ಐದೇ ವರ್ಷದಲ್ಲಿ ರಾಜ್ಯದಲ್ಲಿ ಡಬಲ್ ಪ್ರಮಾಣದಲ್ಲಿ ಚುನಾವಣಾ ಅಕ್ರಮ ಪತ್ತೆ
2019ರಲ್ಲಿ ನಾಮಪತ್ರ ಸಲ್ಲಿಕೆ ಆರಂಭಕ್ಕೆ 26.54 ಕೋಟಿ ರೂ. ಅಕ್ರಮ
Team Udayavani, Mar 28, 2024, 6:15 AM IST
ಬೆಂಗಳೂರು: ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಡಬಲ್ ಪ್ರಮಾಣದಲ್ಲಿ ಚುನಾವಣಾ ಅಕ್ರಮ ಪತ್ತೆಯಾಗಿದೆ.
2019ರ ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದ ನಾಮಪತ್ರ ಸಲ್ಲಿಕೆಯ ಆರಂಭದವರೆಗೆ 26.54 ಕೋಟಿ ರೂ. ಚುನಾವಣಾ ಅಕ್ರಮ ಪತ್ತೆಯಾಗಿದ್ದರೆ ಈ ಸಲ ಇದೇ ಅವಧಿಯಲ್ಲಿ 55.76 ಕೋಟಿ ರೂ. ಮೌಲ್ಯದ ಚುನಾವಣಾ ಅಕ್ರಮ ಪತ್ತೆಯಾಗಿದೆ. ಈ ಹಿಂದಿನ ಲೋಕಸಭಾ ಚುನಾವಣೆಗಿಂತ ಶೇ.110ರಷ್ಟು ಹೆಚ್ಚು ಅಕ್ರಮ ವರದಿ ಆದಂತಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆ ಭಾರೀ ಬಿರುಸಿನ ಪೈಪೋಟಿಯಿಂದ ಕೂಡಿರಲಿದೆ ಎಂದು ರಾಜಕೀಯ ಪಂಡಿತರು ಈಗಾಗಲೇ ಭವಿಷ್ಯ ನುಡಿದಿದ್ದು ಪತ್ತೆಯಾಗುತ್ತಿರುವ ಅಕ್ರಮದ ಪ್ರಮಾಣ ಈ ಹೇಳಿಕೆಯನ್ನು ಪುಷ್ಟಿಕರಿಸುವಂತಿದೆ.
ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಚಿನ್ನ ಜಪ್ತಿ ಮಾಡಲಾಗಿದೆ. ಉಚಿತ ಕೊಡುಗೆಗಳು, ನಗದಿನ ಜಪ್ತಿ ಪ್ರಮಾಣವು ಹೆಚ್ಚಿದೆ.
ಕಳೆದ 24 ಗಂಟೆಯಲ್ಲಿ 7.20 ಕೋಟಿ ರೂ. ಅಕ್ರಮ ಪತ್ತೆ:
ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸುವ ತಂಡಗಳು 7.20 ಕೋಟಿ ರೂ. ಮೌಲ್ಯದ ಚುನಾವಣಾ ಅಕ್ರಮವನ್ನು ಪತ್ತೆ ಹಚ್ಚಿವೆ.
1.30 ಕೋಟಿ ರೂ ನಗದು, 19.44 ಲಕ್ಷ ಉಚಿತ ಉಡುಗೊರೆಗಳು, 1.27 ಕೋಟಿ ರೂ ಮೌಲ್ಯದ 53,265 ಲೀಟರ್ ಮದ್ಯ, 4.96 ಲಕ್ಷ ರೂ ಮೌಲ್ಯದ 15.22 ಕೆಜಿ ಮಾದಕ ವಸ್ತು, 4.19 ಕೋಟಿ ರೂ ಮೌಲ್ಯದ 7.66 ಕೆಜಿ ಚಿನ್ನ, 2.47 ಲಕ್ಷ ಮೌಲ್ಯದ 1.87 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.
ಈವರೆಗೆ ಒಟ್ಟು 847 ಎಫ್ಐಆರ್ ದಾಖಲಿಸಲಾಗಿದೆ. 92,664 ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಲಾಗಿದೆ. ಅಬಕಾರಿ ಇಲಾಖೆ 848 ಗಂಭೀರ ಪ್ರಕರಣಗಳನ್ನು ದಾಖಲಿಸಿದೆ.
4.21 ಕೋಟಿ ರೂ. ಚಿನ್ನಾಭರಣ ವಶಕ್ಕೆ:
ಹಾಸನದ ಶ್ರವಣಬೆಳಗೊಳದ ಚೆಕ್‌ಪೋಸ್ಟ್‌ನಲ್ಲಿ 56.89 ಲಕ್ಷ ರೂ ನಗದು, ಚಿತ್ರದುರ್ಗದ ಪಿಳ್ಳೆಕೆರನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ 20.35 ಲಕ್ಷ ರೂ ನಗದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ತರೀಕೆರೆಯ ಎಂಸಿ ಹಳ್ಳಿ ಚೆಕ್ ಪೋಸ್ಟ್‌ನಲ್ಲಿ 4.21 ಕೋಟಿ ರೂ ಮೌಲ್ಯದ ಚಿನ್ನ, ಬೆಳ್ಳಿ, ವಜ್ರವನ್ನು ವಶಕ್ಕೆ ಪಡೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.