ಆನ್‌ಲೈನ್‌ ಕಲಿಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿರುವ ನಿದ್ರಾಹೀನತೆ: ಅದಕ್ಕೇನು ಪರಿಹಾರ?

ಒತ್ತಡ ನಿರ್ವಹಣೆ ಹೇಗೆ? ಪರಿಣತರ ಸಲಹೆ

Team Udayavani, Oct 17, 2020, 5:30 AM IST

Online-class

ಸಾಂದರ್ಭಿಕ ಚಿತ್ರ

ಆನ್‌ಲೈನ್‌ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್‌ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಶೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್‌ ಮಾಡಿ. 7618774529

ಆನ್‌ಲೈನ್‌ ಕಲಿಕೆ ಎನ್ನುವ ಹೊಸ ಸ್ವರೂಪದ ಶಿಕ್ಷಣದಿಂದಾಗಿ ಮನೆಯೇ ಶಾಲೆಯ ರೂಪ ಪಡೆದಿದೆ. ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ತಪ್ಪಿ ಹೋಗಬಾರದು ಎನ್ನುವ ಕಳಕಳಿ ನಿಜವಾದರೂ ಕೆಲವು ವಿಚಾರಗಳಲ್ಲಿ ಇದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಒತ್ತಡ, ಭಯದಿಂದಾಗಿ ಮಕ್ಕಳಲ್ಲಿ ನಿದ್ರಾಹೀನತೆ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಂಡುಬರುತ್ತಿರುವ ನಿದ್ರಾ ಹೀನತೆಯನ್ನು ಹೇಗೆ ಹೋಗಲಾಡಿಸಬಹುದು, ಪೋಷಕರೇನು ಮಾಡಬೇಕು, ಶಿಕ್ಷಕರ ಪಾತ್ರವೇನು ಎನ್ನುವುದರ ಕುರಿತು
ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸೌಜನ್ಯಾ ವಿವರಿಸಿದ್ದಾರೆ.

ತೊಂದರೆಗಳೇನು?
ನಿದ್ರಾಹೀನತೆಯಿಂದ ಮಕ್ಕಳಲ್ಲಿ ಕಿರಿಕಿರಿ, ಅಸಹನೆ, ವಿನಾಕಾರಣ ಸಿಟ್ಟು, ದೇಹಭಾರ, ಲವಲವಿಕೆಯಿಲ್ಲದೆ ಇರುವುದು, ನಿಶ್ಶಕ್ತಿ, ಬಳಲಿಕೆ, ಏಕಾಗ್ರತೆಯ ಕೊರತೆ, ಎಲ್ಲ ವಿಚಾರದಲ್ಲೂ ನಿರಾಸಕ್ತಿ, ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ ಮತ್ತಿತರ ತೊಂದರೆಗಳು ಕಾಡುತ್ತವೆ. ಬೆನ್ನು, ಭುಜ ನೋವು, ತಲೆಭಾರ, ಅದು ಮಕ್ಕಳಿಗೆ ಅರಿವಿಗೆ ಬರುವುದಿಲ್ಲ.

ಹೆಚ್ಚುತ್ತಿರುವ ನಿದ್ರಾಹೀನತೆ ಸಮಸ್ಯೆ
ಅಧ್ಯಯನವೊಂದರ ಪ್ರಕಾರ 2001ರಲ್ಲಿ ಶೇ.31ರಷ್ಟು ಮಕ್ಕಳಿಗೆ ನಿದ್ರಾಹೀನತೆ ಸಮಸ್ಯೆಯಿದ್ದರೆ, 2011ರಲ್ಲಿ ಇದು ಶೇ.46ಕ್ಕೆ ಏರಿದೆ. 2020ರಲ್ಲಿ ಶೇ.65ರ ವರೆಗೆ ಏರಿಕೆಯಾಗಿದೆ ಎನ್ನುವ ಮಾಹಿತಿಯಿದೆ. ಮಕ್ಕಳಾಗಲಿ ದೊಡ್ಡವರಾಗಲಿ 4 ತಾಸು ಮೊಬೈಲ್‌ ಬಳಸಿದರೆ 20 ನಿಮಿಷಗಳಷ್ಟು ನಿದ್ದೆಯ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯ.

