ಆಕ್ಸಿಜನ್ ಕೊರತೆ : ಎಲ್ಲಾ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ : BSY
Team Udayavani, May 5, 2021, 7:49 PM IST
ಬೆಂಗಳೂರು : ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ರಾಜ್ಯ ಭೀಕರ ಸ್ಥಿತಿಯನ್ನು ತಲುಪಿದೆ. ಆಕ್ಸಿಜನ್ ಅಭಾವ ರಾಜ್ಯವನ್ನು ಬಲವಾಗಿ ಕಾಡುತ್ತಿದ್ದು, ಆಕ್ಸಿಜನ್ ಪೂರೈಸುವಲ್ಲಿ ಆಡಳಿತ ಪಕ್ಷ ವಿಫಲವಾಗಿದೆ ಎಂಬ ಅಭಿಪ್ರಾಯ ಹುಟ್ಟಿಕೊಂಡಿದೆ.
ಓದಿ : ರಾಜ್ಯದಲ್ಲಿಂದು ಅರ್ಧ ಲಕ್ಷ ಕೋವಿಡ್ ಪ್ರಕರಣಗಳು: ಬರೋಬ್ಬರಿ 346 ಜನರು ಬಲಿ
ಆಕ್ಸಿಜನ್ ಬಗೆಗಿನ ಬೆಳವಣೆಯನ್ನು ಸರಣಿ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡ ಮುಖ್ಯಮಂತ್ರಿ ಬಿ ಎಸ್ ವೈ, ನಮ್ಮ ರಾಜ್ಯಕ್ಕೆ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಲಾ 20 ಮೆಟ್ರಿಕ್ ಟನ್ ಸಾಮರ್ಥ್ಯದ 4 ಟ್ಯಾಂಕರ್ ಗಳನ್ನು ಕಳುಹಿಸಲಿದ್ದು, ಈ ಪೈಕಿ ಎರಡು ಕಂಟೇನರ್ ಗಳು ಇಂದು(ಬುಧವಾರ, ಮೇ. 05) ಮಂಗಳೂರಿನ ಎನ್ ಎಂ ಪಿ ಟಿ ಗೆ ಬಂದಿವೆ ಎಂದು ತಿಳಿಸಿದ್ದಾರೆ.
In order to augment the supply of medical oxygen to our state, Union Govt has allocated 4 tankers of 20 MT capacity each to Karnataka. Of these, two containers have arrived at NMPT, Mangaluru today. (1/2)@PMOIndia @AmitShah pic.twitter.com/aPO70VQQ4e
— CM of Karnataka (@CMofKarnataka) May 5, 2021
ಆಕ್ಸಿನ್ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕಿತರು ಮೃತರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವುದರ ನಡುವೆ ರಾಜ್ಯಕ್ಕೆ ಕೇಂದ್ರದಿಂದ ಎರಡು ಆಕ್ಸಿಜನ್ ಟ್ಯಾಂಕರ್ ಗಳು ಬಂದಿವೆ.
ಇನ್ನು, ರಾಜ್ಯಕ್ಕೆ ದ್ರವ ಆಕ್ಸಿಜನ್ ತರಲು ರಾಜ್ಯಸರ್ಕಾರ 5 ಟ್ಯಾಂಕರ್‌ಗಳನ್ನು ವಾಯುಪಡೆ ವಿಮಾನಗಳ ಮೂಲಕ ಒರಿಸ್ಸಾಗೆ ಕಳುಹಿಸಿದ್ದು, ಸುಮಾರು 74 ಮೆಟ್ರಿಕ್ ಟನ್ ಆಕ್ಸಿಜನ್ ಇನ್ನು 2-3 ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ. ಸಾಂಕ್ರಾಮಿಕ ನಿರ್ವಹಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
ರಾಜ್ಯಕ್ಕೆ ದ್ರವ ಆಕ್ಸಿಜನ್ ತರಲು ರಾಜ್ಯಸರ್ಕಾರ 5 ಟ್ಯಾಂಕರ್‌ಗಳನ್ನು ವಾಯುಪಡೆ ವಿಮಾನಗಳ ಮೂಲಕ ಒರಿಸ್ಸಾಗೆ ಕಳುಹಿಸಿದ್ದು, ಸುಮಾರು 74 ಮೆಟ್ರಿಕ್ ಟನ್ ಆಕ್ಸಿಜನ್ ಇನ್ನು 2-3 ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ. ಸಾಂಕ್ರಾಮಿಕ ನಿರ್ವಹಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. (2/2)@PMOIndia
— CM of Karnataka (@CMofKarnataka) May 5, 2021
ಹೆಚ್ಚಿನ ಆಕ್ಸಿಜನ್ ಸರಬರಾಜು ನಿಟ್ಟಿನಲ್ಲಿ ನಮ್ಮ ಮನವಿಗೆ ಶೀಘ್ರವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ ತಲಾ 20 ಟನ್ ಸಾಮರ್ಥ್ಯದ 2 ದ್ರವ ವೈದ್ಯಕೀಯ ಆಕ್ಸಿಜನ್ ಕಂಟೇನರ್ ಗಳನ್ನು ಬಹ್ರೇನ್‌ನಿಂದ ರಾಜ್ಯಕ್ಕೆ ಕಳುಹಿಸಿದೆ. ಜೊತೆಗೆ 2 ಹೆಚ್ಚುವರಿ ಕಂಟೇನರ್‌ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮೂಲಕ ಕಳುಹಿಸಲು ಒಪ್ಪಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಆಕ್ಸಿಜನ್ ಸರಬರಾಜು ನಿಟ್ಟಿನಲ್ಲಿ ನಮ್ಮ ಮನವಿಗೆ ಶೀಘ್ರವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ ತಲಾ 20 ಟನ್ ಸಾಮರ್ಥ್ಯದ 2 ದ್ರವ ವೈದ್ಯಕೀಯ ಆಕ್ಸಿಜನ್ ಕಂಟೇನರ್ ಗಳನ್ನು ಬಹ್ರೇನ್‌ನಿಂದ ರಾಜ್ಯಕ್ಕೆ ಕಳುಹಿಸಿದೆ. ಜೊತೆಗೆ 2 ಹೆಚ್ಚುವರಿ ಕಂಟೇನರ್‌ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮೂಲಕ ಕಳುಹಿಸಲು ಒಪ್ಪಿದೆ (1/2)
— CM of Karnataka (@CMofKarnataka) May 5, 2021
ಓದಿ : ಅಧಿಕಾರಿಗಳನ್ನು ಅಮಾನತು ಮಾಡಿ, ಸಚಿವರು ರಾಜೀನಾಮೆ ನೀಡಲಿ : ಅಭಯಚಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.