ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
Team Udayavani, Aug 4, 2019, 3:00 AM IST
ಬೆಂಗಳೂರು: ರಾಜ್ಯ ಸರ್ಕಾರ ಬಯೋಟೆಕ್ನಾಲಜಿ ಸ್ಕಿಲ್ ಎನ್ಹಾನ್ಸ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಒಂದು ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 10 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸಲು ಆ.8 ಕೊನೆಯ ದಿನವಾಗಿದೆ.
ಭಾರತೀಯ ಕೈಗಾರಿಕಾ ವಲಯದ ಸಂಪನ್ಮೂಲ ವ್ಯಕ್ತಿಗಳಿಗೆ ಉದ್ಯೋಗ ಮಾರುಕಟ್ಟೆ ಸೃಷ್ಟಿಸಲು ಬಯೋಟೆಕ್ನಾಲಜಿ ಸ್ಕೂಲ್ ಮೂಲಕ ಸರ್ಕಾರ ಹೊಸ ಕೋರ್ಸ್‌ಗಳನ್ನು ಆರಂಭಿಸಿದೆ. ಕಳೆದ 2 ವರ್ಷಗಳಿಂದ ಪದವಿ/ಸ್ನಾತಕೋತ್ತರ ಪದವಿಯ ಜೀವವಿಜ್ಞಾನ ವಿದ್ಯಾರ್ಥಿಗಳಿಗೆ 9 ಕೇಂದ್ರಗಳ ಮೂಲಕ ಬಯೋಟೆಕ್ನಾಲಜಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ರೂಪಿಸಿದೆ.
ಆರೋಗ್ಯ, ಕೃಷಿ, ವೈದ್ಯಕೀಯ, ಸಾವಯವ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಕ್ಕಾಗಿ ಸೂಕ್ತ ತರಬೇತಿಯನ್ನೂ ನೀಡುತ್ತಿದೆ. ಅಲ್ಲದೆ, ಆಸಕ್ತರ ಅಭಿರುಚಿಗೆ ತಕ್ಕಂತೆ ಆರ್ ಅಂಡ್ ಡಿ, ಉತ್ಪಾದನೆ, ವ್ಯಾಪಾರ ಅಭಿವೃದ್ಧಿ, ಗುಣಮಟ್ಟದ ನಿಯಂತ್ರಣ, ವೈದ್ಯಕೀಯ ಬರವಣಿಗೆ, ಆಸ್ಪತ್ರೆಯ ದತ್ತಾಂಶ ನಿರ್ವಹಣೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ವಿಪುಲ ಅವಕಾಶಗಳು ಇದರಿಂದ ದೊರಕಲಿವೆ.
ಕರ್ನಾಟಕ ಸರ್ಕಾರದ ಆರ್ ಆ್ಯಂಡ್ ಡಿ ವಿಭಾಗ, ದೆಹಲಿಯ ಬಯೋಟೆಕ್ನಾಲಜಿ ವಿಭಾಗ ಮತ್ತು ಜೀವವಿಜ್ಞಾನ ಕೌಶಲ್ಯಾಭಿವೃದ್ಧಿ ಕೌನ್ಸಿಲ್ , ಬೆಂಗಳೂರಿನ ಅಸೋಸಿಯೆಷನ್ ಆಫ್ ಬಯೋಟೆಕ್ ಎಂಟರ್‌ಪ್ರೈಸಸ್ ವಿಭಾಗಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9448470039 ಹಾಗೂ ವೆಬ್: http://www.bisep.karnataka.gov.in/ ಸಂಪರ್ಕಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.