ವಿಶ್ವ ನಾಯಕನಾಗಿ ಹೊರಹೊಮ್ಮಲು ಪೂರಕ ವಿದೇಶಾಂಗ ನೀತಿ ಭಾರತದ್ದು: ಕ್ಯಾಪ್ಟನ್ ಗಣೇಶ್ ಕಾರ್ಣಿಕ್
Team Udayavani, Jul 21, 2021, 7:09 PM IST
ಬೆಂಗಳೂರು : ಭಾರತ ರಾಷ್ಟ್ರವು ಅದರ ಸಮರ್ಥ ಮತ್ತು ದೂರದೃಷ್ಟಿಯ ವಿದೇಶಾಂಗ ನೀತಿಯಿಂದ ವಿಶ್ವ ನಾಯಕತ್ವ ವಹಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಅತ್ಯಂತ ನಂಬಿಕೆಗೆ ಅರ್ಹ ರಾಷ್ಟ್ರವಾಗಿ ಮುಂದೆ ಹೊರಹೊಮ್ಮಲಿದೆ. ಜಗತ್ತಿನ ವಿಕೋಪಗಳು, ಸಮಸ್ಯೆಗಳಿಗೆ ಮೊದಲ ಬಾರಿಗೆ ಸ್ಪಂದಿಸುವ ದೇಶ ಭಾರತ ಎಂಬ ವಿಶ್ವಾಸ ಜಗತ್ತಿನೆಲ್ಲೆಡೆ ವೃದ್ಧಿಸಿದೆ. ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದರು.
ಭಾರತದ ವಿದೇಶಾಂಗ ನೀತಿ ಕುರಿತು ವೆಬೆಕ್ಸ್ ಮೂಲಕ ನಡೆದ ರಾಜ್ಯ ಮಟ್ಟದ ಚಿಂತನ ವರ್ಗದಲ್ಲಿ ಅವರು ಮಾತನಾಡಿದರು. ಕೇವಲ ಏಳು ವರ್ಷಗಳ ಸಣ್ಣ ಅವಧಿಯಲ್ಲಿ ಭಾರತವು ಜಗತ್ತಿನ ಭೂಪಟದಲ್ಲಿ ವಿಶ್ವನಾಯಕನಾಗಿ ಹೊರಹೊಮ್ಮುವ ವಾತಾವರಣ ನಿರ್ಮಾಣವಾಗಿದೆ. ಜಾತ್ಯತೀತವಾದ ಎಂದರೆ ದೇಶ ಮೊದಲು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದರು. ದೇಶದ ಹಿತದಲ್ಲಿ ಕೆಲಸ ಮಾಡುವುದೇ ಜಾತ್ಯತೀತವಾದ ಎಂಬ ಚಿಂತನೆಯೊಂದಿಗೆ ಅವರು ವಿದೇಶಾಂಗÀ ನೀತಿಯನ್ನು ರೂಪಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಆರೇಳು ಆಯಾಮಗಳಲ್ಲಿ ನಮ್ಮ ವಿದೇಶಾಂಗ ನೀತಿಯನ್ನು ವಿಶ್ಲೇಷಿಸಲು ಸಾಧ್ಯವಿದೆ. ಭಾರತದ ಬಗ್ಗೆ ಹಾವಾಡಿಗರ ದೇಶ, ಅನಕ್ಷರತೆ ಬಡತನ, ದೊಡ್ಡ ಜನಸಂಖ್ಯೆ ಎಂದು ಕಳೆದ 68- 70 ವರ್ಷಗಳಲ್ಲಿ ಋಣಾತ್ಮಕವಾಗಿ ಜಾಗತಿಕ ಅಭಿಪ್ರಾಯ ಬೆಳೆದುಬಂದಿತ್ತು. ಪ್ರಧಾನಿಯವರು ಕಳೆದ ಏಳು ವರ್ಷಗಳಲ್ಲಿ ಭಾರತ ದೇಶವನ್ನು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಅಭಿಪ್ರಾಯ ರೂಪಿಸಲು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಕೋವಿಡ್ ಲಸಿಕಾ ಅಭಿಯಾನ ಸೇರಿದಂತೆ ಅನೇಕ ವಿಚಾರಗಳಲ್ಲಿ ನಮ್ಮ ಬಗೆಗಿನ ಅಭಿಪ್ರಾಯ ಬದಲಾದುದನ್ನು ನಾವೀಗ ಕಾಣಬಹುದು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿದರು.
