ಏಕಕಾಲದಲ್ಲಿ  ಎಸ್ಸೆಸ್ಸೆಲ್ಸಿ- ಪಿಯು ಪರೀಕ್ಷೆ?


Team Udayavani, Jul 17, 2017, 2:00 AM IST

EXAM.jpg

ಬೆಂಗಳೂರು: ಪರೀಕ್ಷಾ ಅಕ್ರಮ ತಡೆಯಲು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯನ್ನು ಏಕಕಾಲದಲ್ಲೇ ನಡೆಸಲು ಚಿಂತನೆ ನಡೆಸುತ್ತಿದೆ.
ಪರೀಕ್ಷೆ ಪೂರ್ವ ಹಾಗೂ ಪರೀಕ್ಷೆ ವೇಳೆ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಎಸ್ಸೆಸ್ಸೆಲ್ಸಿ ಮತ್ತು ಪಿಯು ವಾರ್ಷಿಕ ಪರೀಕ್ಷೆಗಳನ್ನು ಏಕಕಾಲದಲ್ಲಿ ನಡೆಸಬೇಕೆಂಬ ವಾದವಿದೆ. ಈಗ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ವಾದವನ್ನು ಈಗ ಮುನ್ನೆಲೆಗೆ ತಂದಿದ್ದು, ಇಲಾಖೆ ಸಚಿವ ತನ್ವಿರ್ ಸೇಠ್ ಇದಕ್ಕೆ ಬೆಂಬಲ
ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಏಕಕಾಲದಲ್ಲೇ ಪರೀಕ್ಷೆ ನಡೆಸುವ ಸಂಬಂಧ ಅಧಿಕಾರಿಗಳ ಮಟ್ಟದ ಒಂದು ಹಂತದ ಚರ್ಚೆ ಪೂರ್ಣಗೊಂಡಿದೆ. ಆಗಸ್ಟ್‌ ಎರಡನೇ ವಾರದಲ್ಲಿ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. 2017 -18ನೇ ಸಾಲಿನ ಶೈಕ್ಷಣಿಕ ವರ್ಷ
ಇತ್ತೀಚೆಗಷ್ಟೆ ಆರಂಭವಾಗಿದ್ದು, 2018ರ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ವಾರ್ಷಿಕ ಪರೀಕ್ಷೆ ನಡೆಯಲಿವೆ. ಪಿಯು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಪರೀಕ್ಷೆ ನಡೆಸಲು ಸರ್ಕಾರ ಒಪ್ಪಿದರೆ ಪರೀಕ್ಷೆ ಹಾಲ್‌ನ ಒಂದೊಂದು ಡೆಸ್ಕ್ನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುನ ತಲಾ ಒಬ್ಬೊಬ್ಬ ವಿದ್ಯಾರ್ಥಿಯನ್ನು ಕೂರಿಸಲಾಗುತ್ತದೆ. ಸಮಯದ ಉಳಿತಾಯದ ಜತೆಗೆ ಸಾಮೂಹಿಕ ನಕಲು ತಡೆಯಲು ಸಾಧ್ಯವಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿವರ್ಷವೂ ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ನಡೆಸುವುದು ಇಲಾಖೆಗೆ ದೊಡ್ಡ ಸವಾಲಾಗಿದೆ. ಇದರ ಜತೆಗೆ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ನಕಲು ಮತ್ತು ಶಿಕ್ಷಕರಿಂದಲೇ ನಕಲಿಗೆ ಕುಮ್ಮಕ್ಕು ಇತ್ಯಾದಿ ಎಲ್ಲವೂ ಇಲಾಖೆಗೆ ತಲೆ ನೋವಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆ ಏಕಕಾಲದಲ್ಲಿ ನಡೆದರೆ ಶೇ.90ರಷ್ಟು ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಹಾಗೆಯೇ ಒಂದೇ ಸಾರಿಗೆ ವ್ಯವಸ್ಥೆ ಮೂಲಕ ಎರಡು ಪ್ರಶ್ನೆ ಪತ್ರಿಕೆಯನ್ನು ಸಾಗಿಸಬಹುದು ಎಂಬುದು ಇಲಾಖೆಯ ಯೋಜನೆಯಾಗಿದೆ.

