ಆರ್‌ಟಿಇ ಮಕ್ಕಳ ಮಾಹಿತಿ ನೀಡದಿದ್ರೆ ಶುಲ್ಕ ಪಾವತಿಯಿಲ್ಲ
Team Udayavani, Aug 25, 2017, 8:10 AM IST
ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ದಾಖಲಾಗಿರುವ ಮಕ್ಕಳ ಮಾಹಿತಿಯನ್ನು ಅಪ್‌ಲೋಡ್ ಮಾಡದಿರುವ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸದಿರಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಒಂದು ಮತ್ತು ಎರಡನೇ ಸುತ್ತಿನ ದಾಖಲಾತಿಯ ಎಲ್ಲ ಮಾಹಿತಿಯನ್ನು ಶಾಲಾಡಳಿತ ಮಂಡಳಿ ನಿರ್ದಿಷ್ಟ ತಂತ್ರಾಂಶದ ಮೂಲಕ ಅಪ್‌ಲೋಡ್ ಮಾಡಿದೆ. ಆದರೆ, ಮೂರು ಮತ್ತು ನಾಲ್ಕನೇ ಸುತ್ತಿನ ಸೀಟು ಹಂಚಿಕೆಯ ಮಾಹಿತಿಯನ್ನು
ಪೂರ್ಣಪ್ರಮಾಣದಲ್ಲಿ ಇನ್ನೂ ಅಪ್‌ಲೋಡ್ ಮಾಡಿಲ್ಲ. ಹೀಗಾಗಿ ಸುಮಾರು 4,000 ಮಕ್ಕಳ ಮಾಹಿತಿಯೇ ಶಿಕ್ಷಣ ಇಲಾಖೆಗೆ ಸಿಕ್ಕಿಲ್ಲ. ಹೀಗಾಗಿ, ಮಾಹಿತಿ ನೀಡದ ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿಸದೆ “ಶಿಕ್ಷೆ’ ನೀಡಲು ತೀರ್ಮಾನಿಸಿದೆ.
ಆನ್‌ಲೈನ್ ಲಾಟರಿ ಮೂಲಕ ನಾಲ್ಕು ಸುತ್ತಿನ ಸೀಟು ಹಂಚಿಕೆ ಮಾಡಲಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳ ವಿವರವೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿದೆ. ಲಾಟರಿ ಮೂಲಕ ಸೀಟು ಪಡೆದ ಮಕ್ಕಳ ಪಾಲಕರು ಸಂಬಂಧಪಟ್ಟ ಶಾಲೆಗೆ
ಮಗುವನ್ನು ಸೇರಿಸಿದ ತಕ್ಷಣವೇ ಶಾಲಾಡಳಿತ ಮಂಡಳಿ ಅದನ್ನು ಸಾಫ್ಟ್ವೇರ್‌ನಲ್ಲಿ ಅಪ್ ಲೋಡ್ ಮಾಡಬೇಕು. ಒಂದು ವೇಳೆ ಅಪ್ ಲೋಡ್ ಮಾಡದಿದ್ದರೆ ಮಗು ಶಾಲೆಗೆ ದಾಖಲಾಗಿಲ್ಲವೆಂದು ಪರಿಗಣಿಸಲಾಗುತ್ತದೆ. ಮಗು ಶಾಲೆಗೆ ದಾಖಲಾಗಿಯೂ ಅಪ್‌ಲೋಡ್ ಮಾಡದೇ ಇರುವುದು ಕಂಡಬಂದರೆ, ಅಂತಹ ಶಾಲಾ ಆಡಳಿತ ಮಂಡಳಿಗೆ ಆರ್‌ಟಿಇ ಶುಲ್ಕ ಮರುಪಾವತಿಸುದಿಲ್ಲ.
2017-18ನೇ ಸಾಲಿನಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಸುಮಾರು 1.30 ಲಕ್ಷ ಸೀಟು ಲಭ್ಯವಿದ್ದು, ಮೊದಲ ಹಂತದಲ್ಲಿ 85 ಸಾವಿರ ಸೀಟು ಭರ್ತಿಯಾಗಿದೆ. ಎರಡು ಮತ್ತು ಮೂರನೇ ಹಂತದಲ್ಲಿ ಸುಮಾರು 20 ಸಾವಿರ,
ನಾಲ್ಕನೇ ಸುತ್ತಿನಲ್ಲಿ ಸುಮಾರು 10 ಸಾವಿರ ಸೀಟು ಭರ್ತಿಯಾಗಿದೆ. ಕೆಲವೊಂದು ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರೇ ಉತ್ಸಾಹ ತೋರಿಸದಿರುವುದರಿಂದ ನಾಲ್ಕು ಸುತ್ತಿನ ಬಳಿಕವೂ ಸಾವಿರಾರು ಸೀಟು ಉಳಿದಿವೆ.
ಪೋಷಕರಿಂದ ಗೊಂದಲ: ೆಂಗಳೂರು ಸೇರಿ ರಾಜ್ಯದ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಕೆಲ ಪಾಲಕರು ಎರಡನೇ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ರದ್ದು ಮಾಡಿ, ಮೂರನೇ ಸುತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಮೂರನೇ ಸುತ್ತಿನಲ್ಲಿ ಸೀಟು ಸಿಕ್ಕಿದೆ. ಆದರೆ, ಎರಡನೇ ಸುತ್ತಿನಲ್ಲಿ ಸೀಟು ರದ್ದಾಗಿರುವ ಬಗ್ಗೆ ಶಾಲಾಡಳಿತ ಮಂಡಳಿ ಇಲಾಖೆಗೆ ಮಾಹಿತಿ
ನೀಡಿಲ್ಲ. ಇದೇ ರೀತಿಯ ಯಡವಟ್ಟುಗಳು 3ನೇ ಸುತ್ತಿನಲ್ಲೂ ನಡೆದಿವೆ. ಉತ್ತಮ ಶಾಲೆಯಲ್ಲಿ ಸೀಟು ಸಿಗಬೇಕೆಂಬ ಪೋಷಕರ ಬಯಕೆ ಇಲಾಖೆಯಲ್ಲಿ ಗೊಂದಲ ಸೃಷ್ಟಿಸಿದೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಕೆಲ ಶಾಲಾಡಳಿತ ಮಂಡಳಿ ಹೆಚ್ಚುವರಿ ಸೀಟಿನ ಮಾಹಿತಿಯನ್ನೇ ಇಲಾಖೆಗೆ ನೀಡಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.