34 ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ ಬಡ್ತಿ


Team Udayavani, Oct 10, 2017, 9:00 AM IST

10-4.jpg

ಬೆಂಗಳೂರು: ರಾಜ್ಯದ ಹಿರಿಯ ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ಗೆ ಬಡ್ತಿ ಭಾಗ್ಯ ದೊರೆತಿದೆ. ಸೋಮವಾರ ನಡೆದ
ಯುಪಿಎಸ್‌ಸಿ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನವಾಗಿದ್ದು, ಒಂದೇ ಬಾರಿಗೆ 34 ಕನ್ನಡಿಗ ಅಧಿಕಾರಿಗಳು ಐಎಎಸ್‌ ಶ್ರೇಣಿಗೆ
ಬಡ್ತಿ ಹೊಂದಲಿದ್ದಾರೆ.

ಡಾ. ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಅಧಿಕಾರಿಗಳು ವಿಚಾರಣೆ ಹೆಸರಿನಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ಕಾರ್ಯದರ್ಶಿ ಎಚ್‌. ಬಸವರಾಜೇಂದ್ರ, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಆಪ್ತ ಕಾರ್ಯದರ್ಶಿ ಡಾ. ಗೋಪಾಲ ಹೆಚ್‌. ಎನ್‌. ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್‌ ಅವರ ಆಪ್ತ ಕಾರ್ಯದರ್ಶಿ ಡಾ. ಶಿವಶಂಕರ ಎನ್‌. ಸಚಿವ ತನ್ವಿರ್‌ ಸೇಠ್ ಆಪ್ತ ಕಾರ್ಯದರ್ಶಿ ರವಿಕುಮಾರ್‌ ಎಂ.ಆರ್‌. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಆಪ್ತ ಕಾರ್ಯದರ್ಶಿ ವೈ.ಎಸ್‌. ಪಾಟೀಲ್‌ ಐಎಎಸ್‌ ಗೆ ಬಡ್ತಿ ಪಡೆದ ಪ್ರಮುಖ ಅಧಿಕಾರಿಗಳು.

ಇನ್ನು ಡಾ. ಬಿ.ಸಿ. ಸತೀಶ್‌, ಡಾ. ಅರುಂಧತಿ ಚಂದ್ರಶೇಖರ, ಡಾ. ರವಿ ಎಂ. ಆರ್‌., ರವೀಂದ್ರ ಪಿ.ಎನ್‌. ಜ್ಯೋತಿ ಕೆ., ಮೀನಾ ನಾಗರಾಜ ಸಿ.ಎನ್‌., ಅಕ್ರಂ ಪಾಷಾ, ಕೆ. ಲೀಲಾವತಿ, ಪಿ. ವಸಂತಕುಮಾರ್‌, ಕರಿಗೌಡ, ಶಿವಾನಂದ ಕಾಪಸಿ, ಗಂಗೂಬಾಯಿ ರಮೇಶ್‌ ಮಾನಕರ್‌, ಕವಿತಾ ಮನ್ನಿಕೇರಿ, ಆರ್‌. ಎಸ್‌. ಪೆದ್ದಪ್ಪಯ್ಯ, ಜಿ.ಸಿ. ವೃಷಭೇಂದ್ರ ಮೂರ್ತಿ, ಡಾ. ಕೆ. ಹರೀಶ್‌ ಕುಮಾರ್‌, ಎಂ.ಬಿ. ರಾಜೇಶ್‌ಗೌಡ, ಮಹಾಂತೇಶ್‌ ಬೀಳಗಿ, ರಮೇಶ್‌ ಕೆ.ಎನ್‌. ಎಸ್‌. ಹೊನ್ನಾಂಬ, ಆರ್‌. ಲತಾ, ಕೆ. ಶ್ರೀನಿವಾಸ, ಎಂ.ಎಸ್‌. ಅರ್ಚನಾ, ಕೆ. ಎ. ದಯಾನಂದ, ಜಿ. ಜಗದೀಶ್‌, ಕೆ. ಎಂ. ಜಾನಕಿ, ಸಿ. ಸತ್ಯಭಾಮ, ಕೆ.ಎಸ್‌. ಲತಾಕುಮಾರಿಗೆ ಐಎಎಸ್‌ ಬಡ್ತಿ ಲಭಿಸಿದೆ. 

