ಬೌದ್ಧಿಕವಾಗಿ ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ : ನಳೀನ್ ಕುಮಾರ್ ಕಟೀಲ್
Team Udayavani, Aug 25, 2021, 5:35 PM IST
ಮಂಡ್ಯ: ಕಾಂಗ್ರೆಸ್ ಬಳಿ ಯಾವುದೇ ವಿಷಯಗಳಿಲ್ಲ. ಬೌದ್ಧಿಕವಾಗಿ ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಲೋಕಸಭೆ ನಿಲ್ಲಿಸುವ ಷಡ್ಯಂತ್ರ ಕಾಂಗ್ರೆಸ್‌ನವರದ್ದು ಹಾಗೂ ವಿರೋಧ ಪಕ್ಷವಾಗಿ ಜವಾಬ್ದಾರಿಯುತ ನೆಲೆ ತೋರಲಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಗೋವಾ : ಕಾಂಗ್ರೇಸ್ ನ ಚುನಾವಣಾ ನಿರೀಕ್ಷಕ ಪಿ.ಚಿದಂಬರಂ ಆಗಮನ
ಚೀನಾ, ಪಾಕಿಸ್ತಾನಕ್ಕೆ ಕಾಂಗ್ರೆಸ್ ಬೆಂಬಲ
ಚೀನಾ, ಪಾಕಿಸ್ತಾನಕ್ಕೆ ಬೆಂಬಲ ಕೊಡುವಂತದ್ದನ್ನ ಕಾಂಗ್ರೆಸ್ ನವರು ಮಾಡುತ್ತಾರೆ. ಕಾಶ್ಮೀರ ಪ್ರತ್ಯೇಕ ಎಂಬ ಹೇಳಿಕೆಯನ್ನು ಪಂಜಾಬ್ ಕಾಂಗ್ರೆಸ್ ನ ಪ್ರಮುಖರು ನೀಡಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿದೆ. ಹೀಗಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಗಳ ಪ್ರಾರಂಭವಾಗಿದೆ. ಮುಂದೆ ಯಾರು ಸಿಎಂ ಎನ್ನುವ ವಿಚಾರದಲ್ಲಿ ಜಗಳವಾಡುತ್ತಾ, ರಾಜ್ಯದ ಪದಾಧಿಕಾರಿಗಳ ಆಯ್ಕೆಯನ್ನೇ ಕಾಂಗ್ರೆಸ್ ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮೇಯರ್ ಸ್ಥಾನ ಲಭಿಸಿದ್ದಕ್ಕೆ ಅಭಿನಂದನೆ
ಮೊದಲ ಬಾರಿಗೆ ಬಿಜೆಪಿಗೆ ಮೈಸೂರು ಮೇಯರ್ ಸ್ಥಾನ ಸಿಕ್ಕಿದ್ದಕ್ಕೆ ಅಭಿನಂದನೆ ತಿಳಿಸುತ್ತೇನೆ. ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಬಿಜೆಪಿಗೆ ವೇಗ ಸಿಗಬೇಕು ಎಂಬುದಿತ್ತು. ಅದರ ಮೊಲದ ಪ್ರಯತ್ನದಲ್ಲೇ ಮೈಸೂರು ಮೇಯರ್ ಸ್ಥಾನ ಗೆದ್ದಿದ್ದೇವೆ ಎಂದಿದ್ದಾರೆ.
ಮಂಡ್ಯದಲ್ಲಿ ಬಿಜೆಪಿಗೆ ನೆಲೆ
ಮಂಡ್ಯದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ಯಶಸ್ವಿಯಾಗಿ ನಡೆದಿದೆ. ಬಿಜೆಪಿ ಪರವಾದ ವಾತಾವರಣ ಮಂಡ್ಯದಲ್ಲಿದೆ. ಎಲ್ಲ ನಾಯಕರ ಜತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪಕ್ಷದ ಸಂಘಟನೆಗೂ ಒತ್ತು ನೀಡಲಾಗಿದೆ. ಇದರಿಂದ ಮುಂದಿನ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರಿಯ ಮಾರ್ಗದರ್ಶನಕ್ಕೆ ಸಿಎಂ ದೆಹಲಿಗೆ
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಬೇರೆ ಕಾರಣಗಳಿಗೆ ಸಿಎಂ ದೆಹಲಿಗೆ ಹೋಗಿದ್ದಾರೆ. ಮಾತುಕತೆ ನಡೆಸಿ ಹಿರಿಯ ಮಾರ್ಗದರ್ಶನದಂತೆ ನಡೆಯಲಿದ್ದಾರೆ ಎಂದಿದ್ದಾರೆ.
ಯತ್ನಾಳ್ ಗೆ ಎಚ್ಚರಿಕೆ
ಸರ್ಕಾರ ವಿರುದ್ಧ ಮತ್ತೆ ಯತ್ನಾಳ್ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ್ ಅವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ರಾಷ್ಟಿçÃಯ ಶಿಸ್ತು ಸಮಿತಿ ಎಲ್ಲವನ್ನು ಗಮನಿಸುತ್ತಿದೆ ಎಂದು ಹೇಳಿದ್ದಾರೆ.
ಕೋವಿಡ್ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲಿ
ಬಿಜೆಪಿ ಸಭೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಎಲ್ಲರಿಗೂ ಒಂದೇ ಲೆಕ್ಕ, ತಪ್ಪಿದರೇ ಕ್ರಮ ಕೈಗೊಳ್ಳಲಿ ಎಂದ ಅವರು, ಬಿಬಿಎಂಪಿ ಸ್ವೆಟರ್ ಹಗರಣದಲ್ಲಿ ನಟ ಜಗ್ಗೇಶ್ ಸಹೋದರ ನಟ ಕೋಮಲ್ ಹೆಸರು ಕೇಳಿ ಬಂದ ವಿಚಾರಕ್ಕೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದರ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ : ಇಂಡಿಯನ್ ಐಡಲ್ 12: ಪ್ರಶಸ್ತಿ ವಿಜೇತ ಪವನ್ ದೀಪ್ ಉತ್ತರಾಖಂಡ್ ನ ಬ್ರ್ಯಾಂಡ್ ಅಂಬಾಸಿಡರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.