ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಸಿಎಂ ನಿರ್ದೇಶನ: ಆರಗ ಜ್ಞಾನೇಂದ್ರ
Team Udayavani, Jan 28, 2022, 12:10 PM IST
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಂಕ್ಷೆಯ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಇರುವ ವಾರ್ಷಿಕ ವರಮಾನ ಮಿತಿಯನ್ನು 1.20 ಲಕ್ಷ ರೂ ಗೆ ಹೆಚ್ಚಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿರ್ದೇಶಿಸಿ ದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವರಮಾನ ಮಿತಿ ಹೆಚ್ಚಿಸುವಂತೆ, ವಸವಿ ವಂಚಿತ ಬಡವರು ಮನವಿ ಸಲ್ಲಿಸುತ್ತಾ ಬಂದಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ, ಹಾಗೂ ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದರು.
ಕೇಂದ್ರ ಸರಕಾರವು ಬಿಪಿಎಲ್ ಕಾರ್ಡುದಾರರ ವರಮಾನ ಮಿತಿಯನ್ನು ರೂಪಾಯಿ 1.20 ಲಕ್ಷಕ್ಕೆ ಈಗಾಗಲೇ ಹೆಚ್ಚಿಸಿದೆ, ಆದರೆ ರಾಜ್ಯದಲ್ಲಿ, ಆಶ್ರಯ ಯೋಜನೆ ಫಾನುಭವಿಗಳಿಗೆ ವರಮಾನ ಮಿತಿ ರೂಪಾಯಿ 32000 ದಷ್ಟಿದ್ದು, ಹೆಚ್ಚಿನ ಅರ್ಹರು ಯೋಜನೆಯ ಲಾಭ ಪಡೆಯುವುದರಿಂದ ವಂಚಿತರಾಗಿದ್ದಾರೆ. ತನ್ನ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು, ಸರಕಾರದ ಮುಖ್ಯ ಕಾರ್ಯದರ್ಶಗಳಿಗೆ ಹಾಗೂ ವಸತಿ ಖಾತೆಯ ಕಾರ್ಯದರ್ಶಿಗಳಿಗೆ, ಸೂಕ್ತ ನಿರ್ದೇಶನ ನೀಡಿದರು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್
ಮುಖ್ಯಮಂತ್ರಿಗಳ ನಿರ್ಧಾರದಿಂದ ಲಕ್ಷಾಂತರ ಮಂದಿ ವಸತಿ ವಂಚಿತ ಬಡವರು ಪ್ರಯೋಜನ, ಪಡೆಯಲಿದ್ದಾರೆ, ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.