ನವೋದ್ಯಮ: ಕರ್ನಾಟಕ ಶ್ರೇಷ್ಠ
ಕೇಂದ್ರದಿಂದ ಸ್ಟಾರ್ಟ್‌ಅಪ್ ರ್‍ಯಾಂಕಿಂಗ್ ಬಿಡುಗಡೆ ಕರ್ನಾಟಕ ಮೊದಲಿಗ, ಕೇರಳ ದ್ವಿತೀಯ
Team Udayavani, Sep 12, 2020, 6:19 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸ್ಟಾರ್ಟ್‌ಅಪ್‌ಗಳ ವಿಚಾರದಲ್ಲಿ ದೇಶದಲ್ಲೇ ಭಾರೀ ಹೆಸರು ಗಳಿಸಿರುವ ಕರ್ನಾಟಕಕ್ಕೆ ಈಗ ಶ್ರೇಷ್ಠತೆಯ ಮಾನ್ಯತೆ ಸಿಕ್ಕಿದೆ. ಕೇಂದ್ರ ಸರಕಾರವು ದೇಶದ ಸ್ಟಾರ್ಟ್‌ಅಪ್‌ಗಳ ರ್‍ಯಾಂಕಿಂಗ್ ಬಿಡುಗಡೆ ಮಾಡಿದ್ದು, ಶ್ರೇಷ್ಠ ಸಾಧಕರ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅನಂತರದಲ್ಲಿ ಕೇರಳವಿದೆ.
ಕೇಂದ್ರ ಸರಕಾರವು 2018ರಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ರಾಜ್ಯಗಳಿಗೆ ರ್‍ಯಾಂಕಿಂಗ್ ನೀಡುವ ಸಂಪ್ರದಾಯ ಆರಂಭಿಸಿತ್ತು. ಮೊದಲ ಬಾರಿ ಗುಜರಾತ್ ಉತ್ತಮ ಸಾಧಕ ಪಟ್ಟ ಗಳಿಸಿಕೊಂಡಿತ್ತು. ಅನಂತರ ಕರ್ನಾಟಕ, ಕೇರಳ, ಒಡಿಶಾ ಮತ್ತು ರಾಜಸ್ಥಾನಗಳು ಸ್ಥಾನ ಪಡೆದುಕೊಂಡಿದ್ದವು. ಈ ಬಾರಿ ಏಳು ಪ್ಯಾರಾಮೀಟರ್‌ಗಳು ಮತ್ತು 30 ಕ್ರಿಯಾ ಅಂಶಗಳ ಆಧಾರದಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ. ಗುಜರಾತ್ ರಾಜ್ಯಕ್ಕೆ ಈ ಬಾರಿಯೂ ಅತ್ಯುತ್ತಮ ಸಾಧಕ ಪಟ್ಟ ಸಿಕ್ಕಿದೆ.
