ನನಗೂ ಜೀವ ಬೆದರಿಕೆ ಪತ್ರಗಳು ಬಂದಿವೆ: ಬಿ.ಟಿ. ಲಲಿತಾ ನಾಯಕ್
ದೇವಸ್ಥಾನಗಳ ನಿರ್ಮಾಣಕ್ಕಿಂತಲೂ ಗ್ರಂಥಾಲಯ, ಶಾಲೆ ನಿರ್ಮಾಣವಾಗಬೇಕು
Team Udayavani, Oct 24, 2022, 10:32 PM IST
ದಾವಣಗೆರೆ: ದಾವಣಗೆರೆಯಿಂದ ಎರಡು ಸಹಿತ ನನಗೆ ಹಲವಾರು ಜೀವ ಬೆದರಿಕೆ ಪತ್ರಗಳು ಬಂದಿವೆ. ಸಾವು ಬರುವುದಾದರೇ ಇಂದೇ ಬರಲಿ. ನಾನು ಸಾಯುವ ತನಕ ಮಾತನಾಡುತ್ತೇನೆ. ಕೆಲಸ ಮಾಡುತ್ತೇನೆ ಎಂದು ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ದಾವಣಗೆರೆಯಲ್ಲಿ ಮಾತನಾಡಿ ಹೋದ ಬಳಿಕ ಜೀವ ಬೆದರಿಕೆ ಪತ್ರ, ಕರೆಗಳು ಬಂದಿವೆ. ಕೊಲೆಯಾಗುವ ದಿನ ನೋಡೋಣ. ಅಲ್ಲಿಯ ವರೆಗೆ ನಾನು ಕೆಲಸ ಮಾಡುತ್ತೇನೆ. ನಟ ಚೇತನ್ ದೈವಾರಾಧನೆ ಬಗ್ಗೆ ಮಾತನಾಡಿದ್ದಕ್ಕೆ ಎಷ್ಟೊಂದು ಆಕ್ರೋಶ ವ್ಯಕ್ತವಾಯಿತು. ದೈವಾರಾಧನೆ ಪುರೋಹಿತ ಶಾಹಿಯದ್ದಲ್ಲ. ಆದಿವಾಸಿಗಳದ್ದು. ಮನುಷ್ಯರ ಕೂಗು ದೇವರ ಸ್ವರೂಪದಲ್ಲಿ ಕಾಣುತ್ತದೆ. ಯಾರಾದರೂ ದೇವರನ್ನು ಕೂಡಿ ಹಾಕಲು ಸಾಧ್ಯವೆ? ಮೌಡ್ಯ ಬಿತ್ತುವ ದೇವಸ್ಥಾನಗಳ ನಿರ್ಮಾಣಕ್ಕಿಂತಲೂ ಗ್ರಂಥಾಲಯ, ಶಾಲೆ ನಿರ್ಮಾಣವಾಗಬೇಕು.
ಜನತಾ ಪಾರ್ಟಿ ಬರೀ ರಾಜಕೀಯ ಪಕ್ಷ ಅಲ್ಲ, ಮನುಷ್ಯರನ್ನು ಬೆಸೆಯುವ ಸಾಂಸ್ಕೃತಿಕ ಕೇಂದ್ರ. ಎಲ್ಲ ಪ್ರಗತಿಪರ ಚಿಂತಕರು ಶೇ.100ರಷ್ಟು ಪರಿಪೂರ್ಣರಲ್ಲ. ಕೆಲವರಲ್ಲಿ ಜಾತಿ, ಧರ್ಮದ ವಿಚಾರಗಳಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.