ದೇಶಕ್ಕೆ ಸಿಗಲಿದೆ ವಿಮಾನ ಬಲ; ಸಿ-295 ವಿಮಾನ ಉತ್ಪಾದನಾ ಘಟಕಕ್ಕೆ ಶಂಕು
Team Udayavani, Oct 31, 2022, 7:15 AM IST
ವಡೋದರಾ: ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ಭಾರತ ಸರಕು ಸಾಗಣೆಯ ವಿಮಾನಗಳ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರವಾಗಲಿದೆ.
ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಟಾಟಾ ಗ್ರೂಪ್ ಮತ್ತು ಏರ್‌ಬಸ್ ಸಹಭಾಗಿತ್ವದಲ್ಲಿ ಸಿ-295 ಸರಕು ಸಾಗಣೆಯ ವಿಮಾನಗಳ ನಿರ್ಮಾಣ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಸ್ಥಿರ, ಮುಂದಿನ ದಿನಗಳನ್ನು ಕೇಂದ್ರೀಕರಿಸಿ ಮತ್ತು ದೃಢವಾಗಿರುವ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಹೀಗಾಗಿಯೇ ದೇಶದಲ್ಲಿ ಆರ್ಥಿಕ ಸುಧಾರಣೆಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲಾಗುತ್ತಿದೆ. ಜತೆಗೆ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಇತ್ತೀಚಿನ ವರ್ಷಗಳಲ್ಲಿ ಭಾರತ ಹೊಸ ಮನಸ್ಥಿತಿ, ಹೊಸ ರೀತಿಯಲ್ಲಿ ಕೆಲಸ ಮಾಡುವ ಮನೋಭಾವದಲ್ಲಿ ಇದೆ. ಇದೇ ಕಾರಣದಿಂದಾಗಿ ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ಸರಕು ಸಾಗಣೆ ವಿಮಾನ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರವಾಗಿ ಪರಿವರ್ತನೆಯಾಗಲಿದೆ. ಜತೆಗೆ ಈ ನಿರ್ಧಾರ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯಿಕ ವಿಮಾನಗಳನ್ನು ಉತ್ಪಾದನೆ ಮಾಡಲೂ ಅವಕಾಶ ಸಿಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.
ಜಗತ್ತೇ ಗುರಿ:
ಮೇಕ್ ಇನ್ ಇಂಡಿಯಾ ಎಂಬ ಧ್ಯೇಯವಾಕ್ಯದ ಅಡಿ ಜಗತ್ತನ್ನೇ ಗುರಿಯಾಗಿಸಿ ಇಲ್ಲಿ ವಿವಿಧ ವಸ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇದುವೇ ದೇಶಕ್ಕೆ ಉತ್ಪಾದನಾ ಕ್ಷೇತ್ರದಲ್ಲಿ ಉತ್ತಮ ಹೆಸರು ತಂದುಕೊಡಲಿದೆ ಎಂದರು ಪ್ರಧಾನಿ ಮೋದಿ. ಭಾರತೀಯ ವಾಯುಪಡೆಗಾಗಿ ವಡೋದರಾ ಘಟಕದಲ್ಲಿ ಸರಕು ಸಾಗಣೆಯ ವಿಮಾನಗಳನ್ನು ಉತ್ಪಾದನೆ ಮಾಡುವ ಅಂಶ ದೇಶದ ಸೇನಾ ವ್ಯವಸ್ಥೆಗೆ ಹೆಚ್ಚಿನ ಬಲತಂದು ಕೊಡಲಿದೆ. ಇದರಿಂದಾಗಿ ವೈಮಾನಿತ ಉತ್ಪಾದನಾ ಕ್ಷೇತ್ರದಲ್ಲಿ ದೇಶಕ್ಕೆ ಪ್ರಸಿದ್ಧಿಯನ್ನೂ ತಂದುಕೊಡಲಿದೆ ಎಂದು ಹೇಳಿದ್ದಾರೆ.