ರಾಷ್ಟ್ರಹಿತವನ್ನು ಮನದಲ್ಲಿ ಇಟ್ಟುಕೊಂಡು, ಯಾವುದೇ ಗುಂಪಿಗೆ ಸೀಮಿತಗೊಳ್ಳದೆ, ಎಲ್ಲರನ್ನೂ ಸಮಾನ ಗೌರವದಿಂದ ಕಂಡುಕೊಳ್ಳುವ ಕ್ರಮ ಈಗ ಭಾರತದ್ದು. ಹಿಂದೆ ರಾಷ್ಟ್ರ ರಾಷ್ಟ್ರಗಳ ನಡುವೆ ಶೀತಲ ಸಮರ ನಿರಂತರವಾಗಿ ನಡೆಯುತ್ತಿತ್ತು. ರಷ್ಯಾ ಒಂದೆಡೆ ಅಮೆರಿಕಾ ಇನ್ನೊಂದೆಡೆ ಎಂಬ ಸ್ಥಿತಿ ಇತ್ತು. ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಗಳಾದ ಬಳಿಕ, ಶ್ರೀಮತಿ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾದ ನಂತರ ಜಗತ್ತಿನ ಎಲ್ಲಾ ರಾಷ್ಟ್ರಗಳ ಜೊತೆ ಅತ್ಯಂತ ಗೌರವದಿಂದ ಸಮಾನ ಅಂತರದಿಂದ ಕಾರ್ಯ ನಿರ್ವಹಿಸಲಾಗಿದೆ ಎಂದು ವಿವರಿಸಿದರು.
ಈಗ ನಾವು ರಷ್ಯಾ ಮತ್ತು ಅಮೆರಿಕಾದಿಂದ ಸರಕು ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಎರಡೂ ದೇಶಗಳನ್ನು ನಾವು ಸಮಾನವಾಗಿ ಕಾಣುತ್ತಿದ್ದೇವೆ. ಪರಸ್ಪರ ಯುದ್ಧ ಮಾಡುವ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ದೇಶಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಭಾರತವು ಈ ಎರಡೂ ದೇಶಗಳ ನಡುವೆ ಆತ್ಮೀಯತೆ ಬೆಸೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.
ಜಗತ್ತು ಪಾಕಿಸ್ಥಾನವನ್ನು ಮೂಲೆಗುಂಪು ಮಾಡುವಂಥ ಸ್ಥಿತಿಯನ್ನು ಭಾರತ ತಂದಿದೆ. ಆದರೂ, ಮುಸ್ಲಿಂ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ಗೌರವ ಹೆಚ್ಚುತ್ತಲೇ ಹೋಗಿದೆ. ಅನೇಕ ಮುಸ್ಲಿಂ ರಾಷ್ಟ್ರಗಳು ನಮ್ಮ ಪ್ರಧಾನಿಯವರನ್ನು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ ಎಂದು ವಿವರಿಸಿದರು.
ಭಾರತವು ಗ್ಲೋಬಲ್ ವಾರ್ಮಿಂಗ್ ವಿಚಾರದಲ್ಲಿ ನಾಯಕತ್ವ ವಹಿಸುತ್ತಿದ್ದು, ವಿಶ್ವನಾಯಕನಾಗಿ ಹೊರಹೊಮ್ಮಿದೆ. ಭಯೋತ್ಪಾದನೆ ಒಂದು ಜಾಗತಿಕ ಪಿಡುಗು ಎಂಬುದನ್ನು ಮನವರಿಕೆ ಮಾಡುವಲ್ಲಿ ನಮ್ಮ ದೇಶ ಯಶಸ್ವಿಯಾಗಿದೆ. ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕ್‍ನಲ್ಲಿ ಇಟ್ಟಿದ್ದÀ ಕಪ್ಪು ಹಣ ಜಾಗತಿಕ ಭಯೋತ್ಪಾದನಾ ಚಟುವಟಿಕೆ, ಅಕ್ರಮ ಶಸ್ತ್ರಾಸ್ತ್ರ ವ್ಯವಹಾರ, ಮಾದಕ ದ್ರವ್ಯ ಸಾಗಣೆ- ಪೂರೈಕೆಗೆÉ ಬಳಕೆಯಾಗುತ್ತಿತ್ತು. ಕಪ್ಪು ಹಣದ ದುರ್ಬಳಕೆಯನ್ನು ಜಾಗತಿಕ ವೇದಿಕೆಯಲ್ಲಿ ಚರ್ಚೆ ಆಗುವಂತೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸಿದ್ದು ಶ್ಲಾಘನೀಯ ಎಂದರು.
