ಪಿಎಸ್ಐ ಹಗರಣದ ಹಿಂದೆ ಇದ್ದಾರೆಯೇ ಪ್ರಭಾವಿ ಸಚಿವ? ಏನಿದು 80 ಲಕ್ಷದ ವಿಚಾರ?
Team Udayavani, May 2, 2022, 11:58 AM IST
ಬೆಂಗಳೂರು: ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣದ ಹಿಂದೆ ಬಿಜೆಪಿಯ ಪ್ರಭಾವಿ ಸಚಿವರ ಪಾತ್ರವೂ ಇದೆ ಎಂಬ ಮಾತು ಕೇಳಿ ಬರುತ್ತಿದ್ದು, ಚುನಾವಣಾ ವರ್ಷದಲ್ಲಿ ಸರಕಾರಕ್ಕೆ ಭಾರಿ ಇರಿಸುಮುರಿಸು ಉಂಟಾಗಿದೆ.
ಈಗಾಗಲೇ ಸಿಐಡಿ ಪೊಲೀಸರ ವಶದಲ್ಲಿ ಇರುವ ದರ್ಶನ ಗೌಡ ಎಂಬಾತ ನೀಡಿರುವ ಹೇಳಿಕೆಯಲ್ಲಿ ಬಿಜೆಪಿಯ ಪ್ರಭಾವಿ ಸಚಿವರ ಸೋದರನ ಹೆಸರು ಪ್ರಸ್ತಾಪವಾಗಿದೆ.
ಸಚಿವರ ಸೋದರನಿಗೆ ದರ್ಶನ್ ಗೌಡ 80 ಲಕ್ಷ ರೂ. ನೀಡಿದ್ದೇನೆ ಎಂದು ಹೇಳಿಕೆ ನೀಡಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ತನಿಖೆ ವಿಸ್ತರಿಸಿದರೆ ಮತ್ತಷ್ಟು ಅಕ್ರಮ ಬಯಲು: ಪ್ರಿಯಾಂಕ್
ಈ ಮಧ್ಯೆ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಇದುವರಗೆ ಸಣ್ಣ ಪುಟ್ಟವರನ್ನು ಮಾತ್ರ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.