ಪೇದೆ ಪತ್ನಿ-ಇನ್ಸ್ಪೆಕ್ಟರ್ ಅಕ್ರಮ ಸಂಬಂಧ;ಕ್ವಾರ್ಟರ್ಸ್ಗೇ ಬೆಂಕಿ!
Team Udayavani, Jul 20, 2018, 12:11 PM IST
ಬಳ್ಳಾರಿ: ಕಾನೂನು ಕಾಪಾಡಬೇಕಾದ ಇನ್ಸ್ಪೆಕ್ಟರ್ವೊಬ್ಬ ಸಹುದ್ಯೋಗಿ ಪೇದೆಯೊಬ್ಬನ ಪತ್ನಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಡಿಆರ್ ಕ್ವಾರ್ಟರ್ಸ್ಗೆ ಬೆಂಕಿ ಬಿದ್ದು ಬಟ್ಟಾ ಬಯಲಾಗಿದೆ .
ವೈರ್ಲೆಸ್ ವಿಭಾಗದ ಇನ್ಸ್ಪೆಕ್ಟರ್ ಕಿರಣ್ ಸಾಮ್ರಾಟ್ ಕ್ವಾರ್ಟರ್ಸ್ನಲ್ಲಿ ವಾಸವಿದ್ದ ಪೇದೆಯೊಬ್ಬರ ಪತ್ನಿಯೊಂದಿಗೆ 5 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ. ಪೇದೆ ಕೆಲಸಕ್ಕೆಂದು ತೆರಳಿದ್ದಾಗ ಪತ್ನಿ ಇನ್ಸ್ಪೆಕ್ಟರ್ ಕಿರಣ್ ಮನೆಗೆ ಆಗಮಿಸುತ್ತಿದ್ದಳು.
ಎಂದಿನಂತೆ ಗುರುವಾರ ರಾತ್ರಿ ಆಗಮಿಸಿದ ಮಹಿಳೆ ಕಿರಣ್ನೊಂದಿಗೆ ಮದ್ಯ ಸೇವಿಸಿದ್ದು ಜಗಳ ಆರಂಭವಾಗಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಕ್ವಾರ್ಟರ್ಸ್ಗೆ ಬೆಂಕಿ ಹಚ್ಚುವ ಮಟ್ಟಕ್ಕೆ ತಲುಪಿದೆ. ಬೆಂಕಿಗೆ ಕ್ವಾರ್ಟರ್ಸ್ನಲ್ಲಿದ್ದ ಪೀಠೊಪಕರಣಗಳು ಭಸ್ಮವಾಗಿದೆ.
ಸುತ್ತಲಿದ್ದ ಪೊಲೀಸ್ ಸಿಬಂದಿಗಳು ಬೆಂಕಿ ನಂದಿಸಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಿರಣ್ಗೂ ವಿವಾಹವಾಗಿದ್ದು ಘಟನೆ ನಡೆದ ವೇಳೆ ಪತ್ನಿ ಮನೆಯಲ್ಲಿ ಇರಲಿಲ್ಲ .
ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಕುಡಿದ ಮತ್ತಿನಲ್ಲಿದ್ದ ಮಹಿಳೆ ನನ್ನ ಇಷ್ಟ ನಾನು ಏನು ಬೇಕಾದರೂ ಮಾಡುತ್ತೇನೆ ನೀವ್ಯಾರ್ರೀ.. ಕೇಳ್ಳೋದಕ್ಕೆ ಎಂದು ಆವಾಜ್ ಹಾಕಿದ್ದಾಳೆ.
ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಕಿರಣ್ ಸಾಮ್ರಾಟ್ ನನ್ನು ಅಮಾನತು ಮಾಡಿ ವಶಕ್ಕೆ ಪಡೆದಿದ್ದಾರೆ. ಪೇದೆ ಪತ್ನಿಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸರ್ಕಾರಿ ಸೊತ್ತು ಹಾನಿ ಮಾಡಿದ ಪ್ರಕರಣ ದಲ್ಲಿ ಇಬ್ಬರ ವಿರುದ್ಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.