ಹಳೇ ವಿಶ್ವವಿದ್ಯಾನಿಲಯಗಳ ಸ್ಥಿತಿ ಮೊದಲು ಸುಧಾರಿಸಿ; ಹೊಸ ವಿ.ವಿ.ಗಳ ಸ್ಥಾಪನೆ ಮಸೂದೆಗೆ ವಿರೋಧ
Team Udayavani, Sep 22, 2022, 7:10 AM IST
ಬೆಂಗಳೂರು: ರಾಜ್ಯದಲ್ಲಿ ಹೊಸ ಎಂಟು ವಿ.ವಿ.ಗಳ ಸ್ಥಾಪನೆ ಸಂಬಂಧ ಮಂಡಿಸ ಲಾಗಿದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾ ನಿಲಯಗಳ ತಿದ್ದುಪಡಿ ಮಸೂದೆಗೆ ವಿಧಾನ ಸಭೆ ಯಲ್ಲಿ ಪಕ್ಷಾ ತೀತವಾಗಿ ವಿರೋಧ ವಾಗಿದ್ದು, ಹಾಲಿ ವಿ.ವಿ.ಗಳ ಗುಣಮಟ್ಟ ಸುಧಾರಿಸುವಂತೆ ಆಗ್ರಹವೂ ವ್ಯಕ್ತವಾಗಿದೆ.
ಬೀದರ್, ಹಾವೇರಿ, ಕೊಡಗು, ಚಾಮರಾಜ ನಗರ, ಹಾಸನ, ಕೊಪ್ಪಳ, ಮಂಡ್ಯ, ಬಾಗಲ ಕೋಟೆಯಲ್ಲಿ ವಿಶ್ವವಿದ್ಯಾ ನಿಲಯ ಸ್ಥಾಪಿಸಲು ಈ ಮಸೂದೆ ಮಂಡಿಸ ಲಾಗಿದೆ. ಈ ಕುರಿತ ಚರ್ಚೆ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿತ ಎಲ್ಲ ಸದಸ್ಯರು, ಹೊಸದಾಗಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಮುಂಚೆ ಈಗಿರುವ ವಿ.ವಿ.ಗಳಲ್ಲಿನ ಕೊರತೆ ನೀಗಿಸಲು, ಸಿಬಂದಿ ನೇಮಕ ಹಾಗೂ ಅವ್ಯವಹಾರ ನಿಯಂತ್ರಿಸುವಂತೆ ಒಕ್ಕೊರಲ ಒತ್ತಾಯ ಮಾಡಿದರು.
ವಿಶ್ವವಿದ್ಯಾನಿಲಯಗಳಲ್ಲಿ ಸಿಬಂದಿ ನೇಮಕ ಹಾಗೂ ನಿರ್ಮಾಣ ಕಾಮಗಾರಿ ಸಿಂಡಿಕೇಟ್ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂಬ ಆಗ್ರಹವೂ ವ್ಯಕ್ತವಾಯಿತು.
ಅಂತಿಮವಾಗಿ ವಿಶ್ವವಿದ್ಯಾನಿಲಯಗಳ ಗುಣ ಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಅವರು ಮಸೂದೆಗೆ ಅನು ಮೋದನೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾದರು.
ಸದಸ್ಯರ ಸಲಹೆ ಮೇರೆಗೆ ವಿ.ವಿ. ಗಳಲ್ಲಿ ಸುಧಾ ರಣೆ ತರಲು ಪ್ರತ್ಯೇಕ ಮಸೂದೆ ತರ ಲಾಗು ವುದು ಎಂದು ಸಚಿವರು ತಿಳಿಸಿದರು. ಎರಡು ಕೋಟಿ ರೂ. ಮೊತ್ತದಲ್ಲಿ ಹಾಲಿ ಇರುವ ವ್ಯವಸ್ಥೆಯಲ್ಲಿ ಆರ್ಥಿಕ ಹೊರೆ ಇಲ್ಲದೆ ವಿಶ್ವ ವಿದ್ಯಾಲಯ ಸ್ಥಾಪಿಸಲಾಗುವುದು. ವಿ.ವಿ.ಗಳಲ್ಲಿ ಅಕ್ರಮ ನಡೆದರೆ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಅವಕಾಶ ಇದೆ ಎಂದು ತಿಳಿಸಿದರು.
ಚರ್ಚೆ ವೇಳೆ ಕೇಳಿಸಿದ್ದು
ವಿ.ವಿ.ಗಳ ಸ್ಥಿತಿ ಸುಧಾರಿಸಲು, ಗುಣ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಕುಲಪತಿ ಹುದ್ದೆಗೆ 5-20 ಕೋ.ರೂ. ಡೀಲ್, ಅಯೋಗ್ಯರ ನೇಮಕವಾಗುತ್ತಿದೆ
– ಈಶ್ವರ್ ಖಂಡ್ರೆ, ಕಾಂಗ್ರೆಸ್
ವಿ.ವಿ.ಗಳಿಗೆ ನೇಮಕ ಹಾಗೂ ನಿರ್ಮಾಣದ ಹೊಣೆ ಸಿಂಡಿಕೇಟ್‌ಗೆ ಕೊಡ ಬಾರದು
– ಅರವಿಂದ ಬೆಲ್ಲದ, ಬಿಜೆಪಿ
ಮೊದಲು ವಿ.ವಿ.ಗಳ ಸ್ಥಿತಿ ಬದಲಾ ಯಿಸಿ, ಅನಂತರ ಹೊಸ ವಿ.ವಿ. ಬಗ್ಗೆ ಆಲೋಚಿಸಿ
– ಕೃಷ್ಣ ಬೈರೇಗೌಡ, ಕಾಂಗ್ರೆಸ್
ತಾಲೂಕಿಗೊಂದು ವಿ.ವಿ. ಮಾಡಿಬಿಡಿ
– ಎ.ಟಿ. ರಾಮಸ್ವಾಮಿ, ಜೆಡಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.