ಶೈಕ್ಷಣಿಕ ಸಾಲವಿದೆ, ಹೊಸಬರಿಗೆ ಕೆಲಸ ಸಿಗುತ್ತಾ?


Team Udayavani, Apr 16, 2020, 11:05 AM IST

ಶೈಕ್ಷಣಿಕ ಸಾಲವಿದೆ, ಹೊಸಬರಿಗೆ ಕೆಲಸ ಸಿಗುತ್ತಾ?

ಸಾಂದರ್ಭಿಕ ಚಿತ್ರ

ಹಾರ್ದಿಕ್‌ ಆರ್‌.ಎಂ., ಬೆಂಗಳೂರು

ಶೈಕ್ಷಣಿಕ ಸಾಲ ಮಾಡಿ, ಬಿ.ಇ. ಸೇರಿಕೊಂಡೆ. ಈಗ ಕೊನೆಯ ಸೆಮಿಸ್ಟರ್‌ ಜುಲೈಗೆ ಮುಗಿಯಲಿದೆ. ಕೈ ತುಂಬಾ ಸಂಬಳ ಕಂಡು, ನನ್ನ ಕಾಲಿನ ಮೇಲೆ ನಾನು ನಿಲ್ಲೋಣ ಎನ್ನುವ ದಿನಗಳಲ್ಲೇ ಈ ಕೊರೊನಾ ಸಿಡಿಲು ಬಡಿದಿದೆ. ಕಂಪನಿಗಳಲ್ಲಿ ಅನೇಕರು ಉದ್ಯೋಗ ಕಳಕೊಳ್ಳುತ್ತಿದ್ದಾರೆ. ಅಮೆರಿಕದ ಆಸರೆಯಲ್ಲಿದ್ದ ಕಂಪನಿಗಳೂ ತೀವ್ರ ಸಂಕಷ್ಟದಲ್ಲಿವೆ. ಇನ್ನು ನಮ್ಮ ಭವಿಷ್ಯದ ಕಥೆ ಏನು?

ಹೌದು. ಇಂಥ ಪ್ರಶ್ನೆಯನ್ನು ಇಂದು ಲಕ್ಷಾಂತರ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಮುಂದಿನ 6 ತಿಂಗಳಿಂದ, ವರ್ಷದವರೆಗೆ ಉದ್ಯೋಗ ಕಡಿತ ಆಗುವುದು ಸಹಜ. ಅಲ್ಲದೆ, ಹೊಸದಾಗಿ ಕೆಲಸಕ್ಕೆ ತೆಗೆದುಕೊಳ್ಳುವ ಅವಕಾಶಗಳೂ ಕಡಿಮೆ. ಸಾಮಾನ್ಯವಾಗಿ ಶೈಕ್ಷಣಿಕ ಸಾಲವನ್ನು ತೀರಿಸಲು ಕಂತು ಶುರುವಾಗುವುದು ಉದ್ಯೋಗ ಸಿಕ್ಕ ನಂತರ ಮಾತ್ರ. ಅಷ್ಟರ ಮಟ್ಟಿಗೆ ಹೆಚ್ಚಿನ ಹೊರೆ ಆಗಲಾರದು. ನಮ್ಮ ಓದಿಗೆ ತಕ್ಕ ಕೆಲಸ ಸಿಗುತ್ತಿಲ್ಲ ಎಂದು ಕೂರುವ ಬದಲು ಇಂದಿನ ದಿನಕ್ಕೆ ಯಾವ ಕೌಶಲವಿದ್ದರೆ ಒಳ್ಳೆಯದು ಎನ್ನುವುದರ ಮೌಲ್ಯಮಾಪನ ಮಾಡಿಕೊಂಡು ಕೌಶಲ್ಯ ವೃದಿಟಛಿಯ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಕೇಂದ್ರ ಸರ್ಕಾರದ ಸ್ಕಿಲ್‌ ಇಂಡಿಯಾ ಅಡಿಯಲ್ಲಿ ಕಾರ್ಪೊರೇಟ್‌ ಜಗತ್ತಿಗೆ ಒಂದೇ ಅಲ್ಲದೆ ಸ್ವತಃ ವ್ಯಾಪಾರ ಇತ್ಯಾದಿಗಳನ್ನು ಆರಂಭಿಸಲು ಅಗತ್ಯವಾಗಿ ಬೇಕಾದ ತರಬೇತಿಯನ್ನೂ ನೀಡುತ್ತಾರೆ . ಈ ನಿಟ್ಟಿನಲ್ಲಿ ಆಗಲೇ ಬಹಳಷ್ಟು ಸಂಸ್ಥೆಗಳು ಸ್ಕಿಲ್‌ ಇಂಡಿಯಾದಿಂದ ಮಾನ್ಯತೆ ಪಡೆದು ಈ ರೀತಿಯ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿವೆ. ಇಲ್ಲಿ ಕಲಿಕೆಯ ಜೊತೆಗೆ ಒಂದಷ್ಟು ಹಣವನ್ನೂ ವಿದ್ಯಾರ್ಥಿ ವೇತನದ ರೂಪದಲ್ಲಿ ಕೊಡುತ್ತಾರೆ. ಒಳ್ಳೆಯ ದಿನಗಳು ಬರುವವರೆಗೆ ಕಾಯುವುದರ ಬದಲು ಕೌಶಲ್ಯ ವೃದ್ಧಿಯತ್ತ ಗಮನ ಹರಿಸುವುದು ಒಳ್ಳೆಯದು.
● ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ತಜ್ಞ

