಎಂಬ ಪ್ರಶ್ನೆಗೆ, ತಾನು ಫ್ರೆಶ್ಯರ್, ಅಂಥದ್ದರಲ್ಲಿ ನನ್ನನ್ನು ನೀವು ಗಂಟೆ ಕಟ್ಟಿ ಅಂತ ಹೇಳಿ ಆ ಪಾರುಪತ್ಯ ಕೊಡೋ ಪ್ರಯತ್ನ ಮಾಡ್ತಾ ಇದ್ದೀರಿ, ಧನ್ಯವಾದಗಳು
ಎಂದಷ್ಟೇ ಉತ್ತರಿಸಿ ಮುಗುಳ್ನಕ್ಕರು.
ಬಿಜೆಪಿಗೆ ಫ್ರೆಶ್ಶರ್ ಆದರೂ ಅನುಭವ ದೊಡ್ಡದಲ್ಲವೇ ಎಂಬ ಮತ್ತೂಂದು ಪ್ರಶ್ನೆಗೆ, ಬಿಜೆಪಿಯಲ್ಲಿ ಮಾರ್ಗದರ್ಶನ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಅವರು ಯೋಗ್ಯ ಮಾರ್ಗದರ್ಶನ ಮಾಡುತ್ತಾರೆ.
ಈಗ ತಾನೇ ಬಿಜೆಪಿಗೆ ಒಬ್ಬ ವಿನಮ್ರ ಕಾರ್ಯಕರ್ತನಾಗಿ ಸೇರಿದ್ದೇನೆ ಅಷ್ಟೆ ಎಂದರು. ಸೋಮವಾರ ತಮ್ಮ 76ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಕ್ಕಟ್ಟು ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಬಿಕ್ಕಟ್ಟಿನಿಂದ ಪಕ್ಷಕ್ಕೆ ಹಾನಿಯಾಗುವು
ದಿಲ್ಲವೇ ಎಂಬ ಪ್ರಶ್ನೆಗೆ, ತನಗೆ ಒಳ್ಳೆಯದಾಗಲಿ ಎಂದು ಹಾರೈಸಲು ನೀವೆಲ್ಲಾ ಬಂದಿದ್ದೀರಿ. ಬಾಯಿ ಸಿಹಿ ಮಾಡಿಕೊಂಡು ಹೋಗಿ. ಈ ಜಂಜಾಟದಲ್ಲಿ ತನ್ನನ್ನು ಎಳೆದಾಡುವ ಪ್ರಯತ್ನ ಮಾಡಬೇಡಿ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪದ ಬಗ್ಗೆ, ಮುಂದಿನ ದಿನಗಳಲ್ಲಿ ಆ ರೀತಿಯ ಬೆಳವಣಿಗೆ ನಡೆಯಬಹುದು. ಆದರೆ, ಬಿಜೆಪಿ ಶಕ್ತಿಯುತವಾಗಿ ಹೊರಹೊಮ್ಮಿದೆ. ಆದ್ದರಿಂದ ಆ ಹೊಂದಾಣಿಕೆ ಬಗ್ಗೆ ತನಗೆ ಕಳವಳ ಇಲ್ಲ ಎಂದು ಹೇಳಿದರು.
ಬಿಜೆಪಿ ಶಕ್ತಿಯುತವಾಗಿದ್ದರೆ ನಂಜನ ಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಸೋತಿದ್ದೇಕೆ ಎಂಬ ಪ್ರಶ್ನೆಗೆ, ಬಿಜೆಪಿ
ಸೋತಿರಬಹುದು. ಆದರೆ, ಎರಡು ಕ್ಷೇತ್ರದ ಉಪ ಚುನಾವಣೆಗಳು ರಾಜ್ಯ ಅಥವಾ ದೇಶದ ರಾಜಕಾರಣವನ್ನು
ನಿರ್ಧರಿಸುವುದಿಲ್ಲ. ಮುಂದಿನ ವರ್ಷದ ಚುನಾವಣೆ ರಾಜ್ಯದ ಭವಿಷ್ಯ ನಿರ್ಧಾರದ ಚುನಾವಣೆ. ಅದರಲ್ಲಿ ಬಿಜೆಪಿ ಗೆಲ್ಲಲಿದೆ
ಎಂದು ವಿಶ್ವಾಸ ವ್ಯಕ್ತಪಡಿಸಿದರು.
**
“2019ರಲ್ಲೂ ಮೋದಿ ಪ್ರಧಾನಿ ಮಾಡಲು ಅರ್ಪಿಸಿಕೊಳ್ಳುವೆ’
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 2019ರ ಲೋಕಸಭೆ ಚುನಾವಣೆಯಲ್ಲೂ ನಿಚ್ಚಳ ಬಹುಮತದಿಂದ ಆರಿಸಿ ದೇಶ ಮುನ್ನಡೆಸಿಕೊಂಡು ಹೋಗುವ ಶಕ್ತಿ, ಸಾಮರ್ಥ್ಯ ತಂದುಕೊಡಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವುದಾಗಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಸೋಮವಾರ ತಮ್ಮ 76ನೇ ಜನ್ಮದಿನ
ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಾಂಗ ಸಚಿವ ನಾಗಿ ಹತ್ತಾರು ದೇಶಗಳಿಗೆ ಹೋಗಿದ್ದೇನೆ. ಆದರೆ, ಮೋದಿ ಅಧಿಕಾರಾವಧಿಯ ಕಳೆದ 3 ವರ್ಷದಲ್ಲಿ ಭಾರತದ ಬಗ್ಗೆ ವಿದೇಶದಲ್ಲಿ ವಿಶೇಷ ಅಭಿಮಾನ, ನಿರೀಕ್ಷೆ ಇದೆ. ವಿಶ್ವದ ಅಗ್ರಮಾನ್ಯ ನಾಯಕರ ಶ್ರೇಣಿಯಲ್ಲಿ ಮೋದಿ ಸ್ವಾಭಾವಿಕವಾಗಿ ಸೇರಿಹೋಗಿದ್ದಾರೆ. 114 ಕೋಟಿ ಜನರ ಪ್ರತಿನಿಧಿ, ನಾಯಕರಾಗಿರುವ ಅವರನ್ನು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅಮೆರಿಕ, ಚೀನಾ, ರಷ್ಯಾ ಮತ್ತಿತರ ರಾಷ್ಟ್ರಗಳು ಅವರ ನಾಯಕತ್ವಕ್ಕೆವಿಶೇಷ ಗೌರವ ಕೊಡುತ್ತಿದೆ ಎಂಬುದನ್ನು ತನ್ನ ಹತ್ತಾರು ವರ್ಷಗಳ ಅನುಭವದ ಮೂಸೆಯಿಂದ ಹೇಳುತ್ತಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.