“ಮುಂದಿನ ವರ್ಷಗಳಲ್ಲಿ ರಕ್ಷಣೆ ಮತ್ತು ವೈಮಾನಿತ ಉತ್ಪಾದನಾ ಕ್ಷೇತ್ರಗಳೆರಡೂ ದೇಶಕ್ಕೆ ಪ್ರಮುಖವಾಗಲಿದೆ. 2025ರ ವೇಳೆಗೆ ದೇಶದ ರಕ್ಷಣಾ ಉತ್ಪಾದನೆಯ ಮೌಲ್ಯ 25 ಬಿಲಿಯನ್ ಡಾಲರ್ ಮೊತ್ತವನ್ನು ದಾಟಲಿದೆ. ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಕೂಡ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದರು.
ಯೋಜನೆಯ ಹೈಲೈಟ್ ಏನು?
21, 935 ಕೋಟಿ- ಒಪ್ಪಂದ ಮೊತ್ತ
ಏನು ಉತ್ಪಾದನೆ
ಏರ್‌ಬಸ್‌ನ ಸಿ-295 ಸರಕು ಸಾಗಣೆ ವಿಮಾನ
56- ಒಟ್ಟು ವಿಮಾನಗಳು
16- ಏರ್‌ಬಸ್‌ನಿಂದ ಸಿಗಲಿರುವ ಅವೇ ಹಂತದಲ್ಲಿ ಸಿಗಲಿರುವ ವಿಮಾನ
39- ಆಗಸ್ಟ್ 2031ರ ಒಳಗೆ ವಡೋದರಾದಲ್ಲಿ ಉತ್ಪಾದನೆಯಾಗಲಿರುವ ವಿಮಾನಗಳು
ಸಹಭಾಗಿತ್ವ ಯಾರದ್ದು?
ಏರ್‌ಬಸ್ ಮತ್ತು ಟಾಟಾ ಗ್ರೂಪ್
ಹೆಗ್ಗಳಿಕೆ ಏನು?
– ದೇಶದ ಮಿಲಿಟರಿ ಉಪಯೋಗಕ್ಕಾಗಿ ಖಾಸಗಿ ಸಂಸ್ಥೆಯಿಂದ ಸರಕು ಸಾಗಣೆ ವಿಮಾನ ನಿರ್ಮಾಣ.
– 2026 ಸೆಪ್ಟೆಂಬರ್ ವೇಳೆಗೆ ದೇಶದಲ್ಲಿ ಸಿದ್ಧಗೊಳಿಸಿದ ಸಿ-296 ವಿಮಾನ ಸೇವೆಗೆ ಲಭ್ಯ.
– ಐರೋಪ್ಯ ಒಕ್ಕೂಟದಿಂದ ಹೊರಭಾಗದಲ್ಲಿ ಮೊದಲ ಬಾರಿಗೆ ಈ ವಿಮಾನ ಉತ್ಪಾದನೆ.
– 05ರಿಂದ 09 ಟನ್ ಭಾರ ಹೊರುವ ಸಾಮರ್ಥ್ಯ
– ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನ ಉತ್ಪನ್ನಗಳ ಬಳಕೆ
– ಹೊಸ ವಿಮಾನಗಳಿಂದ ಸರಕು ಸಾಗಣೆ ಮಾಡುವ ಐಎಎಫ್ ಸಾಮರ್ಥ್ಯ ವೃದ್ಧಿಸಲಿದೆ.
ಯಾವುದರ ಬದಲು?
– ಐಎಎಫ್ ಈಗ ಆ್ಯವ್ರೋ748 ವಿಮಾನಗಳನ್ನು ಸರಕು ಸಾಗಣೆಗೆ ಬಳಸುತ್ತದೆ. ಉತ್ಪಾದನೆಯಾಗಲಿರುವ ಹೊಸ ವಿಮಾನಗಳು ಆ್ಯವ್ರೋ ಜಾಗವನ್ನು ತುಂಬಲಿವೆ.
35- ಜಗತ್ತಿನಲ್ಲಿ ಹೊಸ ವಿಮಾನ ಬಳಕೆ ಮಾಡಲಿರುವ ದೇಶ ಭಾರತ
ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಮನೋಭಾವನೆ ಹೊಂದಿರುವ ದೇಶಕ್ಕೆ ಈ ಹೊತ್ತು ಅಮೋಘವಾದದ್ದು.
-ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.