ಜ್ಯೋತಿ ನಾರಾಯಣ್‌, ಮೈಸೂರು
ನನಗೆ 1 ವರ್ಷದ ಪುಟ್ಟ ಮಗಳು ಇದ್ದಾಳೆ. ಸಣ್ಣ ಮಕ್ಕಳಿಗೆ ವೈರಸ್‌ ಬೇಗ ತಗುಲುತ್ತದೆಂಬ ಕೆಲವು ಸುದ್ದಿ ಕೇಳಿ ಆತಂಕಗೊಂಡೆ. ಇದು ನಿಜವೇ?

ಮಕ್ಕಳನ್ನು ಈ ವೇಳೆ ರಕ್ಷಿಸುವ ಬಗೆ ಹೇಗೆ? ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಾಪಾಡುವುದು ಹೇಗೆ? ತಿಳಿಸಿ.

ಮೊದಲನೆಯದಾಗಿ, ನೀವು ಗಾಬರಿಗೊಳ್ಳುವ ಅಗತ್ಯವಿಲ್ಲ. ಮಕ್ಕಳಿಗೆ ರೋನಿರೋಧಕ ಶಕ್ತಿ ಗರ್ಭಿಣಿಯರಲ್ಲಿ ಕೊನೆಯ ತ್ತೈಮಾಸಿಕದಲ್ಲಿ ಮಾಸದ ಮೂಲಕ ಈ ರೋಗನಿರೋಧಕ ಶಕ್ತಿ ಬರುತ್ತೆ. ಇದಕ್ಕೆ “ಪ್ಯಾಸಿವ್‌ ಆ್ಯಂಟಿಬಾಡಿ’ ಎಂದು ಹೇಳುತ್ತೇವೆ. ಇದಾದ ನಂತರ ಹೆರಿಗೆಯಾಗಿ ಒಂದು ಗಂಟೆಯೊಳಗೆ, ತಾಯಿ ಎದೆಹಾಲು ಕುಡಿಸಿದಾಗ, ಮತ್ತಷ್ಟು “ಪ್ಯಾಸಿವ್‌ ಆ್ಯಂಟಿಬಾಡಿ’ ಮಗುವಿಗೆ ಹೋಗುತ್ತೆ. ಇದು ಮಗುವಿಗೆ ಸಹಜವಾಗಿ ಸೃಷ್ಟಿಯಲ್ಲಿರುವ ವರದಾನ. ಇನ್ನು ಮಗು ಹುಟ್ಟಿದ ತಕ್ಷಣ, ಒಂದೂವರೆ ತಿಂಗಳು, ಎರಡೂವರೆ ತಿಂಗಳು… ಹೀಗೆ ಕೆಲವು ಅವಧಿಗಳಲ್ಲಿ ಲಸಿಕೆಗಳನ್ನು ಕೊಡಿಸುವುದರಿಂದ, ಮಗುವಿನಲ್ಲಿನ ರೋಗನಿರೋಧಕ ಶಕ್ತಿ ಇನ್ನಷ್ಟು ಉತ್ಪತ್ತಿಯಾಗುತ್ತದೆ. ಇದನ್ನು “ಆ್ಯಕ್ಟಿವ್‌ ಆ್ಯಂಟಿಬಾಡಿ’ ಎಂದು ಕರೆಯುತ್ತೇವೆ. ಒಂದು ವರ್ಷದ ಮಕ್ಕಳಿಗೆ ಕಾಯಿಲೆಗಳು ತಗುಲುವ ಸಾಧ್ಯತೆ ಇರುತ್ತೆ. ಈ ಚಿಕ್ಕಮಕ್ಕಳು ಮನೆಯಿಂದ ಆಚೆ ಹೋಗದೆ, ತಾಯಿಯ ಜೊತೆಗೇ ಇದ್ದರೆ, ಸುರಕ್ಷಿತ. ಮಗು ಹುಟ್ಟಿದ 1 ಗಂಟೆಯೊಳಗಾಗಿ, 6 ತಿಂಗಳವರೆಗೆ ಮಗುವಿಗೆ ಬರೀ ತಾಯಿಯ ಎದೆಹಾಲು ಕೊಡಬೇಕು. 