ಅಂತರರಾಷ್ಟ್ರೀಯ ಸಂಬಂಧಗಳ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ನಾವು ಹೇಗೆ ತೊಡಗಿಕೊಳ್ಳಬಹುದು ಎಂಬುದಕ್ಕೆ ಭಾರತ ಮಾದರಿ ದೇಶವಾಗಿ ಹೊರಹೊಮ್ಮಿದೆ. ಆರೋಗ್ಯ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಅಂತರರಾಷ್ಟ್ರೀಯ ಸಂಬಂಧಗಳು ಮಹತ್ವದ ಕೊಡುಗೆ ನೀಡಿವೆ ಎಂದು ವಿವರಿಸಿದರು. ಅಂತರರಾಷ್ಟ್ರೀಯ ವ್ಯಾಪಾರ- ವ್ಯವಹಾರ ಜೊತೆಗೆ ಈ ರೀತಿಯ ಸಂಗತಿಗಳನ್ನು ಜೋಡಿಸಿಕೊಂಡು ನಾವು ಅಭಿವೃದ್ಧಿ ಸಾಧಿಸುತ್ತಿದ್ದೇವೆ ಎಂದು ತಿಳಿಸಿದರು.
ಭಾರತದ ಮೂಲ ನಿವಾಸಿಗಳು ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯರಾಗಿ ನೆಲೆಸಿದ್ದಾರೆ. ಹಿಂದೆ ಕೇವಲ ಸರಕಾರಿ ಕಚೇರಿಗಳಾಗಿದ್ದ ರಾಯಭಾರ ಕಚೇರಿಗಳು ಈಗ ಅನಿವಾಸಿ ಭಾರತೀಯರ ಪರವಾಗಿ ಸ್ಪಂದಿಸುವ ದಿನಗಳು ಬಂದಿವೆ. ರಾಯಭಾರ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ ಏಳು ವರ್ಷಗಳಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡುವಂತಾಗಿದೆ. ಇದು ಮೆಚ್ಚುಗೆಯ ವಿಚಾರ ಎಂದರು.
ಭಾರತವು ಜಗತ್ತಿನ ತರುಣ ರಾಷ್ಟ್ರ ಎಂದೇ ಬಿಂಬಿತವಾಗಿದೆ. ಭಾರತದ ಯುವ ಸಂಪತ್ತನ್ನು ಕೌಶಲ್ಯದ ಮೂಲಕ ಸಬಲೀಕರಿಸಿ ಜಗತ್ತಿಗೆ ಬೇಕಾದ ಉತ್ತಮ ಗುಣಮಟ್ಟದ ಸಂಪನ್ಮೂಲವನ್ನು ಒದಗಿಸಲು ನಾವು ಪ್ರಯತ್ನ ಮಾಡಿದ್ದೇವೆ. ಭಾರತದ 3.5 ಕೋಟಿ ಜನರು ಹೊರದೇಶಗಳಲ್ಲಿದ್ದಾರೆ. ಅವರು ದೇಶದ ವರ್ಚಸ್ಸನ್ನು ವೃದ್ಧಿಸುವ ರಾಯಭಾರಿಗಳಾಗಿ ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ತೊÀಡಗಿಸಿಕೊಳ್ಳಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ ಎಂದರು.
ಭಾರತೀಯ ವಿಚಾರಧಾರೆ, ಸಂಸ್ಕøತಿ, ಮೌಲ್ಯಗಳನ್ನು ಇತರ ದೇಶಗಳಿಗೆ ಪರಿಚಯಿಸುವ ಕಾರ್ಯವನ್ನು ನಮ್ಮ ವಿದೇಶಾಂಗ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ವಿದೇಶಗಳಿಗೆ ತೆರಳಿದ ಪ್ರಧಾನಿಯವರು ಭಗವದ್ಗೀತೆಯ ಪ್ರತಿಗಳನ್ನು ಅಲ್ಲಿನ ಜನಪ್ರತಿನಿಧಿಗಳಿಗೆ ನೀಡಿದರು. ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಮತ್ತು ಅನುದಾನ ನೀಡುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಪ್ರಧಾನಿಯಾದ ಆರಂಭದಲ್ಲಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ, ಫ್ರಾನ್ಸ್‍ನಂಥ ದೊಡ್ಡ ರಾಷ್ಟ್ರದ ಬದಲಾಗಿ ನೆರೆಯ ಭೂತಾನ್‍ಗೆ ಪ್ರವಾಸ ಮಾಡಿದರು. ದಕ್ಷಿಣ ಏಷ್ಯಾದ ಸಣ್ಣಪುಟ್ಟ ರಾಷ್ಟ್ರಗಳನ್ನು ಭೇಟಿ ಮಾಡಿ ಬಾಂಧವ್ಯ ವೃದ್ಧಿಗೆ ಕಾರಣರಾದರು. ನಮ್ಮ ವಿದೇಶಾಂಗ ನೀತಿ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಅವರಲ್ಲಿ ಇದ್ದುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ವಿಶ್ಲೇಷಿಸಿದರು.
