ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ : ಡಿಕೆಶಿಗೆ ರಮ್ಯಾ ತಿರುಗೇಟು!
ಕಾಂಗ್ರೆಸ್ ನಲ್ಲಿ ಹೊಸ ಸಂಘರ್ಷ : ಭೇಟಿಗೆ ಸಮರ್ಥನೆ !
Team Udayavani, May 11, 2022, 5:04 PM IST
ಬೆಂಗಳೂರು : ರಕ್ಷಣೆಗೆ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ್ದಾರೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎಂ.ಬಿ.ಪಾಟೀಲ್ ಹಾಗೂ ಅಶ್ವತ್ಥ್ ನಾರಾಯಣ್ ಭೇಟಿಯನ್ನ ನಟಿ, ಮಾಜಿ ಸಂಸದೆ ರಮ್ಯಾ ಸಮರ್ಥಿಸಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ರಮ್ಯಾ ಅವರು, ”ಪಕ್ಷಾತೀತವಾಗಿ ಜನರು ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರು ಕುಟುಂಬಗಳಲ್ಲಿ ಮದುವೆಯೂ ಆಗುತ್ತಾರೆ. ಇದರ ಬಗ್ಗೆ ಹೇಳುತ್ತೇನೆ. ನನಗೆ ಆಶ್ಚರ್ಯವಾಗಿದೆ ಡಿ.ಕೆ. ಶಿವಕುಮಾರ್ ಅವರೇ , ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
People across parties meet each other, go to functions, some even get married into families- I’m surprised @DKShivakumar would say this about @MBPatil who’s a staunch congressman. Shouldn’t the party be fighting elections as one unit? @INCIndia https://t.co/YOT11h35Cq
— Divya Spandana/Ramya (@divyaspandana) May 11, 2022
ಪಿಎಸ್‌ಐ ನೇಮಕಾತಿ ಹಗರಣದಿಂದ ರಕ್ಷಣೆ ಕೋರಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಪಕ್ಷದ ಪ್ರಬಲ ನಾಯಕ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು.. ಪಾಟೀಲ್ ಮತ್ತು ಅಶ್ವತ್ಥನಾರಾಯಣ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ಹಿರಿಯ ಸಹೋದ್ಯೋಗಿಯ ಮೇಲೆಯೇ ಡಿಕೆಶಿ ಇಂತಹ ಹೇಳಿಕೆ ನೀಡಬಾರದಿತ್ತು ಎಂದು ಹಲವು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದು, ಕಾಂಗ್ರೆಸ್ ನಲ್ಲಿ ಹೊಸ ಸಂಘರ್ಷ ಹುಟ್ಟು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.