6 ತಿಂಗಳ ನಂತರ 2 ವರ್ಷದ ವರೆಗೆ ಮನೆಯಲ್ಲಿಯೇ ತಯಾರಿಸಿದ ಪೂರಕ ಆಹಾರದ ಜೊತೆಗೆ, ತಾಯಿಯ ಎದೆಹಾಲು ಕೊಡಬೇಕು. ಇದರಿಂದ ಆಹಾರದಲ್ಲಿನ ಸಸಾರಜನಕ ಮಗುವಿನಲ್ಲಿ ರೋಗನಿರೋಧ ಶಕ್ತಿ ಹೆಚ್ಚುವಂತೆ ಮಾಡುತ್ತೆ. 5 ವರ್ಷದೊಳಗಿನ ಮಕ್ಕಳಿಗೆ ಸಹಜವಾಗಿ ವರ್ಷದಲ್ಲಿ 7-8 ಸಲ ವೈರಾಣು ಸೋಂಕುಗಳ ಕಾಯಿಲೆಗಳು ಬರುತ್ತವೆ. ಇದಕ್ಕೆ ಹೆದರಬೇಕಾಗಿಲ್ಲ. ಇದು ಕೂಡ ಪ್ರಕೃತಿ ನಿಯಮ. ಹೀಗೆ ವೈರಾಣುಗಳು ತಗುಲಿದಾಗ, ಮಗುವಿನೊಳಗಿನ ರೋಗನಿರೋಧಕ ಘಟಕಗಳಿಗೆ ಟ್ರೈನಿಂಗ್‌ ಸಿಕ್ಕಂತಾಗುತ್ತೆ. ಅವು ಹೋರಾಡುವುದನ್ನು ಕಲಿಯುತ್ತವೆ. ಪ್ರತಿ ಸಲ ಇನ್ಫ್ ಕ್ಷನ್‌ ಆದಾಗ, ರೋಗನಿರೋಧಕ ಶಕ್ತಿ ಉತ್ಪಾದಿಸುವ ಗ್ರಂಥಿಗಳು ಪ್ರಬಲವೇ ಆಗುತ್ತವೆ. ಇದರಿಂದ ಮಗುವಿಗೆ
ತೊಂದರೆಯಿಲ್ಲ. ಕೊರೊನಾ ವೈರಸ್‌ ಇರುವ ಈ ಸನ್ನಿವೇಶದಲ್ಲಿ ಶಿಶುಗಳನ್ನು ಆದಷ್ಟು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು. ಎದೆಹಾಲು ಕುಡಿಸುತ್ತಿರಬೇಕು.
ಮನೆಯಲ್ಲಿ ಯಾರಿಗೇ ಕೆಮ್ಮು- ಜ್ವರ ಬಂದರೆ, ಆ ವ್ಯಕ್ತಿ ಜೊತೆ ಮಗು ಸಂಪರ್ಕ ಇಟ್ಟುಕೊಳ್ಳಬಾರದು. ಕೋವಿಡ್ – 19 ಬಾರದಂತೆ ತಡೆಯಲು ಮುಂಚಿತ ಲಸಿಕೆ ಇಲ್ಲ. ಸ್ವಚ್ಛತೆ ಕಾಪಾಡಿಕೊಳ್ಳುವುದೇ ಇಲ್ಲಿ ಮುಖ್ಯ.
● ಡಾ. ಆಶಾ ಬೆನಕಪ್ಪ, ಮಕ್ಕಳ ತಜ್ಞೆ

? ಶಿವ, ಚಿತ್ರದುರ್ಗ
ಬಡವರಿಗೆ, ಸಂಕಷ್ಟದಲ್ಲಿರುವವರಿಗೆ ಉಚಿತ ಹಾಲು ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಸರ್ಕಾರ ಯೋಜಿಸಿದ ರೀತಿಯಲ್ಲಿ ಅದು ಸಮರ್ಪಕವಾಗಿ
ತಲುಪುತ್ತಿಲ್ಲ. ಅನೇಕ ಕಡೆಗಳಲ್ಲಿ ಸ್ವಂತ ಮನೆ ಇರುವವರು, ಧನಿಕರಿಗೆ ಈ ಹಾಲು ಹೋಗುತ್ತಿದೆ. ಬಡವರಿಗೆ ಸಿಗುತ್ತಿಲ್ಲ. ಇದನ್ನು ಯಾರಿಗೆ ಹೇಳುವುದು?