ಪಾಶ್ಚಿಮಾತ್ಯದ ಕಡೆ ನೋಡುವುದರ ಬದಲಾಗಿ ಪೂರ್ವದ ಕಡೆ ನೋಡುವ ಮತ್ತು ಅಲ್ಲಿನ ದೇಶಗಳ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡು ಭಾರತವನ್ನು ಸುತ್ತುವರಿಯುವ ಚೀನಾದ ಮಿಲಿಟರಿ ತಂತ್ರಗಾರಿಕೆಯನ್ನು ಮೊಟಕುಗೊಳಿಸುವ ಕಾರ್ಯ ನಡೆಸಲಾಗಿದೆ ಎಂದರು.
ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ 170ಕ್ಕೂ ಹೆಚ್ಚು ದೇಶಗಳು ಬೆಂಬಲ ನೀಡಿವೆ. ವಿಶ್ವಸಂಸ್ಥೆಯಲ್ಲಿ ನಮಗೆ ಸಿಕ್ಕಿರುವ ಈ ಯಶಸ್ಸು ದೇಶದ ದೊಡ್ಡ ಗೆಲುವು. ಇದರ ಜೊತೆಗೆ ಕಾಶ್ಮೀರದ ವಿಚಾರದಲ್ಲಿ ವಿಶ್ವಸಂಸ್ಥೆಯ ಅನೇಕ ರಾಷ್ಟ್ರಗಳು ನಮ್ಮ ಬೆಂಬಲಕ್ಕೆ ನಿಂತಿವೆ. ವಿದೇಶಾಂಗ ನೀತಿಯ ದೊಡ್ಡ ಸಾಧನೆಗಳಲ್ಲಿ ಇದೂ ಒಂದಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾವೆಂದೂ ಹಿಂದುಳಿದಿಲ್ಲ. ಇಡೀ ಜಗತ್ತು ಅದನ್ನು ಗೌರವಿಸಿದೆ. ಡೋಕ್ಲಾಮ್ ಬಿಕ್ಕಟ್ಟು ಮತ್ತು ಗಾಲ್ವಾನ್ ಕಣಿವೆಯ ಬಿಕ್ಕಟ್ಟನ್ನು ವೇಳೆ ಸನ್ಮಾನ್ಯ ಮೋದಿ ಅವರ ಕಾರ್ಯವೈಖರಿಯೂ ಶ್ಲಾಘನೀಯ ಎಂದು ಅವರು ಮೆಚ್ಚುಗೆ ಸೂಚಿಸಿದರು. ಚೀನಾವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂಬ ಭಾವನೆಯಿಂದ ಜಗತ್ತು ಹೊರಬರಲು ಇದರಿಂದ ಸಾಧ್ಯವಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಸುರಕ್ಷತೆ ಬಲಪಡಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಧುನಿಕ ಯುದ್ಧವಿಮಾನ, ರಾಡಾರ್ ವ್ಯವಸ್ಥೆ ಮೂಲಕ ಸಮರ್ಥವಾಗಿ ನಮ್ಮ ದೇಶ ಬೆಳೆದಿದೆ. ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿ ಕ್ವಾಡ್ ಎಂಬ ಅಂತರರಾಷ್ಟ್ರೀಯ ಒಪ್ಪಂದ ಮಾಡಿಕೊಂಡಿವೆ. ಈ ನಾಲ್ಕು ರಾಷ್ಟ್ರಗಳು ಹಿಂದೂ ಮಹಾಸಾಗರದಲ್ಲಿ ಪೆಸಿಫಿಕ್ ಓಶಿಯನ್‍ನ ಒಂದು ಭಾಗದಲ್ಲಿ ಚೀನಾದ ವಿಸ್ತರಣಾ ಕಾರ್ಯತಂತ್ರವನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿಕೊಂಡ ಮಹತ್ವದ ಒಪ್ಪಂದ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು.
