ಸೋಂಕು ಹೆಚ್ಚಾದರೆ 70 ಲಕ್ಷ ಮಂದಿಗೆ ಗೃಹ ಬಂಧನ?
ತಜ್ಞರ ಸಲಹೆ - ಸೋಂಕು ನಿಯಂತ್ರಣಕ್ಕೆ ರಿವರ್ಸ್ ಕ್ವಾರಂಟೈನ್ ಅಸ್ತ್ರ
Team Udayavani, Oct 9, 2020, 6:42 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಸುಮಾರು 70 ಲಕ್ಷಕ್ಕೂ ಅಧಿಕ ಜನ ಕೆಲವು ದಿನಗಳ ಮಟ್ಟಿಗೆ “ಗೃಹಬಂದಿ’ಯಾಗುವ ಸಾಧ್ಯತೆಗಳಿವೆ!
ಹೆಚ್ಚುತ್ತಿರುವ ಕೊರೊನಾ ಕೇಸುಗಳ ಹಿನ್ನೆಲೆಯಲ್ಲಿ ತಜ್ಞರೇ ರಾಜ್ಯಾದ್ಯಂತ “ರಿವರ್ಸ್ ಕ್ವಾರಂಟೈನ್’ಗೆ ಶಿಫಾರಸು ಮಾಡಿದ್ದಾರೆ. ಇದು ಜಾರಿಯಾದರೆ ಆರೋಗ್ಯ ಸಮೀಕ್ಷೆ ಮಾಹಿತಿಯಂತೆ 60 ಲಕ್ಷ ವಯೋವೃದ್ಧರು, ಇತರ ಕಾಯಿಲೆಗಳಿಂದ ಬಳಲುತ್ತಿರುವ ಎರಡೂವರೆ ಲಕ್ಷ ಜನ, ಸುಮಾರು 5 ಲಕ್ಷದಷ್ಟು ಗರ್ಭಿಣಿಯರು ಹಾಗೂ ಬಾಣಂತಿಯರು ಸೇರಿ ಒಟ್ಟು 70 ಲಕ್ಷಕ್ಕೂ ಅಧಿಕ ಮಂದಿ ಮನೆಯಲ್ಲಿಯೇ “ಕ್ವಾರಂಟೈನ್’ನಲ್ಲಿರ ಬೇಕಾಗುತ್ತದೆ. ಇದನ್ನೇ ರಿವರ್ಸ್ ಕ್ವಾರಂಟೈನ್ ಎನ್ನುವುದು. ಹೊಸ ಪ್ರಕರಣ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಮಾನ್ಯ ಕ್ವಾರಂ ಟೈನ್‌ಗಿಂತಲೂ ರಿವರ್ಸ್ ಕ್ವಾರಂಟೈನ್ ಸೂಕ್ತ ಎನ್ನುತ್ತಾರೆ ತಜ್ಞರು.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು ಮೈಸೂರು ಪ್ರವಾಸ ದಲ್ಲಿದ್ದಾಗ ಪ್ರಸ್ತಾವ ಮಾಡಿ ಕೆಲವು ಕಡೆ ಈ ಮುಂಜಾಗ್ರತಾ ಕ್ರಮ ಜಾರಿಗೆ ಸೂಚನೆ ನೀಡಿದ್ದಾರೆ.
ಆರೋಗ್ಯ ಸಮೀಕ್ಷೆ ಸಹಕಾರಿ
ಆರೋಗ್ಯ ಇಲಾಖೆಯು ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಶಿಕ್ಷಕರನ್ನು ಬಳಸಿಕೊಂಡು ರಾಜ್ಯಾದ್ಯಂತ ಮನೆ ಮನೆ ಆರೋಗ್ಯ ಸಮೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಿತ್ತು. ಆಗ ವೃದ್ಧರು, ಉಸಿರಾಟ ಸಮಸ್ಯೆ ಹೊಂದಿರು ವವರು, ಗರ್ಭಿಣಿಯರು, ಬಾಣಂತಿ ಯರು, ಇತರ ರೋಗಿಗಳ ಮಾಹಿತಿ ಸಂಗ್ರಹಿಸಲಾಗಿದೆ.
ನಿಯಮ ಸಾಧ್ಯವಿಲ್ಲ
ಆರ್ಥಿಕ ಸಮಸ್ಯೆ, ಅಗತ್ಯ ವ್ಯವಸ್ಥೆ ಇಲ್ಲದ ಕಾರಣಕ್ಕೆ ರಿವರ್ಸ್ ಕ್ವಾರಂಟೈನ್‌ವನ್ನು ಸರಕಾರ ಕಡ್ಡಾಯ ಗೊಳಿಸುವುದು ಸಾಧ್ಯವಿಲ್ಲ. ಈ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಬಹುದು ಎಂದು ಡಾ| ಸುದರ್ಶನ್ ಬಲ್ಲಾಳ್ ಹೇಳುತ್ತಾರೆ.
ಜನ ಎಚ್ಚೆತ್ತುಕೊಳ್ಳದಿದ್ದರೆ ಕ್ರಮ ಅನಿವಾರ್ಯ
ಸೋಂಕು ಪ್ರಕರಣಗಳು ನಿರಂತರ ಏರಿಕೆಯಾಗುತ್ತಿದ್ದು,ದಿನವೊಂದಕ್ಕೆ 10 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಸದ್ಯ ಮಹಾರಾಷ್ಟ್ರ ಹೊರತುಪಡಿಸಿದರೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಈ ಕ್ರಮ ಅನಿವಾರ್ಯವಾಗುತ್ತದೆ ಎನ್ನುತ್ತಾರೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ| ನಾಗರಾಜ್.
ಯಾವ ಜಿಲ್ಲೆಗಳಲ್ಲಿ ಅಗತ್ಯ?
ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಈ ಕ್ರಮವನ್ನು ಶೀಘ್ರ ಜಾರಿಗೆ ತರಬೇಕಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸದ್ಯ ಬೆಂಗಳೂರು (2.62 ಲಕ್ಷ), ಮೈಸೂರು (40,000), ಬಳ್ಳಾರಿ (33,515) , ದಕ್ಷಿಣ ಕನ್ನಡ (25,276) ಹಾಗೂ ಬೆಳಗಾವಿ (20,575) ಸಹಿತ ಐದು ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿದೆ.
ಕೊರೊನಾ ಸಾವಿನ ಪ್ರಮಾಣವು ವೃದ್ಧರು ಹಾಗೂ ಇತರ ಕಾಯಿಲೆಗಳಿಂದ ಬಳ ಲುತ್ತಿರುವವರಲ್ಲಿ ಮೂರು ಪಟ್ಟು ಹೆಚ್ಚಿದ್ದು, ರಿವರ್ಸ್ ಕ್ವಾರಂಟೈನ್‌ನಿಂದ ಅದನ್ನು ತಗ್ಗಿಸಬಹುದು.
– ಡಾ| ಸುದರ್ಶನ್ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.