ಕೋವಿಡ್ ಕಾಲದಲ್ಲೂ ಮೂಡಿ ಬರುತ್ತಿದೆ ಭರವಸೆಯ ಬೆಳಕು; ವಾಹನ ಖರೀದಿ ದಿಢೀರ್ ಏರಿಕೆ
Team Udayavani, Sep 5, 2020, 6:10 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಟೋಮೊಬೈಲ್ ಕ್ಷೇತ್ರ ಈಗ ನಿರೀಕ್ಷೆಗೂ ಮೀರಿ ಪುಟಿದೇಳುತ್ತಿದೆ. ಲಾಕ್‌ಡೌನ್ ತೆರವಾದ ದಿನದಿಂದಲೇ ರಾಜ್ಯದಲ್ಲಿ ವಾಹನಗಳ ನೋಂದಣಿ ಪ್ರಮಾಣ 2ರಿಂದ 3 ಪಟ್ಟು ಏರಿದೆ. ಇದರ ಪರಿಣಾಮವಾಗಿ ಅಲ್ಪಾವಧಿಯಲ್ಲೇ ಸಾರಿಗೆ ಇಲಾಖೆಯ ಆದಾಯ ಸಂಗ್ರಹ ಗುರಿಯಲ್ಲಿ ಶೇ. 75ರಷ್ಟು ಸಾಧನೆ ಸಾಧ್ಯವಾಗಿದೆ.
ಕೋವಿಡ್ ಆತಂಕ ಈಗಲೂ ಜನರಲ್ಲಿ ಮನೆ ಮಾಡಿದ್ದು, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ವಾಹನಗಳ ಮೊರೆಹೊಗುತ್ತಿರುವುದು ವಾಹನಗಳ ಮಾರಾಟ ದಲ್ಲಿ ದಿಢೀರ್ ಏರಿಕೆಗೆ ಪ್ರಮುಖ ಕಾರಣ. ಲಾಕ್‌ಡೌನ್ ಅವಧಿಯಲ್ಲಿ ಅಂದರೆ ಎಪ್ರಿಲ್ ಮತ್ತು ಮೇಯಲ್ಲಿ ರಾಜ್ಯದಲ್ಲಿ ಖಾಸಗಿ ವಾಹನಗಳ ನೋಂದಣಿ ಪ್ರಮಾಣ ಕ್ರಮವಾಗಿ 15,689 ಮತ್ತು 37,004 ಇತ್ತು. ಆದರೆ ಜೂನ್ -ಆಗಸ್ಟ್ ನಲ್ಲಿ 70ರಿಂದ 90 ಸಾವಿರಕ್ಕೆ ಜಿಗಿದಿದೆ. ಸರಾಸರಿ 1.20 ಲಕ್ಷ ನೋಂದಣಿ ಆಗುತ್ತಿದ್ದ ಜನವರಿ -ಮಾರ್ಚ್‌ಗೆ ಹೋಲಿ ಸಿದರೆ ವೇತನ ಕಡಿತ, ಉದ್ಯೋಗಕ್ಕೆ ನಷ್ಟದಂತಹ ಸಂಕಷ್ಟಗಳ ನಡುವೆ ಜನ ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ.
ಸಾಮಾನ್ಯ ದಿನಗಳು, ಲಾಕ್‌ಡೌನ್ ಮತ್ತು ಅನ್‌ಲಾಕ್ ಅವಧಿಯಲ್ಲಿ ವಾಹನಗಳ ನೋಂದಣಿ ಟ್ರೆಂಡ್ ರಾಜ್ಯದಲ್ಲಿ ಹೀಗಿದೆ. ಇದ ರಲ್ಲಿ ಶೇ. 70-80ರಷ್ಟು ದ್ವಿಚಕ್ರ ವಾಹನ ಮತ್ತು ಕಾರುಗಳಾಗಿವೆ.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.