Republic Day; ಮತ್ತೆ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ:ಸಿಎಂ ಸಿದ್ದರಾಮಯ್ಯ ಆಕ್ರೋಶ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರ ಬಿಜೆಪಿಗೆ ನುಂಗಲಾರದ ತುತ್ತಾಗಿದೆ...

Team Udayavani, Jan 9, 2024, 8:36 PM IST

siddanna-2

ಬೆಂಗಳೂರು: ಗಣರಾಜ್ಯೋತ್ಸವದ ಸ್ತಬ್ಧಚಿತ್ರ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಈ ಬಾರಿಯೂ ರಾಜ್ಯವನ್ನು ಕಡೆಗಣಿಸಿ,ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಂಗಳವಾರ ಆಕ್ರೋಶ ಹೊರ ಹಾಕಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ” ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು, ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರೆಸಿದೆ ಎಂದು ಪೋಸ್ಟ್ ಮಾಡಿದ್ದಾರೆ.

ನವಕರ್ನಾಟಕದ ಅಭಿವೃದ್ಧಿಯ ದೃಷ್ಠಾರ, ಸಾಮಾಜಿಕ ನ್ಯಾಯದ ಹರಿಕಾರ, ನೀರಾವರಿ, ಬ್ಯಾಂಕಿಂಗ್‌, ಮೂಲಸೌಕರ್ಯದ ಕ್ಷೇತ್ರಗಳ ಅಭಿವೃದ್ದಿಯ ಮೂಲಕ ಮೈಸೂರನ್ನು ಒಂದು ಮಾದರಿ ರಾಜ್ಯವಾಗಿ ಕಟ್ಟಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸ್ತಬ್ಧಚಿತ್ರ, ನೆಲದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗಗೈದ ಅಪ್ರತಿಮ ದೇಶಪ್ರೇಮಿ ರಾಣಿ ಚೆನ್ನಮ್ಮ ಅವರ ಸ್ತಬ್ಧಚಿತ್ರ, ಕರುನಾಡಿನ ಪ್ರಾಕೃತಿಕ ಸೌಂದರ್ಯ ಮತ್ತು ಬ್ರಾಂಡ್ ಬೆಂಗಳೂರು ಹೀಗೆ 4 ಸ್ತಬ್ಧಚಿತ್ರ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು ನಮ್ಮ ಮನವಿಯನ್ನು ತಿರಸ್ಕರಿಸಿ, ನಾಡಿನ ಅಸೀಮ ಸಾಧನೆ ಮತ್ತು ಮಾದರಿ ಸಾಧಕರನ್ನು ದೇಶಕ್ಕೆ ಪರಿಚಯಿಸುವ ಅವಕಾಶವನ್ನು ಕಸಿದುಕೊಂಡಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ತೆರಿಗೆ ಪಾಲಿನಲ್ಲಿ ವಂಚನೆ, ಬರಪರಿಹಾರದಲ್ಲಿ ಅನ್ಯಾಯ, ಕನ್ನಡಿಗರು ಕಟ್ಟಿರುವ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳ ಮಾರಾಟ ಹೀಗೆ ಹೆಜ್ಜೆಹೆಜ್ಜೆಗೂ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಪ್ರಹಾರ ಮಾಡುತ್ತಿದೆ. ಇದರ ಜೊತೆಗೆ ಈಗ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಅವಕಾಶ ನಿರಾಕರಿಸಿ ನಮ್ಮ ಅಸ್ಮಿತೆಯ ಮೇಲೆ ದಾಳಿಗೆ ಇಳಿದಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡ-ಕನ್ನಡಿಗ ಮತ್ತು ಕರ್ನಾಟಕಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದಿಂದ ಕನ್ನಡಿಗರು ಈಗಾಗಲೇ ರೋಸಿಹೋಗಿದ್ದಾರೆ. ಅವರ ತಾಳ್ಮೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಹೋಗಬಾರದು.ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರ್ಕಾರ ತಕ್ಷಣ ತನ್ನ ತಪ್ಪನ್ನು ತಿದ್ದಿಕೊಂಡು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡು ದೇಶದ ಹೆಮ್ಮೆಯ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಕಿಡಿ ಕಾರಿದ್ದಾರೆ.

ಟಾಪ್ ನ್ಯೂಸ್

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Heavy rain in Amboli; Five feet water rise in Hidkal reservoir in one day

Belagavi: ಅಂಬೋಲಿ ಭಾಗದಲ್ಲಿ ಭಾರಿ ಮಳೆ; ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಐದಡಿ ನೀರು ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

Jammu Kashmir:ಅಮರನಾಥ್‌ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

9-crime

Bengaluru: ಬೈಕ್‌ಗೆ ಲಾರಿ ಡಿಕ್ಕಿ : ರಿಯಲ್‌ ಎಸ್ಟೇಟ್‌ ಏಜೆಂಟ್‌ ಸಾವು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.