ವಿಶ್ವಮಟ್ಟದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರ
Team Udayavani, Oct 9, 2017, 11:02 AM IST
ಬೆಂಗಳೂರು: “ವಿಶ್ವಮಟ್ಟದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಪರಿಣಾಮ ಚೀನಾದೊಂದಿಗಿನ ಡೋಕ್ಲಾಂ
ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವುದರೊಂದಿಗೆ, ನೆರೆಯ ಪಾಕಿಸ್ತಾನಕ್ಕೆ ಕಡಿವಾಣ ಹಾಕಲು ಸಾಧ್ಯವಾಯಿತು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 9ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಿತಿ ಮೊದಲಿನಂತಿಲ್ಲ. ದೇಶ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ್ದು, ವಿಶ್ವದ ಜನ ಭಾರತವನ್ನು ಗೌರವದಿಂದ ನೋಡುವಂತಾಗಿದೆ’ ಎಂದರು.
“ದೇಶದ ಗಡಿ ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳ ಮಧ್ಯೆ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಎರಡೂ ರಾಷ್ಟ್ರಗಳ ಮಧ್ಯೆ ಸಂಘರ್ಷ ಉಂಟಾಗುತ್ತದೋ ಎಂಬ ಆತಂಕ ವಿಶ್ವಮಟ್ಟದಲ್ಲಿ ಸೃಷ್ಟಿಯಾಗಿತ್ತು. ಆದರೆ, ಎರಡೂ ರಾಷ್ಟ್ರಗಳು
ಜಾಣ್ಮೆಯಿಂದ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡವು. ಚೀನಾ ತಣ್ಣಗಾಗಲು ಭಾರತ ಶಕ್ತಿಶಾಲಿಯಾಗಿ ರೂಪುಗೊಂಡಿದ್ದು
ಕಾರಣವಾಯಿತು’ ಎಂದರು.
ಅದೇ ರೀತಿ ಪಾಕಿಸ್ತಾನ ವಿಚಾರದಲ್ಲೂ ಭಾರತಕ್ಕೆ ವಿಶ್ವದ ಬೆಂಬಲ ಸಿಕ್ಕಿತ್ತು. ಪಾಕ್ ಮೇಲೆ ಭಾರತದ ಮೊದಲ ಗುಂಡು ಹಾರಬಾರದು. ಆದರೆ, ಪಾಕ್ ಕಡೆಯಿಂದ ಒಂದು ಗುಂಡು ಹಾರಿಬಂದರೆ ಮತ್ತೆ ಈ ಕಡೆಯಿಂದ ಹಾರುವ ಗುಂಡುಗಳಿಗೆ ಲೆಕ್ಕ ಇಡಬೇಡಿ. ಆ ಕಡೆಯಿಂದ ಮತ್ತೆ ಗುಂಡು ಹಾರದಂತೆ ನೋಡಿಕೊಳ್ಳಿ ಎಂದು ಗಡಿ ಭಾಗದಲ್ಲಿರುವ ಯೋಧರಿಗೆ ನಮ್ಮ ಸರ್ಕಾರ ಹೇಳಿತ್ತು. ಅದೇ ರೀತಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರತಿನಿತ್ಯ ದೇಶ ನುಸುಳುವ ಉಗ್ರರನ್ನು ಸಂಹಾರ ಮಾಡಲು ಯೋಧರಿಗೆ ಅವಕಾಶ ನೀಡಿತ್ತು. ಇದರ ಪರಿಣಾಮ ಪಾಕ್‌ನಿಂದ ನುಸುಳುವ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಗಮನಕ್ಕೆ: ಬೇಲೂರು-ಹಳೇಬೀಡಿನಲ್ಲಿ ಜಕಣಾಚಾರಿಯವರ ಪ್ರತಿಮೆ ಸ್ಥಾಪನೆ, ರಾಷ್ಟಮಟ್ಟದಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆ, ಸೆ.17ರಂದು ಸರ್ಕಾರದಿಂದ ವಿಶ್ವಕರ್ಮ ಜಯಂತಿ ಆಚರಣೆ ಕುರಿತಂತೆ ವಿಶ್ವಕರ್ಮ ಸಮುದಾಯ ಮುಂದಿಟ್ಟ ಬೇಡಿಕೆಗಳನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತರುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ವಿಶ್ವಕರ್ಮ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಕಾಳಹಸ್ತೇಂದ್ರ ಸ್ವಾಮೀಜಿ ಸೇರಿ ಸಮುದಾಯದ 64 ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಪ್ರಕಾಶ್ ಜಾವಡೇಕರ್, ಅನಂತಕುಮಾರ್ ಹೆಗಡೆ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಶಾಸಕರಾದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಮತ್ತಿತರರು ಇದ್ದರು.