ನಮ್ಮ ಸ್ಕಿಲ್ ಇಂಡಿಯಾ ಯೋಜನೆ ಮೂಲಕ ನಮ್ಮ ಯುವಜನತೆ ಜಗತ್ತಿಗೆ ಬೇಕಾದ ಗುಣಮಟ್ಟದ ಮಾನವ ಸಂಪನ್ಮೂಲವಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಯುವಜನರಿಗೆ ಪ್ರಪಂಚದ ಎಲ್ಲಾ ಕಡೆ ವಿಪುಲವಾದ ಅವಕಾಶಗಳೂ ಲಭಿಸಲು ಸಾಧ್ಯವಾಗುತ್ತಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತವು ನಮ್ಮಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಸಣ್ಣಪುಟ್ಟ ರಾಷ್ಟ್ರಗಳಿಗೆ ಹಂಚಿಕೊಂಡಿದೆ. 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ಪೂರೈಸಲಾಗಿದೆ. ಅಲ್ಲದೆ ಅನೇಕ ಬಡ ರಾಷ್ಟ್ರಗಳಿಗೆ ನೆರವಾಗಿದೆ. ಪ್ರಧಾನಿಯವರ ಮೇಲಿನ ನಂಬಿಕೆ ಮತ್ತು ವಿಶ್ವಾಸದ ಪರಿಣಾಮವಾಗಿ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಅನೇಕ ದೇಶಗಳು ಆಮ್ಲಜನಕ ಪೂರೈಕೆಗೆ ಮುಂದಾಗಿವೆ ಎಂದರು.
ಜಗತ್ತಿನ ಇತರ ರಾಷ್ಟ್ರಗಳು ಈಗ ಭಾರತವನ್ನು ಫಾರ್ಮಸ್ಯೂಟಿಕಲ್ ಹಬ್ ಆಫ್ ದಿ ವಲ್ರ್ಡ ಎಂದು ಗುರುತಿಸುವಂತಾಗಿದೆ. ಜಪಾನ್‍ನಿಂದ ಪಡೆದ ಬುಲೆಟ್ ಟ್ರೈನ್‍ನ ತಂತ್ರಜ್ಞಾನ, ಘನ ಮತ್ತು ದ್ರವ ತ್ಯಾಜ್ಯದ ಸಂಸ್ಕರಣಾ ತಂತ್ರಜ್ಞಾನದ ಕುರಿತ ಒಡಂಬಡಿಕೆ, ಕ್ಲೀನ್ ಟೆಕ್ನಾಲಜಿ ಜೊತೆ ಒಪ್ಪಂದ, ಅಮೆರಿಕಾ ಜೊತೆ ಒಡಂಬಡಿಕೆ ಮೂಲಕ ಭಾರತ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಪರಿವರ್ತನೆಗೊಂಡಿರುವುದು- ಇವೇ ಮೊದಲಾದವು ಭಾರತದ ಮಹತ್ವದ ಸಾಧನೆಗಳು ಎಂದು ತಿಳಿಸಿದರು.
ರಫೇಲ್‍ನಂಥ ಯುದ್ಧವಿಮಾನ ನಾವೇ ತಯಾರಿಸಿ ವಿದೇಶಗಳಿಗೆ ಪೂರೈಸುವ ನಿಟ್ಟಿನಲ್ಲಿ ಒಪ್ಪಂದದಲ್ಲಿ ಸಮಗ್ರ ಬದಲಾವಣೆ ಮಾಡಿಕೊಳ್ಳಲಾಗಿದೆ. ಇದರಿಂದ ಭಾರತವು ಗ್ಲೋಬಲ್ ಹಬ್ ಫಾರ್ ಡಿಫೆನ್ಸಿವ್ ಇಕ್ವಿಪ್‍ಮೆಂಟ್ ಎಂದು ಗುರುತಿಸಿಕೊಳ್ಳಲಿದೆ ಎಂದು ವಿವರಿಸಿದರು.