ಹೆತ್ತವರೇನು ಮಾಡಬೇಕು?
– ಮಕ್ಕಳು ಮಲಗುವ ಮತ್ತು ಎದ್ದೇಳುವ ಸಮಯವನ್ನು ಸರಿಯಾಗಿ ನಿಗದಿಪಡಿಸಿ ಕೊಳ್ಳಿರಿ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ.
– ಮಕ್ಕಳನ್ನು ದೈಹಿಕ ಚಟುವಟಿಕೆಯಿರುವಂತೆ ಮಾಡಬೇಕು. ಎಷ್ಟು ಕ್ರಿಯಾಶೀಲ ವಾಗಿರುತ್ತಾರೋ ಅಷ್ಟು ಮಾನಸಿಕ ಮತ್ತು ದೈಹಿಕವಾಗಿ ಅನುಕೂಲ.
– ಮಲಗಲು ಯೋಗ್ಯವಾದ ಕೋಣೆಯನ್ನು ಆಯ್ಕೆ ಮಾಡಿಕೊಳ್ಳಿ. ಬೆಡ್‌, ಬೆಡ್‌ಶೀಟ್‌ ಸ್ವಚ್ಛವಾಗಿರಲಿ.
– ಮಕ್ಕಳು ಮಲಗುವ ಕೋಣೆಯಲ್ಲಿ ಕಂಪ್ಯೂಟರ್‌, ಮೊಬೈಲ್‌ ಇರದಂತೆ ಎಚ್ಚರ ವಹಿಸಿ. ಕಂಪ್ಯೂಟರ್‌ ಇರುವ ಕೊಠಡಿಯಲ್ಲಿ ನೀವು ಒಳ ಹೋಗುವ ತತ್‌ಕ್ಷಣ ನಿಮಗೆ ಕಂಪ್ಯೂಟರ್‌ ಸ್ಕ್ರೀನ್‌ ಕಾಣುವಂತೆ ಇರಲಿ. ಆಗ ಮಕ್ಕಳು ಕಂಪ್ಯೂಟರ್‌ನಲ್ಲಿ ಏನು ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತದೆ.
– ಮಲಗುವ ಮೊದಲು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳನ್ನು ಬಳಸದಂತೆ ಎಚ್ಚರ ವಹಿಸಿ.
– ಮಲಗುವ ಮುನ್ನ ಹಸಿವು ಇಲ್ಲದಿರಲಿ. ಮಲಗುವ ಮೊದಲು ಕಾಫಿ, ಟೀ ಬೇಡ. ದ್ರವಾಹಾರ ಸೇವನೆ ಕೂಡ ಕಡಿಮೆಯಿರಲಿ. ಇದರಿಂದ ಆಗಾಗ ಮೂತ್ರಶಂಕೆಯಿಂದ ಎಚ್ಚರವಾಗುವುದನ್ನು ತಡೆಯಬಹುದು.

ಶಿಕ್ಷಕರ ಪಾತ್ರವೇನು?
– ಮಕ್ಕಳ ದೈಹಿಕ ಚಟುವಟಿಕೆಗೆ ಒತ್ತು ನೀಡುವಂತಹ ಅಸೈನ್‌ಮೆಂಟ್‌ಗಳನ್ನು ಕೊಡಬಹುದು.
– ಮಕ್ಕಳು ಪ್ರಕೃತಿ, ನಿಸರ್ಗದಲ್ಲಿ ಬೆರೆತು, ಮಾಡುವಂತಹ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ.
– ನೈತಿಕ ಶಿಕ್ಷಣಕ್ಕೆ ಆನ್‌ಲೈನ್‌ ಪಾಠದಲ್ಲೂ ಒತ್ತು ಕೊಡಿ. ಆ ಮೂಲಕ ಮಕ್ಕಳಿಗೆ ಹಿರಿಯರೊಂದಿಗೆ ಬೆರೆಯುವಂತೆ, ಕತೆಗಳನ್ನು ಕೇಳುವಂತೆ ಮಾಡಿ.
– ಮಕ್ಕಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸುಮ್ಮನೆ ಹೇಳುವ ಬದಲು ವೈಜ್ಞಾನಿಕವಾಗಿ ಮನಮುಟ್ಟುವಂತೆ ಹೇಳಿ. ಆಗ ಮಕ್ಕಳು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ.
– ಮಕ್ಕಳಿಗೆ ನೋಟ್ಸ್‌ ಕೊಡುವಾಗ, ಮಾಹಿತಿಗಾಗಿ ಆ ಲಿಂಕ್‌ ಅಥವಾ ವೆಬ್‌ಸೈಟ್‌ ಬಳಸಿ ಎನ್ನುವ ಬದಲು ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಓದಲು ಹೇಳಿ.
– ಮೊಬೈಲ್‌ ಗೀಳು, ಸ್ಕ್ರೀನ್‌ ಅಡಿಕ್ಷನ್‌ ಬಗ್ಗೆ ಮಕ್ಕಳ ಹೆತ್ತವರಿಗೆ ಶಿಕ್ಷಕರು ಅಥವಾ ಶಿಕ್ಷಣ ಸಂಸ್ಥೆ ಕಡೆಯಿಂದ ತಿಂಗಳಿಗೊಮ್ಮೆ ವೆಬಿನಾರ್‌ ಮೂಲಕ ತಜ್ಞರಿಂದ ಸಲಹೆಗಳನ್ನು ಕೊಡಿಸಬಹುದು.

ಕೊರೊನಾ ಕಾರಣಕ್ಕೆ ಮನೆಯೇ ಈಗ ಶಾಲೆ ಯಾಗಿ ಪರಿವರ್ತನೆ ಯಾಗಿರುವುದ ರಿಂದ ಮೊಬೈಲ್‌ ಬಳಕೆ ಹೆಚ್ಚುತ್ತಿದೆ. ಶಾಲಾ ಚಟುವಟಿಕೆ ಕಡಿಮೆ ಯಾಗಿದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಮಕ್ಕಳಲ್ಲಿ ಕಾಣಿಸಿ ಕೊಳ್ಳುತ್ತಿದೆ. ಆದರೆ ಪೋಷಕರು ಮಕ್ಕಳಿಗೆ ಸಮಯ ವೇಳಾಪಟ್ಟಿಯನ್ನು ಶಿಸ್ತುಬದ್ಧವಾಗಿ ಪಾಲಿಸಲು ಹೇಳಿಕೊಟ್ಟರೆ ಇದನ್ನು ಹೋಗಲಾಡಿಸಬಹುದು.
– ಸೌಜನ್ಯಾ, ಆಪ್ತ ಸಮಾಲೋಚಕಿ, ಡಾ| ಎ.ವಿ. ಬಾಳಿಗಾ ಆಸ್ಪತ್ರೆ ಉಡುಪಿ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.