ಬಡವರು, ಕಾರ್ಮಿಕರು, ನಿರಾಶ್ರಿತರನ್ನು ಗುರುತಿಸಿ ಪ್ರತಿದಿನ ಹಾಲು ವಿತರಣೆ ಮಾಡಲಾಗುತ್ತಿದೆ. ಗುಂಪು ಸೇರ ಬಾರದು ಎಂಬ ಕಾರಣಕ್ಕೆ ಮನೆ ಮನೆಗೆ ತೆರಳಿ ಹಾಲು ಕೊಡ ಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಸಮಾಜ ಕಲ್ಯಾಣ, ಕಾರ್ಮಿಕ, ಶಿಕ್ಷಣ ಹಾಗೂ ಎಪಿಎಂಸಿ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಎಲ್ಲರೂ ಸೇರಿ ವ್ಯವಸ್ಥಿತವಾಗಿ ವಿತರಣೆ ಮಾಡುತ್ತಿದ್ದಾರೆ. ಹಾಲು
ತಲುಪದ ಬಡವರು ಸಮಿತಿ ಯವರನ್ನು ಸಂಪರ್ಕಿಸಿದರೆ ಖಂಡಿತವಾಗಿ ಕೊಡಲಾಗುತ್ತದೆ.
● ಡಾ. ಕೃಷ್ಣಪ್ಪ, ಉಪನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಚಿತ್ರದುರ್ಗ

ಮಣಿಕಂಠ ಹಿರೇಮಠ, ಚವಡಾಪೂರ, ಬಾಗಲಕೋಟೆ
ನಮ್ಮ ಉತ್ತರ ಕರ್ನಾಟಕ ಭಾಗದ ಜನರು ಕಲ್ಲಗಂಡಿ, ತರಕಾರಿಗಳನ್ನು ಅಪಾರವಾಗಿ ಬೆಳೆದಿದ್ದಾರೆ. ಈಗ ಅವೆಲ್ಲ ವ್ಯಾಪಾರವಿಲ್ಲದೆ ಕೊಳೆತು ಹೋಗುತ್ತಿವೆ.
ನಾವು ಜೀವನ ನಡೆಸುವುದು ಹೇಗೆ?

“ಉದಯವಾಣಿ’ಯು ರೈತರಿಗೆ ನೆರವಾಗಲೆಂದೇ, “ರೈತ ಸೇತು’ ಆರಂಭಿಸಿದೆ. ಪತ್ರಿಕೆಯ ಪ್ರತಿ ಜಿಲ್ಲಾಪುಟಗಳಲ್ಲಿ ಇದು ಮೂಡಿಬರುತ್ತದೆ. ಬಾಗಲಕೋಟೆ ಜಿಲ್ಲೆಯ ರೈತಸೇತು ವಾಟ್ಸಾಪ್‌ ಸಂಖ್ಯೆ- 9611883932. ಇಲ್ಲಿಗೆ ನಿಮ್ಮ ಬೆಳೆ ವಿವರ ದಾಖಲಿಸಿ, ಗ್ರಾಹಕರಿಂದ ಪ್ರಯೋಜನ ಪಡೆದುಕೊಳ್ಳಬಹುದು.

ಲಾಕ್‌ ಡೌನ್‌ ಅವಧಿಯಲ್ಲಿ ಏನೇ ಸಮಸ್ಯೆ, ಸಂದೇಹಗಳಿದ್ದರೆ ಉದಯವಾಣಿ ಮೂಲಕ ತಜ್ಞರಿಂದ ಉತ್ತರ ಪಡೆಯಲು ನಮಗೆ ವಾಟ್ಸ್‌ಆ್ಯಪ್‌ ಮಾಡಿ. ಕಳುಹಿಸಬೇಕಾದ ವಾಟ್ಸ್‌ ಆ್ಯಪ್‌ ಸಂಖ್ಯೆ 8861196369

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.