Karnataka Politics; ನಾನು ಲೋಕಸಭೆಗೆ ಹೋಗಲ್ಲ, ನನ್ನ ಮಗನೂ ರಾಜಕೀಯಕ್ಕೆ ಬರಲ್ಲ: ಸೋಮಶೇಖರ್
Team Udayavani, Aug 24, 2023, 1:27 PM IST
ಬೆಂಗಳೂರು: ನಾನು ಲೋಕಸಭೆಗೂ ಹೋಗಲ್ಲ, ನನ್ನ ಮಗನೂ 100% ರಾಜಕೀಯಕ್ಕೆ ಬರುವುದಿಲ್ಲ. ಒಂದು ವೇಳೆ ನಾನು ಹಾಗೆ ಮಾಡಿದರೆ ಆ ದಿನವೇ ನನ್ನ ಬಂದು ಕೇಳಿ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗುವ ಬಗ್ಗೆ ಇಲ್ಲಿಯವರೆಗೆ ಕರೆ ಬಂದಿಲ್ಲ, ನಾನು ಕಾಯುತ್ತಿದ್ದೇನೆ. ಮೆಸೇಜ್ ಬಂದರೆ ನಾಳೆ ಹೋಗುತ್ತೇನೆ. ನಾನು ಅಮಿತ್ ಶಾ ಜೊತೆ ಚೆನ್ನಾಗಿದ್ದೇನೆ ಅಂತ ಟಾರ್ಗೆಟ್ ಏನೂ ಇಲ್ಲ. ಅವರು ಸಹಕಾರ ಮಂತ್ರಿ, ನಾನು ಸಹಕಾರ ಮಂತ್ರಿ ಆಗಿದ್ದೆ ಅಷ್ಟೇ ಎಂದರು.
ಇದನ್ನೂ ಓದಿ:Ramanagara: ವಾಹನದ ಮೇಲೆ ಮರ ಬಿದ್ದು 8 ಮಂದಿಗೆ ಗಾಯ, ವಾಹನ ಸಂಪೂರ್ಣ ಜಖಂ
ನಕಲಿ ಬಿಲ್ ಮಾಡಿದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಎಚ್ ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದ ಜನತೆ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅವರ ಅಭ್ಯರ್ಥಿ ನಾಲ್ಕು ಬಾರಿ ಸೋತಿದ್ದಾರೆ? ಡಿಸಿಎಂ ಎಸ್ ಟಿಐ ಆದೇಶ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ತನಿಖೆ ನಡೆಯುತ್ತಿದೆ. ಯಾವುದೇ ಸಣ್ಣ ಪುಟ್ಟದ್ದು ನಕಲಿಯೆಂದು ಗೊತ್ತಾದರೆ ಕ್ರಮವಹಿಸಲಿ ಎಂದರು.
ಆಹ್ವಾನವಿದೆ: ಹೆಬ್ಬಾರ್
ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಮಾತನಾಡಿ, ಕಾಂಗ್ರೆಸ್ ಹೋಗುವ ಬಗ್ಗೆ ಅಪೇಕ್ಷೆ ಪಡುತ್ತಿದ್ದಾರೆ, ಆಹ್ವಾನ ಮಾಡುತ್ತಾರೆ. ಬೆಂಬಲಿಗರು ಅವರ ಅಭಿಪ್ರಾಯ ಹೇಳುತ್ತಾರೆ. ಯಾವುದನ್ನು ಯಾವಾಗ ಹೇಳಬೇಕೆಂದು ನಮಗೆ ಗೊತ್ತಿದೆ. ಕ್ಷೇತ್ರದಲ್ಲಿ ನನ್ನ ವಿರುದ್ಧ ಇದ್ದವರ ಬಗ್ಗೆ ಶಿಸ್ತುಕ್ರಮವನ್ನು ಬೆಂಗಳೂರಿಗೆ ಬಂದು ಗಮನಿಸಿದ್ದೇನೆ. ಈಗಲೇ ಸಂಶಯ ಯಾಕೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.