ಶಿಕ್ಷಣ ಇಲಾಖೆ ಮುಂದಿದೆ ಸವಾಲು: ರಾಜ್ಯ ಸರ್ಕಾರ ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಲ್ಲಿ ಪರೀಕ್ಷಾ ವಿಧಾನದಲ್ಲಿ ಪಾರದರ್ಶಕತೆ ಹಾಗೂ ದೊಡ್ಡ ಬದಲಾವಣೆ ಬರಲಿದೆ. ಆದರೆ, ಇದನ್ನು ಹೇಗೆ ಅನುಷ್ಠಾನ ಮಾಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಡಿಡಿಪಿಐ, ಬಿಇಒಗಳ ಸಾಮೂಹಿಕ ವರ್ಗಾವಣೆ
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಡಿಡಿಪಿಐ) ಮತ್ತು ತತ್ಸಮಾನ ಅಧಿಕಾರಿಗಳನ್ನು
ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು(ಬಿಇಒ) ಮತ್ತು ತತ್ಸಮಾನ ವೃಂದ ಅಧಿಕಾರಿಗಳನ್ನು ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾಯಿಸಿ, ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.

ಉಪನಿರ್ದೇಶಕ ಹಾಗೂ ತತ್ಸಮಾನ ಹುದ್ದೆಯ 32 ಅಧಿಕಾರಿಗಳನ್ನು ಮತ್ತು ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ಹುದ್ದೆಯ 251 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವರ್ಗಾಯಿಸಿದ ಸ್ಥಳಕ್ಕೆ ಹಾಜರಾಗಿ, ವರ್ಗಾವಣೆ ಪತ್ರ ಸಲ್ಲಿಸಲು ಸೂಚನೆ ನೀಡಿದೆ.

ಡಿಪಿಐ ಹಾಗೂ ತತ್ಸಮಾನ ಹುದ್ದೆ: ಯಾದಗಿರಿ ಜಿಲ್ಲಾ ಡಯಟ್‌ಗೆ ಪ್ರಾಂಶುಪಾಲರಾಗಿ ವಾಲ್ಟರ್‌ ಹಿಲೆರಿ ಡಿ ಮೆಲೋ, ಪ್ರಾಥಮಿಕ ಶಿಕ್ಷಣ ಉಪನಿರ್ದೇಶಕಿಯಾಗಿ ಎಚ್‌.ಎಂ.ಪ್ರೇಮಾ, ಬೆಂ.ನಗರ ಜಿಲ್ಲಾ ಡಯಟ್‌ ಪ್ರಾಂಶುಪಾಲರಾಗಿ ಹಸನ್‌ ಮೊಹಿದ್ದೀನ್‌, ಬೆಂಗಳೂರು ಜಿಲ್ಲಾ ಆರ್‌ಎಂಎಸ್‌ಎ ಹಿರಿಯ ಕಾರ್ಯಕ್ರಮ ಅಧಿಕಾರಿಯಾಗಿ ಟಿ.ಎನ್‌.ಗಾಯತ್ರಿದೇವಿ, ಕಲಬುರಗಿ ಅಪರ ಆಯುಕ್ತರ ಕಚೇರಿ ಉಪನಿರ್ದೇಶಕರಾಗಿ ಬಿ.ಜಿ.ಮನ್ನೀಕೇರಿ, ಕೊಡಗು ಜಿಲ್ಲಾ ಡಯಟ್‌ ಪ್ರಾಂಶುಪಾಲರಾಗಿ ಶ್ರೀ ಶೈಲಶಾಂತಪ್ಪ ಬಿರಾದರ್‌, ಮಂಗಳೂರು ಟಿಇಟಿ ರೀಡರ್‌ ಆಗಿ ದಿವಾಕರ ಶೆಟ್ಟಿ, ಡಿಎಸ್‌ಆರ್‌ಟಿಇ ಉಪನಿರ್ದೇಶಕರಾಗಿ (ತರಬೇತಿ ) ಕೆಂಚೇಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕುಮಟಾ ಡಯಟ್‌ ಪ್ರಾಂಶುಪಾಲರಾಗಿ ಎಚ್‌.ಆರ್‌.ಬಸಪ್ಪ, ಧಾರವಾಡ ಡಯಟ್‌ ಪ್ರಾಂಶುಪಾಲರಾಗಿ ಎಂ.ಎಸ್‌.ಪ್ರಸನ್ನ ಕುಮಾರ್‌, ಬೆಳಗಾವಿ ಟಿಇಟಿ ರೀಡರ್‌ ಆಗಿ ಶಿವನಗೌಡ ಬಿ. ಪಾಟೀಲ್‌, ದ.ಕ. ಜಿಲ್ಲಾ ಉಪನಿರ್ದೇಶಕರಾಗಿ ವೈ. ಶಿವರಾಮಯ್ಯ, ವಿಜಯಪುರ ಜಿಲ್ಲಾ ಉಪನಿರ್ದೇಶಕರಾಗಿ ಬೊಂಗಾಲೆ ಪ್ರಹ್ಲಾದ್‌
ತುಕಾರಾಮಪ್ಪ, ಉಡುಪಿ ಜಿಲ್ಲಾ ಉಪನಿರ್ದೇಶಕರಾಗಿ ಈಶ್ವರ್‌ ಎಚ್‌.ನಾಯಕ್‌, ಯಾದಗಿರಿ ಜಿಲ್ಲಾ ಉಪನಿರ್ದೇಶಕರಾಗಿ ಬಸವರಾಜ ಸಿ. ಗವನಿಹಳ್ಳಿ, ಗದಗ ಜಿಲ್ಲಾ ಡಯಟ್‌ ಪ್ರಾಂಶುಪಾಲರಾಗಿ ಗಂಗಪ್ಪ, ಮೈಸೂರು ಜಿಲ್ಲಾ ಉಪ ನಿರ್ದೇಶಕರಾಗಿ ಡಾ.ಬಿ.ಕೆ.ಎಸ್‌.ವರ್ಧನ್‌, ಹಾವೇರಿ ಜಿಲ್ಲಾ ಉಪನಿರ್ದೇಶಕರಾಗಿ ಮಮತಾ ವೆಂಕಣ್ಣ ನಾಯಕ್‌, ಕೋಲಾರ ಜಿಲ್ಲಾ ಉಪನಿರ್ದೇಶಕರಾಗಿ ಸ್ವಾಮಿ, ಬೆಳಗಾವಿ ಟಿಇಟಿ ರೀಡರ್‌ಆಗಿ ಕೆ.ಎಚ್‌.ಚಂದ್ರಪ್ಪ ಅವರನ್ನು
ನೇಮಿಸಿ ವರ್ಗಾಯಿಸಲಾಗಿದೆ.