ಆದರೆ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಶ್ರೇಷ್ಠ ಸಾಧನೆ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಸ್ಪರ್ಧೆಯಲ್ಲಿ ಕರ್ನಾಟಕವೂ ಸೇರಿ 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು. ಈ ರಾಜ್ಯಗಳು ಸ್ಟಾರ್ಟ್‌ಅಪ್‌ಗಳಿಗೆ ನೀಡುವ ಸಾಂಸ್ಥಿಕ ಬೆಂಬಲ, ಸರಕಾರದ ನಿಯಮಗಳ ಸಡಿಲಿಕೆ, ಟೆಂಡರ್ ಪ್ರಕ್ರಿಯೆಗಳ ಸರಳೀಕರಣ, ಮೂಲಧನ ಬೆಂಬಲ, ವೆಂಚರ್ ನಿಧಿ ಬೆಂಬಲ ಮತ್ತು ಅರಿವು ಹಾಗೂ ತಲುಪುವಿಕೆ ನಿಯಮಗಳನ್ನು ಮುಂದಿಟ್ಟುಕೊಂಡು ರ್‍ಯಾಂಕಿಂಗ್ ನೀಡಲಾಗಿದೆ. ಅಷ್ಟೇ ಅಲ್ಲ, ಈ ರ್‍ಯಾಂಕಿಂಗ್ ನೀಡುವ ಸಂಬಂಧ ಫಲಾನುಭವಿಗಳಾದ ಸ್ಟಾರ್ಟ್‌ಅಪ್‌ಗಳ ಮಾಲಕರಿಗೆ ಕರೆ ಮಾಡಿ ಅಭಿಪ್ರಾಯ ಪಡೆಯಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ರಾಜ್ಯದ ಹೆಗ್ಗಳಿಕೆ
20,000 ರಾಜ್ಯದಲ್ಲಿರುವ ಸ್ಟಾರ್ಟ್‌ಅಪ್‌ಗ್ಳು
1,20,000 ಉದ್ಯೋಗಗಳು ಸೃಷ್ಟಿ
2,000 ಕೋಟಿ ರೂ.ಸ್ಟಾರ್ಟ್‌ಅಪ್‌ಗ್ಳಲ್ಲಿ ಹಣ ಹೂಡಿಕೆ
ಕರ್ನಾಟಕವನ್ನು ಗುರುತಿಸಿದ್ದು ಹೀಗೆ…
1. ಇನ್‌ಸ್ಟಿಟ್ಯೂಶನಲ್ ಲೀಡರ್
2. ಪ್ರೊಕ್ಯೂರ್‌ಮೆಂಟ್ ಲೀಡರ್
3. ರೆಗ್ಯುಲೇಟರಿ ಚೇಂಜ್ ಚಾಂಪಿಯನ್
4. ಇನ್‌ಕ್ಯುಬೇಶನ್ ಹಬ್
ರಾಜ್ಯದ ಸಾಧನೆ
ಸಾಂಸ್ಥಿಕ ಬೆಂಬಲ – 74%
ನಿಯಮಗಳ ಸಡಿಲೀಕರಣ – 100%
ಟೆಂಡರ್‌ಗಳ ಪ್ರಕ್ರಿಯೆ ಸರಳೀಕರಣ- 100%
ಇನ್‌ಕ್ಯುಬೇಶನ್ ಬೆಂಬಲ – 25%
ಮೂಲಧನ ಬೆಂಬಲ – 0%
ವೆಂಚರ್ ನಿಧಿ ಬೆಂಬಲ – 0%
ಜಾಗೃತಿ ಮತ್ತು ತಲುಪುವಿಕೆ – 15%
ಸ್ಟಾರ್ಟ್‌ಅಪ್ ಉತ್ತೇಜಕ ಕ್ರಮಗಳು
ಸ್ಟಾರ್ಟ್‌ಅಪ್‌ಗಳಿಗಾಗಿ ಪ್ರತ್ಯೇಕ ವೆಬ್ ಪೋರ್ಟಲ್. ಇದರಲ್ಲಿ ಎಲ್ಲ ರೀತಿಯ ಮಾಹಿತಿ ಲಭ್ಯ
ಸ್ಟಾರ್ಟ್ ಅಪ್ ನೀತಿ ಜಾರಿಗಾಗಿ ನೋಡಲ್ ಡಿಪಾರ್ಟ್‌ಮೆಂಟ್
ಪ್ರತ್ಯೇಕ ತಂಡ ಒಳಗೊಂಡ ಸ್ಟಾರ್ಟ್‌ಅಪ್ ಸೆಲ್
ಕರ್ನಾಟಕಕ್ಕೆ ಸಿಕ್ಕ ಗೌರವ ಹೆಮ್ಮೆಯ ವಿಷಯವಾಗಿದೆ. ನವೋದ್ಯಮಗಳನ್ನು ಬಲಗೊಳಿಸುವುದಕ್ಕಾಗಿ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದು ಈ ರ್‍ಯಾಂಕಿಂಗ್‌ನ ಉದ್ದೇಶವಾಗಿದೆ.
ಡಾ| ಅಶ್ವತ್ಥನಾರಾಯಣ, ಡಿಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.