ನದಿ ಉಳಿಸುವ ಜಾಥಾಕ್ಕೆ ರಾಜ್ಯ ಸರ್ಕಾರದ ಪರೋಕ್ಷ ಬೆಂಬಲ
Team Udayavani, Sep 3, 2017, 12:30 PM IST
ಬೆಂಗಳೂರು: ದೇಶದ ನದಿಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸದ್ಗುರು ನೇತೃತ್ವದ ಇಶಾ ಫೌಂಡೇಷನ್
ಹಮ್ಮಿಕೊಂಡಿರುವ ನದಿ ಉಳಿಸುವ ರ್ಯಾಲಿಗೆ ರಾಜ್ಯ ಸರ್ಕಾರ ಪರೋಕ್ಷ ಬೆಂಬಲ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ನದಿ ಜೋಡಣೆಗೆ ಮುಂದಾಗಿದ್ದು, ಕರ್ನಾಟಕದಿಂದಲೂ ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗುವ ಸಾಧ್ಯತೆಯಿದೆ. ನದಿ ಪುನರುಜ್ಜೀವನಕ್ಕಾಗಿ ಇಶಾ ಫೌಂಡೇಷನ್ “ರ್ಯಾಲಿ ಫಾರ್ ರಿವರ್’ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಇದರ ಭಾಗವಾಗಿ ಸೆ.9ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸದ್ಗುರು ನೇತೃತ್ವದಲ್ಲಿ ಸಾರ್ವಜನಿಕ ಅರಿವು ಕಾರ್ಯಕ್ರಮ ನಡೆಯಲಿದೆ.
ನದಿ ಉಳಿಸುವ ರ್ಯಾಲಿ ಮತ್ತು ಸಾರ್ವಜ ನಿಕರ ಅರಿವು ಕಾರ್ಯಕ್ರಮದಲ್ಲಿ ಭಾಗವಹಿ ಸಲು ನಗರದ ಎಲ್ಲಾ ಸರ್ಕಾರಿ
ಹಾಗೂ ಅನುದಾನಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಕಾಲೇಜು ಶಿಕ್ಷಣ ಇಲಾಖೆ ಅನುಮತಿ
ನೀಡಿದೆ. ಸೆ.5ರಂದು ನಡೆಯುವ ಸಾರ್ವಜನಿಕ ಅರಿವು ಕಾರ್ಯಕ್ರಮಕ್ಕೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ
ಕಾಲೇಜಿನ ವಿದ್ಯಾರ್ಥಿಗಳು ಎನ್‌ಎಸ್ ಎಸ್ ಹಾಗೂ ಎನ್‌ಸಿಸಿ ಘಟಕಗಳ ಸಂಚಾಲಕರ ನೇತೃತ್ವದಲ್ಲಿ ಕಾಲೇಜಿನ
ಇತರೆ ಪ್ರಾಧ್ಯಾಪಕರೊಂದಿಗೆ ಭಾಗವಹಿಸಲು ತಿಳಿಸಿದೆ.
ಈಶ ಸಂಸ್ಥೆಯಿಂದ ದೇಶದ 16 ರಾಜ್ಯಗಳಲ್ಲಿ 20 ಸಾರ್ವಜನಿಕ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ
ನಡೆಯುವ ಸಾರ್ವಜನಿಕ ಅರಿವು ಕಾರ್ಯ ಕ್ರಮದಲ್ಲಿ ಸದ್ಗುರು ಜತೆಗೆ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
ಬೆಂಗಳೂರು ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಸರ್ಕಾರಿ ಜಿಆರ್‌ಐಸಿಪಿ, ಎಸ್.ಜೆ. (ಸರ್ಕಾರಿ) ಪಾಲಿಟೆಕ್ನಿಕ್,
ಎಪಿಎಸ್ ಪಾಲಿಟೆಕ್ನಿಕ್, ಎಂಇಐ ಪಾಲಿಟೆಕ್ನಿಕ್ ಹಾಗೂ ಬನ್ನೇರುಘಟ್ಟದ ಶ್ರೀ ವೆಂಕಟೇಶ್ವರ ಪಾಲಿಟೆಕ್ನಿಕ್‌ನ ತಲಾ
50 ವಿದ್ಯಾರ್ಥಿಗಳಿಗೆ ಭಾಗವಹಿಸುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು