ಕೇಂದ್ರದ ವಿರುದ್ಧ ಮುಗಿಬಿದ್ದ ಐಎನ್‌ಡಿಐಎ
ಕೇಂದ್ರದ ವಿರುದ್ಧ ವಾಗ್ಧಾಳಿ, ಬಿಜೆಪಿ ಹಠಾವೋ, ದೇಶ್ ಬಚಾವೋ' ಘೋಷಣೆ ಮೊಳಗಿಸಿದ ನಾಯಕರು
Team Udayavani, Feb 25, 2024, 11:55 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಐಎನ್‌ಡಿಐಎ ನಾಯಕರು ಬೆಂಗಳೂರಿನಲ್ಲಿ ವಾಗ್ಧಾಳಿ ನಡೆಸುವ ಮೂಲಕ ಲೋಕಸಭಾ ಚುನಾವಣೆಯ ನಗಾರಿ ಬಾರಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದ ಸಮಾರೋಪ ಸಮಾರಂಭದ ವೇದಿಕೆಯಲ್ಲಿದ್ದ ಬಹುತೇಕ ನಾಯಕರು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರಲ್ಲದೆ, ಬಿಜೆಪಿ ಹಠಾವೋ, ದೇಶ್ ಬಚಾವೋ ಘೋಷಣೆಗಳನ್ನು ಮೊಳಗಿಸಿದರು.
ರವಿವಾರ ಮಧ್ಯಾಹ್ನ ನಗಾರಿ ಬಾರಿಸುವ ಮೂಲಕ ಸಮಾವೇಶವನ್ನು ಸಮಾರೋಪಗೊಳಿಸಿದ ನಾಯಕರು, ಬಾಬು ಜಗಜೀವನರಾಂ, ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಶಾಲಾ ಮಕ್ಕಳಿಂದ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಆ ಬಳಿಕ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರೂ ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು.
ಇದು ರಾಜಕೀಯ
ಸಮಾವೇಶ ಅಲ್ಲ
ಸಚಿವ ಡಾ| ಎಚ್.ಸಿ. ಮಹದೇವಪ್ಪ ಮಾತನಾಡಿ, ಇದು ರಾಜಕೀಯ ಸಮಾವೇಶ ಅಲ್ಲ, ರಾಜಕಾರಣಿಗಳನ್ನು ಇಟ್ಟುಕೊಂಡು ನಡೆಸುತ್ತಿರುವ ಸಮಾವೇಶ ಅಲ್ಲ. ನಮ್ಮದು ಸಿಂಧು ಕಣಿವೆಯ ನಾಗರಿಕತೆ. ಪರಕೀಯರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು, ಛಿದ್ರಗೊಂಡಿದ್ದ ದೇಶ, ಭಾಷೆ, ಧರ್ಮ, ಸಂಸ್ಕೃತಿಗಳನ್ನು ಒಗ್ಗೂಡಿಸಿ ಎಲ್ಲರಿಗೂ ಸಮಾನತೆ ಅವಕಾಶವನ್ನು ಸಂವಿಧಾನ ನೀಡಿದೆ ಎಂದು ಹೇಳಿದರು.
ವೈವಿಧ್ಯತೆಯಲ್ಲಿ ಏಕತೆ ಉಳಿಸಿಕೊಂಡ ಶ್ರೇಷ್ಠ ಸಂವಿಧಾನ ನಮ್ಮದು. ಈ ವಿಚಾರಗಳ ವಿರುದ್ಧ ಇರುವವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ದೇಶ ಕವಲುದಾರಿಯಲ್ಲಿದೆ. ಕೋಮುವಾದ, ಜಾತಿವಾದಗಳು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುತ್ತಿವೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಅದರ ವಿರೋಧಿಗಳಿದ್ದಾರೆ. ಯೋಗ್ಯರು, ಸಮರ್ಥರಿಗೆ ಎಚ್ಚರದಿಂದ ಮತದಾನ ಮಾಡಿ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ. ಪಾಟೀಲ್, ಮುನಿಯಪ್ಪ, ಕೆ.ಜೆ. ಜಾರ್ಜ್, ಬೋಸರಾಜು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ದಿಗ್ವಿಜಯ್ ಸಿಂಗ್, ಸಲ್ಮಾನ್ ಖುರ್ಷಿದ್, ಬಿ.ರಾಜಾರಾವ್, ಮನೋಜ್ ಭಟ್ಟಾಚಾರ್ಯ, ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ದೇಶ ನಮ್ಮೆಲ್ಲರದ್ದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾಷೆ, ಸಂಸ್ಕೃತಿ, ಹವಾಮಾನ ಎಲ್ಲದರಲ್ಲೂ ವಿವಿಧತೆ ಇದೆ. ನಮ್ಮನ್ನು ಒಂದು ಮಾಡಿ ಹೊಸ ಭಾರತ ಮಾಡಿರುವುದು ಬಾಬಾ ಸಾಹೇಬರ ಸಂವಿಧಾನ ಎಂಬುದನ್ನು ಒಪ್ಪಬೇಕು. ಇದನ್ನು ರಕ್ಷಿಸಿದರೆ ದೇಶ ಬಲಿಷ್ಠ ಆಗುತ್ತದೆ. ಧರ್ಮ ನಮ್ಮನ್ನು ಒಡೆಯುವುದಿಲ್ಲ, ಒಂದುಗೂಡಿಸುತ್ತದೆ. ನಮಗೆ ಬೇಕಿರುವುದೇ ಶಾಂತಿ, ಸೌಹಾರ್ದತೆ, ಮಕ್ಕಳ ಭವಿಷ್ಯ, ಉತ್ತಮ ಶಿಕ್ಷಣ, ಆರೋಗ್ಯ. ಕಾಶ್ಮೀರವು ಎಂದೆಂದಿಗೂ ಭಾರತದ ಭಾಗ.
– ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಮಾಜಿ ಸಿಎಂ
ನಾವು ಭಾರತವನ್ನು ಭವಿಷ್ಯದ ಬೆಳಕಿನೆಡೆಗೆ ಕೊಂಡೊಯ್ಯುತ್ತಿದ್ದರೆ, ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ಸರಕಾರ ಮನುವಾದದ ಕಾಲಕ್ಕೆ ಕೊಂಡೊಯ್ಯುತ್ತಿದೆ. ಬಡತನ, ಹಸಿವು ಹೆಚ್ಚಿದೆ. ಆರ್ಥಿಕತೆ ಕೆಳಗೆ ಹೋಗಿದೆ. ಸಮುದ್ರಮಥನ ಕಾಲದಲ್ಲಿ ಅಮೃತವೂ ಬಂತು, ವಿಷವೂ ಬಂದಿತ್ತು. ಅಮೃತ ಕಾಲ ಎಂದು ಬಾಯಲ್ಲಿ ಹೇಳುವ ತಪ್ಪು ವ್ಯಕ್ತಿಗಳ ಕೈಯಲ್ಲಿ ಅಮೃತವಿದೆ. ಅದನ್ನು ಹಿಂಪಡೆದು, ಜನರ ಪಾಲಿನ ಅಮೃತ ಕಾಲ ಆಗುವಂತೆ ಮಾಡಬೇಕು.
– ಸೀತಾರಾಮ್ ಯೆಚೂರಿ, ಸಿಪಿಐ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.