ಇದೇ ವೇಳೆ ಅಂತಾರಾಷ್ಟ್ರೀಯ ಆಧ್ಯಾತ್ಮ ಗುರು ರವಿಶಂಕರ ಗುರೂಜಿ ಹಾಗೂ ನಟ ರವಿಚಂದ್ರನ್ ಅವರಿಗೆ 9ನೇ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಮತ್ತು ಮುಳಬಾಗಲಿನ ಹನುಮಂತನಹಳ್ಳಿ ಶಂಕರಾಚಾರ್ಯ ಅವರನ್ನು ಅಭಿನಂದಿಸಲಾಯಿತು.
ಬಿಜೆಪಿ ಸಮಾವೇಶವಾದ ವಿಶ್ವಕರ್ಮ ಜಯಂತಿ
ಕೆ.ಪಿ.ನಂಜುಂಡಿ ನೇತೃತ್ವದ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪ್ರತಿ ವರ್ಷ ವಿಶ್ವಕರ್ಮ ಜಯಂತಿ ಆಚರಿಸಿಕೊಂಡು ಬರುತ್ತಿದ್ದು, ಈ ಹಿಂದಿನ 8 ವಿಶ್ವಕರ್ಮ ಜಯಂತಿಗಳು ಕಾಂಗ್ರೆಸ್ ಸಮಾವೇಶವಾಗಿದ್ದರೆ, ಅರಮನೆ ಮೈದಾನದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಯಂತಿ ಬಿಜೆಪಿ ಸಮಾವೇಶವಾಗಿತ್ತು. ಈ ಹಿಂದೆ ನಂಜುಂಡಿ ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್ ನಾಯಕರನ್ನು ಮಾತ್ರ
ಆಹ್ವಾನಿಸಿ ವಿಶ್ವಕರ್ಮ ಜಯಂತಿ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಬಿಜೆಪಿ ಸೇರಿದ್ದರಿಂದ ಈ ಬಾರಿಯ ವಿಶ್ವಕರ್ಮ ಜಯಂತಿ ಬಿಜೆಪಿ ಸಮಾವೇಶ ವಾಗಿತ್ತು. ನಂಜುಂಡಿ ಸೇರಿ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು ಕಾಂಗ್ರೆಸ್ ವಿರುದ್ಧ ಟೀಕೆ, ಆರೋಪ ಗಳ ಸುರಿಮಳೆಗೈದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮಾತು ಆರಂಭಿಸಿದ ರಾಜನಾಥ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ಸೇರಿದ್ದ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. “ನನ್ನ ಪ್ರೀತಿಯ ವಿಶ್ವಕರ್ಮ ಸಮಾಜದ ಬಂಧು, ಭಗಿನಿಯರೇ ನಿಮಗೆಲ್ಲ ನಮಸ್ಕಾರಗಳು. ಭಗವಾನ್ ವಿಶ್ವಕರ್ಮ ಮತ್ತು ಅಮರಶಿಲ್ಪಿ ಜಕಣಾಚಾರಿಯವರಿಗೂ ನನ್ನ ಪ್ರಣಾಮಗಳು’ ಎಂದು ಮಾತು
ಆರಂಭಿಸಿ ನಂತರ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ಕೇಂದ್ರ ಸಚಿವ ಅನಂತಕುಮಾರ್ ಅವರು ಈ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದರು.
