ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂಡಸ್ಟ್ರಿ ಹಬ್
ವಿದ್ಯಾರ್ಥಿಗಳಿಗೆ ಉದ್ಯೋಗ ಮಾರ್ಗದರ್ಶನ, ಕೈಗಾರಿಕಾನುಭವ
Team Udayavani, Dec 30, 2020, 6:08 AM IST
ಬೆಂಗಳೂರು: ಎಂಜಿನಿಯರಿಂಗ್ ಕಾಲೇಜು ಮತ್ತು ಕೈಗಾರಿಕೆಗಳ ನಡುವೆ ನೇರ ಸಂಪರ್ಕ ಸಾಧಿಸಲು ಹಾಗೂ ವಿದ್ಯಾರ್ಥಿಗಳ ಇಂಟರ್ನ್ಶಿಪ್, ಪ್ರಾಜೆಕ್ಟ್ ವರ್ಕ್, ಉದ್ಯೋಗ ಅವಕಾಶ, ಕೌಶಲಾಭಿವೃದ್ಧಿ, ಮಾರ್ಗದರ್ಶನಕ್ಕಾಗಿ “ಇಂಡಸ್ಟ್ರಿ ಹಬ್’ ಅಸ್ತಿತ್ವಕ್ಕೆ ಬರಲಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಉದ್ಯೋಗ ಅವಕಾಶ, ಮಾರ್ಗದರ್ಶನ, ಕೈಗಾರಿಕೆಗಳಿಗೆ ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಿರುವ ಕೌಶಲವನ್ನೇ ಮುಖ್ಯವಾಗಿ ಇರಿಸಿಕೊಂಡು ಇಂಡಸ್ಟ್ರಿ ಹಬ್ ರಚನೆಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಕಾಲೇಜುಗಳು ಗುರುತಿಸುವ ನಿರ್ದಿಷ್ಟ ಸ್ಥಳಗಳಲ್ಲಿ ಈ ಖಾಸಗಿ ಸಂಸ್ಥೆಯು ಇಂಡಸ್ಟ್ರಿ ಹಬ್ ರಚನೆಗೆ ಬೇಕಾದ ವ್ಯವಸ್ಥೆ ಮಾಡಲಿದೆ. ಇದಕ್ಕಾಗಿ ಪ್ರತೀ ಕಾಲೇಜಿನಲ್ಲೂ ಪ್ರತ್ಯೇಕ ಸ್ಥಳ ಮೀಸಲಿಡಲು ಸೂಚನೆ ನೀಡಿದ್ದೇವೆ ಎಂದು ವಿಟಿಯು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ವಿಟಿಯು ಸಂಯೋಜಿತ 209 ಮತ್ತು 19 ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಿವೆ. ಈ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಡಸ್ಟ್ರಿ ಕುರಿತ ಹ್ಯಾಂಡ್-ಆನ್ (ನೇರ) ಅನುಭವ ನೀಡುವ ಕಾರ್ಯವನ್ನು ಈ ಹಬ್‌ಗಳು ಮಾಡಲಿವೆ. ಇಂಡಸ್ಟ್ರಿ ಹಬ್ ರಚನೆ ಬಗ್ಗೆ ಜ. 25ರೊಳಗೆ ಮಾಹಿತಿ ನೀಡಬೇಕು ಎಂದು ವಿಟಿಯು ಕುಲಸಚಿವರು ಎಲ್ಲ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.
ಅಂತಿಮ ವರ್ಷದವರಿಗೆ ಹೆಚ್ಚು ಅನುಕೂಲ
ಹಬ್‌ನಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಉದ್ಯೋಗಾವಕಾಶ, ಅಗತ್ಯ ಕೌಶಲ ಇತ್ಯಾದಿ ಮಾಹಿತಿ ಸಿಗುತ್ತದೆ. ಆಕರ್ಷಕ ಮತ್ತು ಅತ್ಯಂತ ಪರಿಣಾಮಕಾರಿ ಪ್ರಾಜೆಕ್ಟ್ ವರ್ಕ್, ಇಂಟರ್ನ್ಶಿಪ್ ಕಾರ್ಯಕ್ರಮದ ಸಂಪೂರ್ಣ ವಿವರ ಮತ್ತು ಸದ್ಬಳಕೆ, ಉದ್ಯೋಗ ಪೂರ್ವ ತರಬೇತಿ ಇತ್ಯಾದಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏನಿದು ಇಂಡಸ್ಟ್ರಿ ಹಬ್?
ಇಂಡಸ್ಟ್ರಿ ಹಬ್‌ನಡಿ ಖಾಸಗಿ ಸಂಸ್ಥೆ ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದ ತಜ್ಞರನ್ನು ಕರೆಸಿ ಓರಿಯಂಟೇಶನ್, ಇಂಟರ್ನ್ಶಿಪ್ ಅವಕಾಶಗಳು, ಪ್ರಾಜೆಕ್ಟ್ ವರ್ಕ್, ಮೂಲ ಕೌಶಲ ತರಬೇತಿ, ಉದ್ಯೋಗಾವಕಾಶದ ಮಾಹಿತಿ ನೀಡಲಿದೆ. ಇಂಡಸ್ಟ್ರಿ ಹಬ್‌ನಡಿ ಖಾಸಗಿ ಸಂಸ್ಥೆ ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದ ತಜ್ಞರನ್ನು ಕರೆಸಿ ಓರಿಯಂಟೇಶನ್, ಇಂಟರ್ನ್ಶಿಪ್ ಅವಕಾಶಗಳು, ಪ್ರಾಜೆಕ್ಟ್ ವರ್ಕ್, ಮೂಲ ಕೌಶಲ ತರಬೇತಿ, ಉದ್ಯೋಗಾವಕಾಶದ ಮಾಹಿತಿ ನೀಡಲಿದೆ.
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.