ಬುಲ್ಡೋಜರ್ ಬಳಸಿದರೆ ಚಿಕ್ಕಮಗಳೂರಿಗೆ ಹೋಗಿ ಮಲಗುತ್ತೇವೆ: ಡಿಕೆಶಿ ಕಿಡಿ
ಸಮನ್ಸ್ ಜಾರಿ; ಕೆಪಿಸಿಸಿ ಅಧ್ಯಕ್ಷರ ಶಿವಮೊಗ್ಗ ಪ್ರವಾಸ ರದ್ದು
Team Udayavani, Jun 15, 2022, 12:27 PM IST
ಬೆಂಗಳೂರು : ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕೋರ್ಟ್ ನಿಂದ ಸಮನ್ಸ್ ಜಾರಿಯಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಪ್ರವಾಸ ರದ್ದುಗೊಳಿಸಿದ್ದಾರೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಹೊರಟ ವಿಪಕ್ಷ ನಾಯಕ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ತೆರಳಿದ್ದಾರೆ. ಆದರೆ ಶಿವಕುಮಾರ್ ವಕೀಲರ ಜತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ನಾನು ಸಿದ್ದರಾಮಯ್ಯ ಅವರು ಒಟ್ಟಿಗೆ ಒಂದೇ ವಿಮಾನದಲ್ಲಿ ತೆರಳಬೇಕಿತ್ತು.ಕೋರ್ಟ್ ಗೆ ತೆರಳಬೇಕಿರುವ ಕಾರಣ ರದ್ದುಗೊಳಿಸಿದ್ದೇನೆ.ಜೊತೆಗೆ ನಮ್ಮ ಕ್ಷೇತ್ರದಲ್ಲಿ ಆತ್ಮೀಯರೊಬ್ಬರು ತೀರಿಕೊಂಡಿದ್ದಾರೆ. ಮಧ್ಯಾಹ್ನ ನಂತರ ಅಲ್ಲಿಗೆ ತೆರಳುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ನಮಗೆ ತುಂಬಾ ಕಿರುಕುಳ ಕೊಡುತ್ತಿದ್ದಾರೆ.ಯಾಕೆ ನಮ್ಮ ನಾಯಕರುಗಳಿಗೆ ಈ ರೀತಿ ಕಿರುಕುಳ ಕೊಡುತ್ತೊದ್ದಾರೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ : 4 ಸ್ಥಾನದ ಮೇಲ್ಮನೆ ಚುನಾವಣೆ; ಬಿರುಸಿನ ಮತ ಎಣಿಕೆ, ಬಿಜೆಪಿಗೆ ಬಹುಮತದ ನಿರೀಕ್ಷೆ…
ಕರ್ನಾಟಕದಲ್ಲಿ ಬುಲ್ಡೋಜರ್ ಮಾಡಲು ಸಾಧ್ಯವಿಲ್ಲ
ಉತ್ತರ ಪ್ರದೇಶದಲ್ಲಿ ಮಾಡಿದರು ಅಂತ ಇಲ್ಲಿ ಮಾಡಲು ಆಗುವುದಿಲ್ಲ.ಇಲ್ಲಿ ಕಾನೂನು ಇದೆ.ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಮಾಡಲು ಮುಂದಾದರೆ ನಾವು ಹೋಗಿ ಅಲ್ಲೆ ಮಲಗುತ್ತೇವೆ.ಇವರು ಉದ್ದೇಶ ಪೂರ್ವಕವಾಗಿ ಅಲ್ಪಸಂಖ್ಯಾತರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಹೆದರಿಸಬೇಕು ಬೆದರಿಸಬೇಕು ಅಂತ ಸುಮ್ಮನೆ ಕಿರುಕುಳ ಕೊಡುತ್ತಿದ್ದಾರೆ. ಅದಕ್ಕೆಲ್ಲ ಇಲ್ಲಿ ಅವಕಾಶ ಇಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.