ಮಾನಸಿಕ ಕಾಯಿಲೆಗೂ ಸಿಗಲಿದೆ ವಿಮೆ
Team Udayavani, Aug 29, 2018, 6:00 AM IST
ಹುಬ್ಬಳ್ಳಿ: ಎಷ್ಟೇ ಹಣ ವ್ಯಯ ಮಾಡಿ ಆರೋಗ್ಯ ವಿಮೆ ಮಾಡಿದರೂ ಮಾನಸಿಕ ಕಾಯಿಲೆ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲಾಗದು ಎಂದು ಹೇಳುತ್ತಿದ್ದ ವಿಮಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ಇನ್ಮುಂದೆ ವಿವಿಧ ಕಾಯಿಲೆಗಳಿಗೆ ನೀಡುವಂತೆ ಮಾನಸಿಕ ಕಾಯಿಲೆ ಚಿಕಿತ್ಸೆಗೂ ವಿಮಾ ವೆಚ್ಚ ಭರಿಸಲೇಬೇಕು ಎಂದು ಸೂಚಿಸಿದ್ದು, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆದೇಶ ಜಾರಿಗೊಳಿಸಿದೆ.
ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೆಂಟಲ್ ಹೆಲ್ತ್ ಅಕ್ಟ್-2017 ಮಸೂದೆ ಅನುಮೋದನೆಯಾಗಿದ್ದು, ಮೇ 29, 2018 ಸೆಕ್ಷನ್ 21(4) ಕಾಯ್ದೆ ಅನ್ವಯ ತುರ್ತು ಅದೇಶ ಹೊರಡಿಸುವಂತೆ ಕೇಂದ್ರ ಸರ್ಕಾರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಈ ಕುರಿತು ಆದೇಶ ಹೊರಡಿಸಲಾಗಿದ್ದು, ಮಾನಸಿಕ ಆರೋಗ್ಯ ಚಿಕಿತ್ಸೆಗೂ ವಿಮಾ ಸೌಲಭ್ಯ ನೀಡುವಂತೆ ಸೂಚಿಸಿದೆ. ಮೇ 29ರಿಂದಲೇ ಈ ಆದೇಶ ಜಾರಿಯಾಗುವಂತೆ ತಾಕೀತು ಮಾಡಲಾಗಿದೆ. ಸಾಮಾನ್ಯವಾಗಿ ಭಾರತದಲ್ಲಿರುವ ಪ್ರತಿಷ್ಠಿತ ವಿಮಾ ಕಂಪನಿಗಳು ಇಷ್ಟು ದಿನ ತಮ್ಮ ಷರತ್ತುಗಳಲ್ಲಿ ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಯಾವುದೇ ವೆಚ್ಚ ಭರಿಸಲಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದವು.
ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿತ್ತು. ಆರೋಗ್ಯ ವಿಮೆ ಪಡೆಯುವಾಗ ಈ ಕುರಿತು ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಗ್ರಾಹಕರು, ಸಮಸ್ಯೆ ಎದುರಾದಾಗ ಪರಿತಪಿಸುವಂತಾಗಿತ್ತು. ಅಪಘಾತ ಸಂಭವಿಸಿದಾಗ ರೋಗಿಗಳು ತಾತ್ಕಾಲಿಕ, ಕೆಲವೊಮ್ಮೆ ಶಾಶ್ವತ ಮಾನಸಿಕ ಆಘಾತಕ್ಕೊಳಗಾಗುತ್ತಾರೆ. ಅಂತಹ ಸಂದರ್ಭ ದಲ್ಲಿ ರೋಗಿಯನ್ನು ಮನೋರೋಗ ತಜ್ಞರ ಬಳಿ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗುತ್ತದೆ. ಇಂಥ ಸಂದರ್ಭದಲ್ಲಿ ವಿಮಾ ಕಂಪನಿಗಳು ಸಹಾಯಕ್ಕೆ ಬರುತ್ತಿರಲಿಲ್ಲ. ಸಾಮಾನ್ಯ ಆರೋಗ್ಯ ವಿಮೆ ಮಾತ್ರ ಭರಿಸುವುದಾಗಿ ಹೇಳುತ್ತಿದ್ದವು. ಮನೋರೋಗ ತಜ್ಞರ ಬಳಿ ತಗಲುವ ವೆಚ್ಚ ಸಾಮಾನ್ಯವಾಗಿ ಸ್ವಲ್ಪ ಹೆಚ್ಚೇ ಇರುವುದರಿಂದ ಗ್ರಾಹಕರು ಮತ್ತಷ್ಟು ತಲೆಕೆಡಿಸಿಕೊಳ್ಳುತ್ತಿದ್ದರು.
ಹೀಗಾಗಿ ಕೇಂದ್ರ ಸರ್ಕಾರ ದೇಶದ ಎಲ್ಲ ಆರೋಗ್ಯ ವಿಮೆ ಕಂಪನಿಗಳಿಗೆ ನೂತನ ಕಾಯ್ದೆ ಮೂಲಕ ಮಾನಸಿಕ ಕಾಯಿಲೆ ಚಿಕಿತ್ಸೆಗೂ ಅನ್ವಯಿಸುವಂತೆ ಸೂಚಿಸಿದೆ.
ರೋಗಿಯ ಸ್ಥಿತಿ ಮೇಲೆ ಚಿಕಿತ್ಸಾ ವಿಧಾನವೂ ನಿರ್ಧಾರವಾಗಲಿದ್ದು, ಸಣ್ಣ ಪುಟ್ಟ ಸಮಸ್ಯೆ ಇದ್ದಲ್ಲಿ ಒಪಿಡಿಯಲ್ಲಿ ವೈದ್ಯರು ಪರೀಕ್ಷಿಸಿ ಮಾತ್ರೆಗಳನ್ನು ಬರೆದುಕೊಡುತ್ತಾರೆ. ಇನ್ನೂ ಕೆಲವು ಸಲ ಕನಿಷ್ಠ ವಾರದಿಂದ ಒಂದು ತಿಂಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ. ಕೆಲವು ಬಾರಿ ರೋಗಿಗೆ ಶಾಕ್ ಟ್ರಿಟ್ ಮೆಂಟ್ ನೀಡಬೇಕಾಗುತ್ತದೆ. ವಾರದಲ್ಲಿ ಕನಿಷ್ಠ ಮೂರು ಬಾರಿ ಈ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ 2 ಸಾವಿರದಿಂದ 5 ಸಾವಿರ ಬಿಲ್ ಮಾಡಬಹುದು. ಮಾನಸಿಕ ಕಾಯಿಲೆ ಗುಣಪಡಿಸುವ ಅವಧಿ ದೀರ್ಘವಾಗಿರುವ ಕಾರಣ ರೋಗಿಗೆ ತಗಲುವ ವೆಚ್ಚ ಅಧಿಕವಿರುತ್ತದೆ.
● ಡಾ. ಶಿವಕುಮಾರ ಹಿರೇಮಠ, ಮನೋರೋಗ ತಜ್ಞ
● ಸೋಮಶೇಖರ ಹತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.