ಕುರ್ಚಿಯಲ್ಲಿ ಕುಳಿತುಕೊಳ್ಳಲು ಹಿಂದೇಟು
ವಿಶ್ವಕರ್ಮ ಮಹಾಸಭಾ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಸನ್ಮಾನ ಸ್ವೀಕಾರಕ್ಕಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹಿಂದೇಟು ಹಾಕಿದರು. ರಾಜನಾಥ್ ಅವರನ್ನು ಸನ್ಮಾನಿಸಲು ಸುತ್ತೂರು ಶ್ರೀ, ರವಿಶಂಕರ ಗುರೂಜಿ ಸೇರಿ ವಿಶ್ವಕರ್ಮ ಸಮುದಾಯದ ಸ್ವಾಮೀಜಿಗಳು ನಿಂತಿದ್ದರು. ಅವರ ಮುಂಭಾಗದಲ್ಲಿ ಕುರ್ಚಿ ಹಾಕಲಾಗಿತ್ತು. ಆದರೆ, ಅದರಲ್ಲಿ
ಕುಳಿತುಕೊಳ್ಳಲು ಹಿಂದೇಟು ಹಾಕಿದ ರಾಜನಾಥ್, ನಿಂತೇ ಸನ್ಮಾನ ಸ್ವೀಕರಿಸುತ್ತೇನೆ ಎಂದರು. ಆದರೆ, ಕೇಂದ್ರ ಸಚಿವ ಅನಂತಕುಮಾರ್ ಅವರು ಬಲವಂತವಾಗಿ ರಾಜನಾಥ್ ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿದರು.
ಪೊಲೀಸರ ಕ್ರಮಕ್ಕೆ ಬೇಸರ
ವಿಶ್ವಕರ್ಮ ಜಯಂತಿಗಾಗಿ ಅರಮನೆ ಮೈದಾನಕ್ಕೆ ಬರುವ ಸಮುದಾಯದವರ ವಾಹನಗಳನ್ನು ಪೊಲೀಸರು ದೂರದಲ್ಲೇ ನಿಲ್ಲಿಸಿದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್‌ವೈ, “ಸಮಾವೇಶಕ್ಕೆ ಅನುಮತಿ ನೀಡಲು ಶನಿವಾರ ಸಂಜೆವರೆಗೂ ಸತಾಯಿಸಿದರು. ಇಂದು ಮುಖ್ಯಮಂತ್ರಿಗಳು ಪೊಲೀಸರ ಮೂಲಕ ವಾಹನಗಳನ್ನು ನಾಲ್ಕೈದು ಕಿ.ಮೀ. ದೂರ ನಿಲ್ಲಿಸಿ ಅವರು ನಡೆದುಕೊಂಡು ಬರುವಂತೆ ಮಾಡಿದರು. ಇದು ಸಿಎಂ ಸ್ಥಾನದಲ್ಲಿರುವವರಿಗೆ ಶೋಭೆ ತರುವುದಿಲ್ಲ’ ಎಂದರೆ, ಶೋಭಾ ಕರಂದ್ಲಾಜೆ ಕೂಡ “ಪೊಲೀಸರ ಕ್ರಮ ಸಮುದಾಯದ ಜನರಿಗೆ ಮಾಡಿದ ಅನ್ಯಾಯ’ ಎಂದು ಆರೋಪಿಸಿದರು.
ಕತ್ತು ಹಿಸುಕಬೇಡಿ: ಕೆ.ಪಿ. ನಂಜುಂಡಿ
ಹಿಂದುಳಿದ ವರ್ಗದವರಾದ ನೀವು ಕಾಂಗ್ರೆಸ್ ಸೇರಿ ಒಂದೆರಡು ವರ್ಷಕ್ಕೆ ಮುಖ್ಯಮಂತ್ರಿಯಾಗಬಹುದಾದರೆ, ಅದೇ ವರ್ಗಕ್ಕೆ ಸೇರಿದ ನಾನು 16 ವರ್ಷ ಕಾಂಗ್ರೆಸ್‌ಗೆ ಸೇವೆ ಸಲ್ಲಿಸಿದರೂ ವಿಧಾನ ಪರಿಷತ್ ಸದಸ್ಯನಾಗಬಾರದೇ ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ರಾಜ್ಯದ ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯದ ನಂತರ ವಿಶ್ವಕರ್ಮ ಸಮುದಾಯವಿದೆ. ಆದರೆ, ಅದೇ ವರ್ಗಕ್ಕೆ ಸೇರಿದವರೇ ವಿಶ್ವಕರ್ಮರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ಅವರು, “ನೀವೂ ಬದುಕಿ, ನಮ್ಮನ್ನೂ ಬದುಕಲು ಬಿಡಿ. ಬೆಳೆಯುವವರ ಕತ್ತು ಹಿಸುಕುವ ಕೆಲಸ ಮಾಡಬೇಡಿ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.