ರಾಜ್ಯ ಸರ್ಕಾರ 56 ಜನರ ಪಟ್ಟಿಯನ್ನು ಸಿದ್ದಪಡಿಸಿ ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸಿ ಕೊಟ್ಟಿತ್ತು. ಉತ್ತರ
ಭಾರತದ ಐಎಎಸ್‌ ಅಧಿಕಾರಿಗಳ ಲಾಬಿಯಿಂದಾಗಿ ಕನ್ನಡಿಗ ಅಧಿಕಾರಿಗಳು ಐಎಎಸ್‌ಗೆ ಬಡ್ತಿ ಪಡೆಯಲು ನಿರಂತರ
ಹೋರಾಟ ನಡೆಸಬೇಕಾಯಿತು. ಅವರ ಹೋರಾಟದ ಫ‌ಲವಾಗಿ ನಾಲ್ಕು ವರ್ಷಗಳ ನಂತರ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ಎನ್ನುವಂತೆ 34 ಜನ ಹಿರಿಯ ಕೆಎಎಸ್‌ ಅಧಿಕಾರಿಗಳು ಐಎಎಸ್‌ ಶ್ರೇಣಿಗೇರುವಂತಾಗಿದೆ.

ರಾಜಮ್ಮ ಚೌಡರೆಡ್ಡಿಬಡ್ತಿಗೆ ಬ್ರೇಕ್‌ ?
ಬಿಡಿಎ ಅಧಿಕಾರಿಯಾಗಿದ್ದ ರಾಜಮ್ಮ ಎ. ಚೌಡರೆಡ್ಡಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿರುವುದರಿಂದ ಅವರಿಗೆ ದೊರೆಯಬೇಕಿದ್ದ ಬಡ್ತಿಯನ್ನು ತಡೆ ಹಿಡಿಯಲಾಗಿದೆ. ಕ್ಯಾಪ್ಟನ್‌ ಡಾ. ರಾಜೇಂದ್ರ ಅವರಿಗೆ ಕೋರ್ಟ್‌ ಆದೇಶದ ಮೂಲಕವೇ ಐಎಎಸ್‌ ಬಡ್ತಿ ನೀಡಲಾಗಿತ್ತು. ಉಳಿದ ಅಧಿಕಾರಿಗಳ ಬಡ್ತಿಗೆ ಇನ್ನೂ ಅರ್ಹತೆ ಪಡೆದಿಲ್ಲ ಎನ್ನಲಾಗಿದೆ.

ಕುರುಬರೇ ಇಲ್ವಲ್ಲಾ ?
ಹಿರಿಯ ಕೆಎಎಸ್‌ ಅಧಿಕಾರಿಗಳ ಪಟ್ಟಿಯನ್ನು ಐಎಎಸ್‌ ಶ್ರೇಣಿಗೆ ಬಡ್ತಿ ನೀಡಲು ಶಿಫಾರಸು ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಪಟ್ಟಿಯನ್ನು ತೋರಿಸಲಾಗಿತ್ತು. ಆ ಪಟ್ಟಿ ನೋಡಿ ಇದರಲ್ಲಿ ಕುರುಬರು ಎಷ್ಟಿದ್ದಾರೆ ಎಂದು ಹಾಸ್ಯದ ಧಾಟಿಯಲ್ಲಿ ವಿವರ ಕೇಳಿ, ಕುರುಬ ಅಧಿಕಾರಿಗಳೇ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ್ದರಂತೆ. ಮುಖ್ಯಮಂತ್ರಿಗಳ ತಮಾಶೆಯ
ಮಾತನ್ನು ಸರಿಯಾಗಿ ಗ್ರಹಿಸದ ಅಧಿಕಾರಿಗಳು, ಸೇವಾ ಹಿರಿತನದ ಮೇಲೆ ಐಎಎಸ್‌ ಶ್ರೇಣಿಗೆ ಬಡ್ತಿ ಸಿಗುತ್ತದೆ. ಹೀಗಾಗಿ ಹಿರಿತನದ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದರಂತೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.