ಜನರಿಗೆ ಅನ್ನ ನೀಡದ ಬಿಜೆಪಿಯಿಂದ ವಿಶ್ವಗುರು ಮಾಡಲು ಸಾಧ್ಯವೇ?; ಸಿದ್ದರಾಮಯ್ಯ
Team Udayavani, Oct 27, 2022, 2:38 PM IST
ಬೆಂಗಳೂರು: ಜನರ ಹೊಟ್ಟೆಗೆ ಸಮರ್ಪಕವಾದ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜಗತ್ತಿನ ಜನರ ಮುಂದೆ ಹಸಿವು, ಸ್ವಾತಂತ್ರ್ಯ, ಮಹಿಳೆಯರ ದುಡಿಮೆ ಮುಂತಾದ ವಿಷಯಗಳಲ್ಲಿ ಭಾರತದ ಮರ್ಯಾದೆ ಹರಾಜಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಮೋದಿಯವರನ್ನು ಟೀಕಿಸಿದವರ ವಿರುದ್ಧ ಪ್ರತಿಭಟಿಸಿ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪನವರಿಗೆ ಮತ್ತು ಬಿಜೆಪಿಯವರಿಗೆ ನಾನು 32 ಪ್ರಶ್ನೆಗಳನ್ನು ಕೇಳಿದ್ದೆ. ಇದುವರೆಗೆ ಬಿಜೆಪಿಯವರಿಗೆ ಮತ್ತು ಯಡಿಯೂರಪ್ಪನವರಿಗೆ ಒಂದೇ ಒಂದು ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.
ಇದರ ಮಧ್ಯೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 121 ದೇಶಗಳ ಪೈಕಿ 107 ನೇ ಸ್ಥಾನಕ್ಕೆ ಕುಸಿದಿದೆಯೆಂಬ ವರದಿ ಬಿಡುಗಡೆಯಾಯಿತು. ಬಿಜೆಪಿಯವರು ಯಥಾಪ್ರಕಾರ ಈ ವರದಿಯೆ ಸರಿ ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ದಾಖಲೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಎಂಬ ಸಾಕ್ಷ್ಯಗಳನ್ನು ಸಮೀಕ್ಷೆ ಮಾಡಿದವರು ತೋರಿಸಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರಲ್ಲಿನ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆಯೆಂದು ತಿಳಿಸಿದ ಮೇಲೆ ಬಿಜೆಪಿಯವರು ಆಕ್ಷೇಪಗಳನ್ನು ನಿಲ್ಲಿಸಿದ್ದಾರೆ ಎಂದರು.
ಇದನ್ನೂ ಓದಿ:ಘಟಾನುಘಟಿ ನಾಯಕರನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ಮುಗಿಸಿದರು: ಶ್ರೀರಾಮುಲು
2017 ರಲ್ಲಿ 100 ನೇ ಸ್ಥಾನದಲ್ಲಿದ್ದ ಭಾರತ 2018 ರಲ್ಲಿ 103 ನೇ ಸ್ಥಾನಕ್ಕೆ ಕುಸಿಯಿತು. ಈಗ 121 ದೇಶಗಳ ಪೈಕಿ 107 ನೇ ಸ್ಥಾನ. ನಮ್ಮ ನಂತರ ಕೇವಲ 15 ದೇಶಗಳಿವೆ. ದುರದೃಷ್ಟವೆಂದರೆ ನಮಗಿಂತ ಮೇಲೆ ಇಥಿಯೋಪಿಯ, ಕೀನ್ಯಾ, ಸುಡಾನ್ ಮುಂತಾದ ದೇಶಗಳಿವೆ. ನಮ್ಮ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ 99 ನೇ ಸ್ಥಾನ, ಬಾಂಗ್ಲಾದೇಶ 84 ನೇ ಸ್ಥಾನ, ನೇಪಾಳ 81 ನೇ ಸ್ಥಾನ, ನಮ್ಮದು 107 ನೇ ಸ್ಥಾನ. ಇದು ದೇಶಕ್ಕೆ ಹೆಮ್ಮೆ ತರುವ ಸಂಗತಿಯೆ? ತನ್ನ ಜನರ ಹೊಟ್ಟೆಗೆ ಸಮರ್ಪಕವಾಗಿ ಅನ್ನ ಸಿಗುವಂತೆ ನೋಡಿಕೊಳ್ಳದ ದೇಶ ವಿಶ್ವಗುರುವಾಗಲು ಸಾಧ್ಯವೆ? ಹಸಿವಿನ ಸೂಚ್ಯಂಕವನ್ನು ಜನರ ಅಪೌಷ್ಟಿಕತೆ, ಶಿಶುಮರಣ, ಮಕ್ಕಳ ವಯಸ್ಸಿಗನುಗುಣವಾಗಿ ಎತ್ತರ ಮತ್ತು ತೂಕಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ವರದಿಯನ್ನು ಸಿದ್ಧಪಡಿಸಲಾಗುತ್ತದೆ.