ಜಿ 7, ಜಿ 20, ಕ್ವಾಡ್, 41 ಆಫ್ರಿಕನ್ ರಾಜ್ಯಗಳ ಒಕ್ಕೂಟ, ಬ್ರಿಕ್ಸ್ ಒಕ್ಕೂಟದ ನಾಯಕತ್ವ ಪಡೆಯುವ ನಿಟ್ಟಿನಲ್ಲಿ ಭಾರತ ಮುಂದಾಗಿದೆ. ಇವೆಲ್ಲವೂ ಕೇವಲ ಏಳು ವರ್ಷಗಳಲ್ಲಿ ಆಗಿದೆ. 2014ರ ಹಿಂದೆ ಭಾರತದ ಬಗ್ಗೆ ಇದ್ದ ನಕಾರಾತ್ಮಕ ದೃಷ್ಟಿಕೋನ ಬದಲಾಗಿದೆ ಎಂದರು.
ಭಾರತವು ಭಯೋತ್ಪಾದನಾ ಹಬ್ ಆಗಿರುವುದು ದೊಡ್ಡ ಸವಾಲು. ಮಾದಕ ದ್ರವ್ಯ ಸಾಗಾಟಕ್ಕೆ ಭಯೋತ್ಪಾದಕರು ಒತ್ತು ನೀಡುತ್ತಿದ್ದಾರೆ. ದೇಶದೊಳಕ್ಕೆ ಅಕ್ರಮ ಮದ್ದುಗುಂಡುಗಳನ್ನು ತರಲಾಗಿದೆ. ಬಾಂಗ್ಲಾ ನುಸುಳುಕೋರರು ಇಲ್ಲಿನ ಪ್ರಜೆಗಳಾಗಿ ಪರಿವರ್ತನೆ ಹೊಂದಿರುವುದು, ಅವರನ್ನು ಪತ್ತೆ ಮಾಡಿ ಗಡೀಪಾರು ಮಾಡಬೇಕಾದ ದೊಡ್ಡ ಸವಾಲು ಕೂಡ ನಮ್ಮ ಮುಂದಿದೆ. ಇದಕ್ಕಾಗಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‍ಆರ್‍ಸಿ) ದೇಶವು ಅನುಷ್ಠಾನಕ್ಕೆ ತಂದಿದೆ ಎಂದು ತಿಳಿಸಿದರು.
ಬಾಂಗ್ಲಾ, ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಕ್ರಿಶ್ಚಿಯನ್ನರು ಮತ್ತಿvರಿಗೆ ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದಾಗ ಅದನ್ನು ತಪ್ಪಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ಸಿಎಎ ಕುರಿತು ಸರಿಯಾಗಿ ಜಗತ್ತಿಗೆ ಮಾಹಿತಿ ಕೊಡಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದರು.
ಮಾನವ ಅಕ್ರಮ ಸಾಗಣೆ (ಹ್ಯೂಮನ್ ಟ್ರಾಫಿಕಿಂಗ್) ಸಮಸ್ಯೆಯೂ ನಮ್ಮನ್ನು ಬಾಧಿಸುತ್ತಿದ್ದು ಅದನ್ನು ತಪ್ಪಿಸಬೇಕಿದೆ. ಚೀನಾ ದೇಶವು ಕೆಲವು ಸಣ್ಣ ದೇಶಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತಿದೆ. ಭಾರತೀಯ ಅನಿವಾಸಿಗಳನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ವಿದೇಶಾಂಗ ನೀತಿ ಇನ್ನಷ್ಟು ಸ್ಪಷ್ಟತೆ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ನಮ್ಮ ನಂಬಿಕೆ, ನಮ್ಮ ವಿಚಾರ, ಸಂಸ್ಕøತಿಯನ್ನು ಕತ್ತಿ ಎತ್ತಿ ಬೇರೆ ದೇಶದ ಮೇಲೆ ಹೇರಿದಂಥ ಉದಾಹರಣೆ ಇಲ್ಲ. ರಾಷ್ಟ್ರಹಿತವನ್ನು ಮುಂದಿಟ್ಟುಕೊಂಡು ನಮ್ಮ ವಿದೇಶಾಂಗ ನೀತಿಯನ್ನು ರೂಪಿಸಲಾಗಿದೆ. ಭಾರತದ ವಿದೇಶಾಂಗ ನೀತಿ ನಮ್ಮ ಕಾರ್ಯಕರ್ತರಿಗೆ ಹೆಮ್ಮೆ ತರುವ ಸಂಗತಿ ಎಂದು ವಿವರಿಸಿದರು. ಭಾರತದ ವರ್ಚಸ್ಸು ಕಳೆದ ಏಳು ವರ್ಷಗಳಲ್ಲಿ ಬಹಳಷ್ಟು ಬದಲಾದುದನ್ನು ನಾವು ಕಾಣುತ್ತಿದ್ದೇವೆ ಎಂದೂ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.