ಮೈಸೂರು ಟಿಇಟಿ ರೀಡರ್‌ ಆಗಿ ಎಚ್‌.ಎನ್‌.ಗೀತಾಂಬ, ರಾಮನಗರ ಜಿಲ್ಲಾ ಡಯಟ್‌ ಪ್ರಾಂಶುಪಾಲರಾಗಿ
ಎಚ್‌.ವಿ.ಕೆಂಪರಾಜು, ಕುಲಬುರಗಿ ಡಯಟ್‌ ಪ್ರಾಂಶುಪಾಲರಾಗಿ ವರ್ತುಳೆ ಶಶಿಕಾಂತ, ದಾವಣಗೆರೆ ಉಪನಿರ್ದೇಶಕರಾಗಿ ಕೆ.ಕೋದಂಡ ರಾಮ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರಾಗಿ ನಾಯಕ ರಾಜೀವ ವೆಂಕಟರಮಣ, ಧಾರವಾಡ ಅಪರ ಆಯುಕ್ತರ ಕಚೇರಿ ಉಪ ನಿರ್ದೇಶಕರಾಗಿ ಎಂ.ಎಫ್.ಕುಂದಗೋಳ್‌, ದಾವಣಗೆರೆ
ಡಯಟ್‌ ಪ್ರಾಂಶುಪಾಲರಾಗಿ ಎಚ್‌.ಕೆ.ಲಿಂಗರಾಜು, ಬೆಂಗಳೂರು ಆಯುಕ್ತರ ಕಚೇರಿ ಪ್ರೌಢಶಿಕ್ಷಣ ಉಪನಿರ್ದೇಕರಾಗಿ
ಜಿ.ಆರ್‌.ಬಸವರಾಜು, ಚಾಮರಾಜನಗರ ಜಿಲ್ಲಾ ಡಯಟ್‌ ಪ್ರಾಂಶುಪಾಲರಾಗಿ ಎ.ಶ್ಯಾಮ ಸುಂದರ್‌, ಕೊಡಗು ಜಿಲ್ಲಾ
ಉಪನಿರ್ದೇಕರಾಗಿ ಡಿ.ಎಂ.ದಾನೋಜಿ, ಕೊಪ್ಪಳ ಜಿಲ್ಲಾ ಉಪನಿರ್ದೇಶಕರಾಗಿ ಅನಿತಾ ಎನ್‌,ಯರಗೋಳ್ಕರ್‌ ಮತ್ತು
ಹಾಸನ ಜಿಲ್ಲಾ ಉಪನಿ ರ್ದೇಶಕರಾಗಿ ಎಂ.ಎಂ.ಸಿಂಧೂರ ಅವರನ್ನು ನೇಮಿಸಿ ವರ್ಗಾವಣೆ ಮಾಡಲಾಗಿದೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.