ಪರಿಸ್ಥಿತಿ ಹೀಗಿದ್ದರೂ ಬಿಜೆಪಿಯು ಅತ್ಯಂತ ಕ್ಷುಲ್ಲಕವಾದ ಆಹಾರದ ರಾಜಕಾರಣವನ್ನು ಮಾಡುತ್ತಿದೆ. ಮಾಂಸಾಹಾರದ ಮೇಲೆ ದಾಳಿ ನಡೆಸುತ್ತಿದೆ. ಮನುಷ್ಯರಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಪ್ರೋಟೀನುಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ತೊಗರಿಬೇಳೆ ನೀಡುತ್ತಿದ್ದೆವು. ಬೇಳೆ ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿ 3 ವರ್ಷಗಳಾದವು.ಮನಮೋಹನಸಿಂಗರ ನೇತೃತ್ವದ ಸರ್ಕಾರ ಆಹಾರ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಅದನ್ನು ಕಡ್ಡಾಯವಾದ ಹಕ್ಕನ್ನಾಗಿಸಿತು. ಜನರಿಗೆ ಸಮರ್ಪಕವಾದ ಅನ್ನ ನೀಡಬೇಕಾದುದು ಸರ್ಕಾರದ ಜವಾಬ್ಧಾರಿ. ಆದರೆ ಬಡಜನರನ್ನು ಹಸಿವು ಮುಂತಾದ ಸಂಕಷ್ಟಗಳಿಂದ ಮೇಲೆತ್ತಲು ನೀಡುತ್ತಿರುವ ಸಬ್ಸಿಡಿಗಳನ್ನೆ ರದ್ದು ಮಾಡಬೇಕೆಂದು ಬಿಜೆಪಿ ಪ್ರತಿಪಾದಿಸುತ್ತಿದೆ ಎಂದರು.
ಜಾಗತಿಕ ಸಂಸ್ಥೆಗಳು ನಿರಂತರವಾಗಿ ಬಿಡುಗಡೆ ಮಾಡುತ್ತಿರುವ ಅಧ್ಯಯನ ವರದಿಗಳು ಮತ್ತು ಅಂಕಿಅಂಶಗಳನ್ನು ತಳ್ಳಿ ಹಾಕಲೆತ್ನಿಸುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯು ಯೋಜನಾ ಆಯೋಗವನ್ನೆ ಬರ್ಖಾಸ್ತು ಮಾಡಿದೆ. ಕೇಂದ್ರ ಸರ್ಕಾರವು ನಿಗದಿತವಾಗಿ ನಡೆಸುವ ಅಧ್ಯಯನಗಳನ್ನೇ ನಿಲ್ಲಿಸಿಬಿಟ್ಟಿದೆ. ಮುಖ್ಯವಾಗಿ ಸಿಎಜಿ ಆಡಿಟ್ಟುಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ರಾಷ್ಟ್ರೀಯ ಅಂಕಿ ಅಂಶಗಳ ಇಲಾಖೆಯು ನಡೆಸುವ ಸರ್ವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.